ಕರೋನಾ ವಿರುದ್ಧ ಅಭೇದ್ಯ ರಕ್ಷಾಕವಚ ಒದಗಿಸಲಿವೆ ಈ 4 ಸೂಪರ್ ಹಣ್ಣುಗಳು

ವಿಟಮಿನ್ ಸಿಯುಕ್ತ ಟ್ಯಾಬ್ಲೆಟ್ ಬದಲು ನ್ಯಾಚುರಲ್ ಹಣ್ಣುಗಳನ್ನು (Fruits) ತಿನ್ನುವುದು ಈ ಹೊತ್ತಿನಲ್ಲಿ ಬಹಳ  ಉಪಯುಕ್ತ. ನಿಮ್ಮಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ 5 ಹಣ್ಣುಗಳ ಬಗ್ಗೆ ತಿಳಿದುಕೊಳ್ಳೋಣ..
 

ನವದೆಹಲಿ : ಕರೋನಾ (Coronavirus) ಸರ್ವವ್ಯಾಪಿಯಾಗುತ್ತಿರುವ  ಈ ಸನ್ನಿವೇಶದಲ್ಲಿ ನಮ್ಮ ಆಹಾರದ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು. ಯಾಕೆಂದರೆ ನೀವು ತಿನ್ನುವ ಆಹಾರದಲ್ಲಡಗಿದೆ ನಿಮ್ಮ ದೇಹಾರೋಗ್ಯ. ಕರೋನಾ ವಿರುದ್ದದ ಸಮರ ಗೆಲ್ಲಬೇಕಾದರೆ ನಿಮ್ಮ ಇಮ್ಯೂನಿಟಿ (Immunity) ಬಲಿಷ್ಠವಾಗಿರಲೇಬೇಕು. ಅಂದರೆ ನೀವು ಸಾಧ್ಯವಾದಷ್ಟು ಹೆಚ್ಚು ವಿಟಮಿನ್ ಸಿ (Vitamin C) ಯುಕ್ತ  ಆಹಾರ ತಿನ್ನಬೇಕು.  ನ್ಯೂಟ್ರಿಯಸ್ ಎಂಬ ಜರ್ನಲ್ ಮಾಡಿರುವ ಸ್ಟಡಿಯನ್ನು ನಂಬುವುದಾದರೆ, ಕರೋನಾದ ಗಂಭೀರ ರೋಗಿಗಳ ಶುಶ್ರೂಷೆಯಲ್ಲೂ ವಿಟಮಿನ್ ಸಿಯುಕ್ತ  ಆಹಾರಕ್ಕೆ ವಿಶೇಷ ಮನ್ನಣೆ ಇದೆ. ವಿಟಮಿನ್ ಸಿಯುಕ್ತ ಟ್ಯಾಬ್ಲೆಟ್ ಬದಲು ನ್ಯಾಚುರಲ್ ಹಣ್ಣುಗಳನ್ನು (Fruits) ತಿನ್ನುವುದು ಈ ಹೊತ್ತಿನಲ್ಲಿ ಬಹಳ  ಉಪಯುಕ್ತ. ನಿಮ್ಮಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ 5 ಹಣ್ಣುಗಳ ಬಗ್ಗೆ ತಿಳಿದುಕೊಳ್ಳೋಣ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /4

ವಿಟಮಿನ್ ಸಿಯ  ಅತ್ಯಂತ ಸಮೃದ್ಧ ಮೂಲ ನೆಲ್ಲಿಕಾಯಿ. ಕಿತ್ತಳೆಗಿಂತ 20 ಪಟ್ಟು ಅಧಿಕ ಪ್ರಮಾಣದ ವಿಟಮಿನ್ ಸಿ ನೆಲ್ಲಿಕಾಯಿಯಲ್ಲಿದೆ. ನೆಲ್ಲಿಕಾಯಿ ತಿಂದರೆ ಮೆಟಬಾಲಿಸಂ ಕೂಡಾ ಹೆಚ್ಚಾಗುತ್ತದೆ.  ಇದರಿಂದ ತೂಕ ಕೂಡಾ ಕಡಿಮೆಯಾಗುತ್ತದೆ. ಬೇಕಾದರೆ ದಿನಕ್ಕೆ ಒಂದು ನೆಲ್ಲಿಕಾಯಿ ತಿನ್ನಬಹುದು. ಅಥವಾ ನೆಲ್ಲಿಕಾಯಿ ಜ್ಯೂಸ್ ಮಾಡಿ ಕುಡಿಯಬಹುದು.

2 /4

ಮಧ್ಯಮಗಾತ್ರದ ಒಂದು ಕಿತ್ತಳೆಯಲ್ಲಿ 53.2 ಮಿಲಿ ಗ್ರಾಂ ವಿಟಮಿನ್ ಸಿ ಇರುತ್ತದೆ. ಇದು ನಮ್ಮಲ್ಲಿ ರೋಗ ನಿರೋಧಕತೆಯನ್ನು ಹೆಚ್ಚಿಸುತ್ತದೆ. ಶೀತ, ತಲೆನೋವಿನಿಂದಲೂ ನಮ್ಮನ್ನು ರಕ್ಷಿಸುತ್ತದೆ.

3 /4

ಕಿವಿ ಹಣ್ಣನ್ನು ನಿಮ್ಮ ಡಯಟ್ ನಲ್ಲಿ ಖಂಡಿತಾ ಇಟ್ಟುಕೊಳ್ಳಿ.  ಒಂದು ಕಿವಿ ಹಣ್ಣಿನ್ಲಲಿ 83 ಮಿಲಿಗ್ರಾಂ ವಿಟಮಿನ್ ಸಿ ಸಿಗುತ್ತದೆ. ಜೊತೆಗೆ ವಿಟಮಿನ್ ಕೆ ಮತ್ತು ವಿಟಮಿನ್ ಇ ಕೂಡಾ ಬೇಕಾದಷ್ಟು ಪ್ರಮಾಣದಲ್ಲಿ ಸಿಗುತ್ತವೆ. 

4 /4

ಅನಾನಸ್ ಪೋಷಕಾಂಶಗಳ ಪವರ್ ಹೌಸ್. ಇದರಲ್ಲಿ ವಿಟಮಿನ್ ಸಿ ಕೂಡಾ ಭರಪೂರವಾಗಿರುತ್ತದೆ. ಮ್ಯಾಂಗನೀಸ್ ಯಥೇಚ್ಚವಾಗಿರುತ್ತದೆ. ಕ್ಯಾಲರಿ ಕಡಿಮೆ ನೀಡುತ್ತದೆ.  ನಿಯಮಿತವಾಗಿ ಅನಾನಸ್ ತಿನ್ನುತ್ತಿದ್ದರೆ ಬ್ಯಾಕ್ಟೀರಿಯಾ ಮತ್ತು ವೈರಸ್ ನಿಂದ ಆಗುವ ಸೋಂಕು ತಡೆಯಬಹುದು.