German Officials learn Cricket: ಬೆಂಗಳೂರಿನಲ್ಲಿರುವ ಕೇರಳ ಮತ್ತು ಕರ್ನಾಟಕದ ಜರ್ಮನ್ ಕಾನ್ಸುಲ್ ಅಚಿಮ್ ಬುರ್ಕಾರ್ಟ್ ಎಂಬವರು ಅಪರೂಪದ ವಿಡಿಯೋವೊಂದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಈ ವಿಡಿಯೋ ಕಂಡ ನೆಟ್ಟಿಗರು ಖುಷಿಯಲ್ಲಿ ತೇಲಾಡಿದ್ದಾರೆ.
ಇದನ್ನೂ ಓದಿ: NRIಗಳಿಗಾಗಿ ICICI ಪರಿಚರಿಯಿಸಿದೆ ನೂತನ ಉತ್ಪನ್ನ: ಪ್ರಮುಖ ವೈಶಿಷ್ಟ್ಯಗಳನ್ನು ಪರಿಶೀಲಿಸಿ
ಈ ವಿಡಿಯೋದ ವಿಶೇಷತೆ ಏನೆಂದು ತಿಳಿದುಕೊಳ್ಳಲು ಉತ್ಸುಕರಾಗಿದ್ದೀರಾ? ಹಾಗಾದ್ರೆ ಈ ವರದಿ ಓದಿ. ಕಾನ್ಸುಲೇಟ್ನಲ್ಲಿರುವ ಜರ್ಮನ್ ಅಧಿಕಾರಿಗಳು ತಮ್ಮ ಭಾರತೀಯ ಸಹೋದ್ಯೋಗಿಳ ಜೊತೆ ಸೇರಿ ಕ್ರಿಕೆಟ್ ಆಡುತ್ತಿದ್ದಾರೆ. ಈ ಸಂದರ್ಭದಲ್ಲಿ ಭಾರತೀಯ ಅಧಿಕಾರಿಯೊಬ್ಬರು ಜರ್ಮನ್ ಅಧಿಕಾರಿಗಳಿಗೆ ಕ್ರಿಕೆಟ್ ಹೇಗೆ ಆಡಬೇಕೆಂದು ಹೇಳಿಕೊಡುತ್ತಿರುವುದನ್ನು ಕಾಣಬಹುದು. ಅಧಿಕಾರಿಗಳು ತಮ್ಮ ಊಟದ ವಿರಾಮದ ಸಮಯದಲ್ಲಿ ಕಚೇರಿಯೊಳಗೆ ಕ್ರಿಕೆಟ್ ಆಡುತ್ತಿರುವುದನ್ನು ಕಾಣಬಹುದು. ಇಬ್ಬರು ಭಾರತೀಯ ಉದ್ಯೋಗಿಗಳು ಜರ್ಮನ್ ಅಧಿಕಾರಿಗೆ ಬೌಲಿಂಗ್ ಮಾಡುತ್ತಿದ್ದಾರೆ.
ಈ ವಿಡಿಯೋ ನೋಡಿ:
During lunch break my Indian colleagues try to teach my German colleagues how to play #cricket Happy to report that the consulate is still intact 😅🙈 pic.twitter.com/6HmqWBjrAm
— Achim Burkart (@GermanCG_BLR) November 22, 2022
ಸದ್ಯ ಈ ವಿಡಿಯೋವನ್ನು 31 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಈ ವಿಡಿಯೋ ನಾನಾ ತರದಲ್ಲಿ ಕಮೆಂಟ್ ಗಳು ಬಂದಿವೆ.
ಈ ವಿಡಿಯೋಗೆ ಅಚಿಮ್ ಬುರ್ಕಾರ್ಟ್ ಹೀಗೆ ಶೀರ್ಷಿಕೆ ನೀಡಿದ್ದಾರೆ: "ಊಟದ ವಿರಾಮದ ಸಮಯದಲ್ಲಿ ನನ್ನ ಭಾರತೀಯ ಸಹೋದ್ಯೋಗಿಗಳು ಜರ್ಮನ್ ಸಹೋದ್ಯೋಗಿಗಳಿಗೆ ಕ್ರಿಕೆಟ್ ಹೇಗೆ ಆಡಬೇಕೆಂದು ಕಲಿಸಲು ಪ್ರಯತ್ನಿಸುತ್ತಿದ್ದಾರೆ. ಸಂತೋಷವಾಗಿದೆ" ಎಂದು ಬರೆದಿದ್ದಾರೆ.
ಈ ವಿಡಿಯೋಗೆ ವಿಭಿನ್ನ ರೀತಿಯ ಕಮೆಂಟ್ ಗಳು ಬಂದಿದ್ದು, “ಇದು ರಾಷ್ಟ್ರಗಳನ್ನು ಸಂಪರ್ಕಿಸುವ ಶ್ರೇಷ್ಠ ಕ್ರೀಡೆಯಾಗಿದೆ. ಭಾರತ-ಜರ್ಮನಿ ಕ್ರಿಕೆಟ್ ಪಂದ್ಯವು ಪ್ರವಾಸೋದ್ಯಮ ಮತ್ತು 2 ದೇಶಗಳ ನಡುವಿನ ಸೌಹಾರ್ದ ಸಂಬಂಧಗಳನ್ನು ಹೆಚ್ಚಿಸಲು ಅದ್ಭುತವಾದ ಕಲ್ಪನೆಯಾಗಿದೆ” ಎಂದು ಸೋಶಿಯಲ್ ಮೀಡಿಯಾ ಬಳಕೆದಾರರು ಬರೆದಿದ್ದಾರೆ.
ಇದನ್ನೂ ಓದಿ: NRI News: ಕಳ್ಳತನ ತಡೆದ ಭಾರತೀಯ ಮೂಲದ ವ್ಯಕ್ತಿಗೆ ದುಬೈನಲ್ಲಿ ಅದ್ಧೂರಿ ಸನ್ಮಾನ
ಇನ್ನೊಬ್ಬರು, “ಜರ್ಮನಿಯಲ್ಲಿಯೂ ಕ್ರಿಕೆಟ್ ಪ್ರಾರಂಭಿಸಲು ಇದು ಉತ್ತಮ ಯೋಜನೆಯಾಗಿದೆ” ಎಂದು ಬರೆದುಕೊಂಡಿದ್ದಾರೆ. “ಈ ಸಂಸ್ಕೃತಿ ನೋಡಲು ಚೆನ್ನಾಗಿದೆ” ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