Male Fitness Tips: ಪ್ರತಿಯೊಬ್ಬ ಪುರುಷ ಸದಾ ಫಿಟ್ ಆಗಿರಬೇಕೆಂದು ಬಯಸುತ್ತಾನೆ. ಆದರೆ ಫಿಟ್ನೆಸ್ ಎಂದರೆ ಕೇವಲ ಜಿಮ್‌ಗೆ ಹೋಗಿ ದೇಹವನ್ನು ದಂಡಿಸುವುದು ಎಂದಲ್ಲ, ಫಿಟ್‌ನೆಸ್ ಎಂದರೆ ಬೊಜ್ಜಿನಿಂದ ದೂರವಿರುವುದು. ಸದಾ ಫಿಟ್ ಆಗಿರುವುದು ನಮ್ಮನ್ನು ಮಾನಸಿಕವಾಗಿ ಮತ್ತು ದೈಹಿಕವಾಗಿ ಸದೃಢವಾಗಿರಿಸುತ್ತದೆ. ಇದರೊಂದಿಗೆ ನಾವು ರೋಗಗಳಿಂದ ಪಾರಾಗಬಹುದು. ಕಾಯಿಲೆಗಳಿಂದ ದೂರ ಇರುವುದು ಅಂದರೆ ನಮ್ಮನ್ನು ನಾವು ಯಂಗ್ ಆಗಿ ಇರಿಸಿದಂತೆ.
ಫಿಟ್ ಆಗಿರಲು ಪುರುಷರು ಏನು ಮಾಡಬೇಕು
ಆಹಾರ
ಫಿಟ್‌ನೆಸ್‌ಗಾಗಿ ನಿಮ್ಮ ಆಹಾರದ ಬಗ್ಗೆ ಗಮನ ಹರಿಸುವುದು ತುಂಬಾ ಮುಖ್ಯ.ಇದಕ್ಕಾಗಿ ನೀವು ವ್ಯಾಯಾಮ ಮತ್ತು ಆಹಾರದ ನಡುವೆ ಸರಿಯಾದ ಸಮತೋಲನವನ್ನು ಕಾಯ್ದುಕೊಳ್ಳಬೇಕು. ಹೀಗಾಗಿ, ದೇಹಕ್ಕೆ ಸಾಕಷ್ಟು ಪೋಷಣೆ ನೀಡುವ ಆಹಾರವನ್ನು ನಾವು ನಮ್ಮ ಆಹಾರದಲ್ಲಿ ಸೇರಿಸಿಕೊಳ್ಳಬೇಕು. ಇದರಿಂದ ದೇಹ ಸಂಪೂರ್ಣ ಪೋಷಣೆ ಪಡೆಯುತ್ತದೆ. ಇದಕ್ಕಾಗಿ ಪುರುಷರು ತಮ್ಮ ಆಹಾರದಲ್ಲಿ ಹಸಿರು ತರಕಾರಿಗಳು, ಧಾನ್ಯಗಳು ಮತ್ತು ಕಡಿಮೆ ಕೊಬ್ಬಿನ ಪದಾರ್ಥಗಳನ್ನು ಸೇವಿಸಬೇಕು.
ವ್ಯಾಯಾಮ
ವ್ಯಾಯಾಮವು ವ್ಯಕ್ತಿಯನ್ನು ಅನೇಕ ರೋಗಗಳಿಂದ ದೂರವಿಡುತ್ತದೆ. ನಿಯಮಿತ ವ್ಯಾಯಾಮ ಮಾಡುವುದರಿಂದ ಹೃದ್ರೋಗ ಮತ್ತು ಅನೇಕ ಕಾಯಿಲೆಗಳನ್ನು ದೂರವಿಡಬಹುದು. ಇದಲ್ಲದೆ, ವ್ಯಾಯಾಮವು ಮಧುಮೇಹ, ಕರುಳಿನ ಕ್ಯಾನ್ಸರ್ ಮತ್ತು ಒತ್ತಡವನ್ನು ಸಹ ನಿಯಂತ್ರಿಸುತ್ತದೆ. ಆದ್ದರಿಂದ, ಪುರುಷರು ಪ್ರತಿದಿನ ವ್ಯಾಯಾಮಕ್ಕೆ ಸಮಯ ಮೀಸಲಿಡಬೇಕು.
ಇದನ್ನೂ ಓದಿ-Cholesterol ಸೇರಿದಂತೆ ಇತರ ಕಾಯಿಲೆಗಳಿಗೆ ಬೈ ಬೈ ಹೇಳಲು ಇಂದಿನಿಂದಲೇ ಈ ಹಸಿರು ಪಾನೀಯ ಸೇವನೆ ಆರಂಭಿಸಿ
ಉತ್ತಮ ಮನಸ್ಥಿತಿ ಕಾಯ್ದುಕೊಳ್ಳಿ
ನೀವು ನಿಮ್ಮನ್ನು ಆರೋಗ್ಯವಾಗಿ ಮತ್ತು ಫಿಟ್ ಆಗಿ ಇರಿಸಿಕೊಳ್ಳಲು ಬಯಸಿದರೆ ನೀವು ಯಾವಾಗಲೂ ಒತ್ತಡದಿಂದ ಮುಕ್ತವಾಗಿರಬೇಕು. ಒತ್ತಡ ಮುಕ್ತವಾಗಿರಲು, ನೀವು ಜಿಮ್‌ಗೆ ಹೋಗಿ ವರ್ಕೌಟ್ ಮಾಡಬಹುದು. ಅಥವಾ 30 ನಿಮಿಷಗಳ ಕಾಲ ವಾಕ್ ಮಾಡುವ ಮೂಲಕ ನೀವು ಒತ್ತಡದಿಂದ ಮುಕ್ತರಾಗಬಹುದು. ದೈಹಿಕ ಚಟುವಟಿಕೆಗಳ ಮೂಲಕ ಮನಸ್ಥಿತಿ ಉತ್ತಮವಾಗಿರುತ್ತದೆ ಮತ್ತು ನೀವು ಯಾವಾಗಲೂ ಒತ್ತಡದಿಂದ ಮುಕ್ತರಾಗುತ್ತೀರಿ.
ಇದನ್ನೂ ಓದಿ-Purple Cabbage: ಕ್ಯಾನ್ಸರ್ ಹಾಗೂ ಡಯಾಬಿಟಿಸ್ ನಂತಹ ಮಾರಕ ಕಾಯಿಲೆಗಳಿಂದ ರಕ್ಷಿಸುತ್ತದೆ ಈ ತರಕಾರಿ
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.