High Cholesterol ನಿಂದ ಮುಕ್ತಿ ಪಡೆಯಬೇಕೆ, ಈ 5 ಬೇಳೆಕಾಳುಗಳು ನಿಮ್ಮ ಆಹಾರದಲ್ಲಿರಲಿ

Pulses For Bad Cholesterol: ಸಾಮಾನ್ಯವಾಗಿ ಬೇಳೆಕಾಳುಗಳನ್ನು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ, ಹೀಗಾಗಿ ಅವುಗಳನ್ನು ನಮ್ಮ ದೈನಂದಿನ ಆಹಾರದಲ್ಲಿ ವಿವಿಧ ರೀತಿಗಳಲ್ಲಿ ಸೇವಿಸಬಹುದು. 

Pulses For Bad Cholesterol: ಸಾಮಾನ್ಯವಾಗಿ ಬೇಳೆಕಾಳುಗಳನ್ನು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ, ಹೀಗಾಗಿ ಅವುಗಳನ್ನು ನಮ್ಮ ದೈನಂದಿನ ಆಹಾರದಲ್ಲಿ ವಿವಿಧ ರೀತಿಗಳಲ್ಲಿ ಸೇವಿಸಬಹುದು. ಪೌಷ್ಟಿಕಾಂಶದ ಮೌಲ್ಯದಿಂದಾಗಿ, ಬೇಳೆಕಾಳುಗಳಿಗೆ ಸಾಮಾನ್ಯವಾಗಿ ಸೂಪರ್ ಫುಡ್ ಸ್ಥಾನಮಾನವನ್ನು ನೀಡಲಾಗುತ್ತದೆ. ಸಾಮಾನ್ಯವಾಗಿ ಇದನ್ನು ಪ್ರೋಟೀನ್ ಅಗತ್ಯಗಳನ್ನು ಪೂರೈಸಲು ಸೇವಿಸಲಾಗುತ್ತದೆ, ಆದರೆ ಅದರ ಸೇವನೆಯಿಂದ ದೇಹವು ಸಾಕಷ್ಟು ಫೈಬರ್, ವಿಟಮಿನ್ಗಳು ಮತ್ತು ಖನಿಜಗಳನ್ನು ಪಡೆಯುತ್ತದೆ. ಇಂದು ನಾವು ನಿಮಗೆ 5 ಬೇಳೆಕಾಳುಗಳ ಮಾಹಿತಿಯನ್ನು ನೀಡುತ್ತಿದ್ದು, ಅವುಗಳ ಸೇವನೆಯಿಂದ ಕೊಲೆಸ್ಟ್ರಾಲ್ ಮಟ್ಟವು ಬಹಳ ಕಡಿಮೆಯಾಗುತ್ತದೆ ಮತ್ತು ತೂಕ ಇಳಿಕೆಯಲ್ಲಿಯೂ ಕೂಡ ಅವು ಸಹಕಾರಿಯಾಗಿವೆ.

 

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

 

ಇದನ್ನೂ ಓದಿ-Tips For Men: ನಿತ್ಯ ಈ 1 ಕೆಲಸ ಮಾಡಿ 40ರ ಬಳಿಕವೂ ಪುರುಷರು ಯಂಗ್ ಹಾಗೂ ಫಿಟ್ ಆಗಿ ಕಾಣಿಸಿಕೊಳ್ಳಬಹುದು

 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /5

1. ಹೆಸರು ಬೇಳೆಯನ್ನು ನೀವು ಒಂದು ಬೆಲೆಯ ರೂಪದಲ್ಲಿ ಅಥವಾ ಮೊಳಕೆಯೊಡೆದ ಬೇಳೆಯ ರೂಪದಲ್ಲಿ ಸೇವಿಸಬಹುದು. ಹೆಸರು ಬೇಳೆಯಲ್ಲಿ ಪೋಷಕಾಂಶಗಳ ಕೊರತೆಯಿಲ್ಲ, ಜೊತೆಗೆ ಇದರಲ್ಲಿ ಕಡಿಮೆ ಪ್ರಮಾಣದ ಕೊಬ್ಬು ಮತ್ತು ಕ್ಯಾಲೋರಿಗಳು ಕಂಡುಬರುತ್ತವೆ, ಇದು ಕೊಲೆಸ್ಟ್ರಾಲ್ ಮತ್ತು ತೂಕವನ್ನು ಇಳಿಕೆ ಮಾಡುತ್ತದೆ. ಹೀಗಾಗಿ ಇದನ್ನು ನಿಯಮಿತ ಆಹಾರದಲ್ಲಿ ಸೇರಿಸಬೇಕು.  

