ಬಿಜೆಪಿಗೆ ಚುನಾವಣೆ ಬಂದಾಗ ಮಾತ್ರ ಶ್ರೀರಾಮ ನೆನಪಾಗುತ್ತಾನೆ- ಎಸ್ಪಿ ಸಂಸದ

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ವಿಚಾರವಾಗಿ ಬಿಜೆಪಿಯನ್ನು ಕಿಡಿಕಾರಿದ ಸಮಾಜವಾದಿ ಪಕ್ಷದ ಸಂಸದ ಸದಸ್ಯ ಸುರೇಂದ್ರ ಸಿಂಗ್ ನಗರ ಬಿಜೆಪಿಗೆ ಚುನಾವಣೆ ಹತ್ತಿರ ಬಂದಾಗ ಮಾತ್ರ ಶ್ರೀರಾಮ ನೆನಪಾಗುತ್ತಾನೆ ಎಂದು ಟೀಕಿಸಿದರು.

Last Updated : Oct 7, 2018, 05:44 PM IST
ಬಿಜೆಪಿಗೆ ಚುನಾವಣೆ ಬಂದಾಗ ಮಾತ್ರ ಶ್ರೀರಾಮ ನೆನಪಾಗುತ್ತಾನೆ- ಎಸ್ಪಿ ಸಂಸದ  title=
Photo:ANI

ನವದೆಹಲಿ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ವಿಚಾರವಾಗಿ ಬಿಜೆಪಿಯನ್ನು ಕಿಡಿಕಾರಿದ ಸಮಾಜವಾದಿ ಪಕ್ಷದ ಸಂಸದ ಸುರೇಂದ್ರ ಸಿಂಗ್ ಬಿಜೆಪಿಗೆ ಚುನಾವಣೆ ಹತ್ತಿರ ಬಂದಾಗ ಮಾತ್ರ ಶ್ರೀರಾಮ ನೆನಪಾಗುತ್ತಾನೆ ಎಂದು ಟೀಕಿಸಿದ್ದಾರೆ.

ಎಎನ್ಐ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ  ಸುರೇಂದ್ರ ಸಿಂಗ್ "ಚುನಾವಣೆಗಳ ಕಾರಣ, ಪಕ್ಷಗಳು ಈಗ ಶ್ರೀರಾಮ್ ನನ್ನು ಬಳಸಿಕೊಳ್ಳುತ್ತವೆ. ಬಿಜೆಪಿ ಸರ್ಕಾರ ನಾಲ್ಕುವರೆ ವರ್ಷಗಳನ್ನು ಪೂರ್ಣಗೊಳಿಸಿದೆ. ರಾಜ್ಯ ಮತ್ತು ಕೇಂದ್ರದಲ್ಲಿ  ಬಿಜೆಪಿ ಅಧಿಕಾರಕ್ಕೆ ಬಂದಿದ್ದೆ ಆದಲ್ಲಿ ರಾಮ ಮಂದಿರವನ್ನು ನಿರ್ಮಿಸಲು ಭರವಸೆ ನೀಡಿದ್ದರು. ಆದರೆ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವಾಗ ಮಂದಿರದ ನೆನಪಾಗಿದೆ ಎಂದು ಸಿಂಗ್ ಹೇಳಿದರು.ಇನ್ನು ಮುಂದುವರೆದು ಬಿಜೆಪಿ ಸರ್ಕಾರವು ರಾಮ ಮಂದಿರವನ್ನು ಮತಗಳನ್ನು ಗಳಿಸುವ ಸಾಧನವಾಗಿ ಬಳಸಿಕೊಂಡಿದೆ ಎಂದು ಅವರು ಆರೋಪಿಸಿದರು.

ಸೆಪ್ಟೆಂಬರ್ 26 ರಂದು ಅಯೋಧ್ಯಾ ಭೂ ವಿವಾದ ಪ್ರಕರಣವನ್ನು ದೊಡ್ಡ ಸಂವಿಧಾನ ಪೀಠಕ್ಕೆ ಹಸ್ತಾಂತರಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿತು. ಮತ್ತು ಅಯೋಧ್ಯೆಯ ವಿವಾದವನ್ನು ಇದೇ ಅಕ್ಟೋಬರ್ 29 ರಿಂದ ವಿಚಾರಣೆ ನಡೆಸಲಿದೆ ಎಂದು ಸುಪ್ರಿಂಕೋರ್ಟ್ ತಿಳಿಸಿದೆ. 

Trending News