ಪೋಸ್ಟ್‌ ಗ್ರಾಜುಯೇಟ್‌ ವರ್ಕ್‌ ಪರ್ಮಿಟ್‌ ವಿಸ್ತರಿಸಲು ಕೆನಡಾ ನಿರ್ಧಾರ

ಈ ವಿಶೇಷ ಕ್ರಮವು ಆರ್ಥಿಕತೆಯ ಬೆಳವಣಿಗೆಯ ಸಾಮರ್ಥ್ಯವನ್ನು ಪ್ರತಿನಿಧಿಸುತ್ತದೆ ಮತ್ತು ಹೆಚ್ಚಿನ ಪದವೀಧರರು ಕೆನಡಾವನ್ನು ತಮ್ಮ ಶಾಶ್ವತ ನೆಲೆಯನ್ನಾಗಿ ಪರಿಗಣಿಸಲು ಸಹಾಯ ಮಾಡಿಕೊಡುತ್ತದೆ ಎಂದು ಅವರು ಹೇಳಿದರು.  

Written by - Bhavishya Shetty | Last Updated : Jun 25, 2022, 04:14 PM IST
  • ಪೋಸ್ಟ್‌ ಗ್ರಾಜುಯೇಟ್‌ ವರ್ಕ್‌ ಪರ್ಮಿಟ್‌ ವಿಸ್ತರಣೆ
  • ಯೋಜನೆ ಜಾರಿಗೊಳಿಸಲು ಚಿಂತನೆ ನಡೆಸಿದ ಕೆನಡಾ ಸರ್ಕಾರ
  • 18 ತಿಂಗಳ ಹೆಚ್ಚುವರಿ ತೆರೆದ ಕೆಲಸದ ಪರವಾನಗಿ ಸ್ವೀಕರಿಸಬಹುದು
ಪೋಸ್ಟ್‌ ಗ್ರಾಜುಯೇಟ್‌ ವರ್ಕ್‌ ಪರ್ಮಿಟ್‌ ವಿಸ್ತರಿಸಲು ಕೆನಡಾ ನಿರ್ಧಾರ title=
Canada

ಅಂತಾರಾಷ್ಟ್ರೀಯ ಪದವೀಧರರಿಗೆ ಪೋಸ್ಟ್‌ ಗ್ರಾಜುಯೇಟ್‌ ವರ್ಕ್‌ ಪರ್ಮಿಟ್‌ ವಿಸ್ತರಣೆ ಮಾಡಲು ಕೆನಡಾ ಸರ್ಕಾರ ಚಿಂತನೆ ನಡೆಸಿದೆ. ಸೆಪ್ಟೆಂಬರ್ 20, 2021 ಮತ್ತು ಡಿಸೆಂಬರ್ 31, 2022 ರ ನಡುವೆ ಅವಧಿ ಮುಗಿದ ಅಥವಾ ಮುಕ್ತಾಯಗೊಳ್ಳುವ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳಿಗೆ ಈ ಹೊಸ ಯೋಜನೆ ಸಹಕಾರಿಯಾಗಲಿವೆ. ಈ ವಿದ್ಯಾರ್ಥಿಗಳು 18 ತಿಂಗಳ ಹೆಚ್ಚುವರಿ ತೆರೆದ ಕೆಲಸದ ಪರವಾನಗಿಯನ್ನು ಸ್ವೀಕರಿಸಬಹುದು. 

ಇದನ್ನೂ ಓದಿ: Shocking: ಕೇವಲ 3x4 ಸೆಂ.ಮಿ ಗಾತ್ರದ ಈ ಬಟ್ಟೆಯಿಂದ ನೀವು 100 ಎಲ್ಇಡಿ ಬಲ್ಬ್ ಗಳನ್ನು ಬೆಳಗಬಹುದು