2 /5

2. ಚನ್ನಂಗಿ ಬೇಳೆ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ, ಭಾರತದಲ್ಲಿ ಜನರು ಇದನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಲು ಇಷ್ಟಪಡುತ್ತಾರೆ. ಇದರಲ್ಲಿರುವ ಪ್ರೋಟೀನ್ ಮತ್ತು ಡಯೆಟರಿ ಫೈಬರ್, ಕೊಲೆಸ್ಟ್ರಾಲ್ ಮತ್ತು ತೂಕವನ್ನು ಇಳಿಕೆ ಮಾಡಲು ಸಹಾಯ ಮಾಡುತ್ತವೆ. ಇದರೊಂದಿಗೆ ಇದರಲ್ಲಿರುವ ಕ್ಯಾಲ್ಸಿಯಂನಿಂದಲೂ ಮೂಳೆಗಳು ಗಟ್ಟಿಯಾಗುತ್ತವೆ.  

3 /5

3. ಮಡಿಕೆ ಕಾಳುಗಳನ್ನು ನೀವು ಸಾಮಾನ್ಯ ರೂಪದಲ್ಲಿ ಕೂಡ ಸೇವಿಸಬಹುದು, ಆದರೆ ಭಾರತದಲ್ಲಿ ಇದನ್ನು ಕಚೋರಿಗಳೊಂದಿಗೆ ಬೆರೆಸಿ ಹೆಚ್ಚಿನ ಪ್ರಮಾಣದಲ್ಲಿ ಸೇವಿಸಲಾಗುತ್ತದೆ, ಏಕೆಂದರೆ ಇದರ ರುಚಿ ಅತ್ಯುತ್ತಮವಾಗಿರುತ್ತದೆ. ಫೈಬರ್ ಜೊತೆಗೆ ಸತು ಮತ್ತು ವಿಟಮಿನ್ ಬಿ ಈ ಮೊಥ್ ಬೀನ್ ನಲ್ಲಿ ಕಂಡುಬರುತ್ತದೆ.  

4 /5

4. ಭಾರತದಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಸೇವಿಸಲ್ಪಡುವ ಬೇಳೆಕಾಳುಗಳ ಪಟ್ಟಿಯಲ್ಲಿ ಉದ್ದಿನ ಬೇಳೆ ಕೂಡ ಒಂದು, ಇದು ಕೊಲೆಸ್ಟ್ರಾಲ್ ಮತ್ತು ತೂಕ ಇಳಿಕೆಗೆ ಸಹಾಯ ಮಾಡುತ್ತದೆ, ಆದರೆ ದುರ್ಬಲ ರೋಗನಿರೋಧಕ ಶಕ್ತಿ ಹೊಂದಿರುವ ಜನರಿಗೆ ಇದು ಪ್ರಯೋಜನಕಾರಿಯಾಗಿದೆ.  

5 /5

5. ಕಾಬೂಲಿ ಕಡಲೆ - ಬೇಳೆಯ ರೂಪದಲ್ಲಿ ಇದು ಕಡಿಮೆ ಸೇವನೆಯಾದರೂ ಕೂಡ ಉಸುಳಿಯನ್ನು ತಯಾರಿಸಲು ಈ ಕಾಬೂಲಿ ಕಡಲೆ ಭಾರತದಲ್ಲಿ ಅತಿ ಹೆಚ್ಚು ಬಳಕೆಯಾಗುತ್ತದೆ. ಇದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ, ಆದರೆ, ಕಡಲೆ ಬೇಯಿಸುವಾಗ ಕನಿಷ್ಠ ಅಡುಗೆ ಎಣ್ಣೆಯನ್ನು ಬಳಸಿ, ಇಲ್ಲದಿದ್ದರೆ ಕೊಲೆಸ್ಟ್ರಾಲ್ ಕಡಿಮೆಯಾಗುವ ಬದಲು ಹೆಚ್ಚಾಗುತ್ತದೆ ಎಂಬುದನ್ನು ನೆನಪಿನಲ್ಲಿಡಿ.