"ಅಂತಾರಾಷ್ಟ್ರೀಯ ವಿದ್ಯಾರ್ಥಿಗಳು 18 ತಿಂಗಳ ಹೆಚ್ಚುವರಿ ತೆರೆದ ಕೆಲಸದ ಪರವಾನಗಿಯನ್ನು ಪಡೆಯುತ್ತಾರೆ. ಅವರಿಗೆ ಕೆನಡಾದಲ್ಲಿ ಹೆಚ್ಚು ಕಾಲ ಉಳಿಯಲು ಅವಕಾಶವನ್ನು ನೀಡುತ್ತದೆ ಮತ್ತು ಜಾಗತಿಕ ಪ್ರತಿಭೆಗಳನ್ನು ಆಕರ್ಷಿಸಲು ನಮಗೆ ಅವಕಾಶ ನೀಡುವ ಮೂಲಕ ವ್ಯಾಪಾರಗಳಿಗೆ ಅಗತ್ಯವಿರುವ ಕೆಲಸಗಾರರನ್ನು ಹುಡುಕಲು ಸಹಾಯ ಮಾಡುತ್ತದೆ" ಎಂದು ಕೆನಡಾದ ಇಮಿಗ್ರೇಶನ್‌ ಸಚಿವ ಸೀನ್ ಫ್ರೇಸರ್ ಟ್ವೀಟ್ ಮಾಡಿದ್ದಾರೆ.

ಈ ವಿಶೇಷ ಕ್ರಮವು ಆರ್ಥಿಕತೆಯ ಬೆಳವಣಿಗೆಯ ಸಾಮರ್ಥ್ಯವನ್ನು ಪ್ರತಿನಿಧಿಸುತ್ತದೆ ಮತ್ತು ಹೆಚ್ಚಿನ ಪದವೀಧರರು ಕೆನಡಾವನ್ನು ತಮ್ಮ ಶಾಶ್ವತ ನೆಲೆಯನ್ನಾಗಿ ಪರಿಗಣಿಸಲು ಸಹಾಯ ಮಾಡಿಕೊಡುತ್ತದೆ ಎಂದು ಅವರು ಹೇಳಿದರು.

ಕೊರೊನಾ ಸಾಂಕ್ರಾಮಿಕ ಸಮಯದಲ್ಲಿ ದೇಶವು ಮೊದಲು ತಾತ್ಕಾಲಿಕ ಸಾರ್ವಜನಿಕ ನೀತಿ(ಟೆಂಪರರಿ ಪಬ್ಲಿಕ್‌ ಪಾಲಿಸಿ)ಯನ್ನು ಪರಿಚಯಿಸಿತು. ಇದು ಕೆಲವು ಪದವೀಧರರಿಗೆ ಕೆನಡಾದಲ್ಲಿ ತಮ್ಮ ನೆಲೆಯನ್ನು ವಿಸ್ತರಿಸಲು ಅವಕಾಶ ಮಾಡಿಕೊಟ್ಟಿತು. ಈ ಪರವಾನಗಿಗಾಗಿ ಅರ್ಜಿ ಪ್ರಕ್ರಿಯೆಯ ವಿವರಗಳನ್ನು ಮುಂದಿನ ವಾರಗಳಲ್ಲಿ ಲಭ್ಯವಾಗುವಂತೆ ಮಾಡಲಾಗುತ್ತದೆ.

ಇದನ್ನೂ ಓದಿ: 'ಮಂಡ್ಯ ಜನರ ಹೋರಾಟಕ್ಕೆ ಸಿಕ್ಕ ಜಯ'..!

ಅಂತಾರಾಷ್ಟ್ರೀಯ ಪದವೀಧರರನ್ನು ಉಳಿಸಿಕೊಳ್ಳಲು ಕೆನಡಾವು ಅನೇಕ ಯೋಜನೆಗಳನ್ನು ಹಮ್ಮಿಕೊಂಡಿದೆ. ಕೊರೊನಾದಂತಹ ಸಾಂಕ್ರಾಮಿಕದ ಸಂದರ್ಭದಲ್ಲಿ ಕೆನಡಾವು ಅಂತಾರಾಷ್ಟ್ರೀಯ ವಿದ್ಯಾರ್ಥಿಗಳ ಅಗತ್ಯತೆಗಳಿಗೆ ಅನುಗುಣವಾಗಿ ತನ್ನ ಮಾರ್ಗವನ್ನು ಮುಂದುವರೆಸಿದೆ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News