ಝೀರೋ ಬ್ಯಾಲೆನ್ಸ್ ಸೇವಿಂಗ್ ಅಕೌಂಟ್ ಒಂದು ಬ್ಯಾಂಕ್ ಖಾತೆಯಾಗಿದ್ದು ಇದರಲ್ಲಿ ನೀವು ಕನಿಷ್ಠ ಬ್ಯಾಲೆನ್ಸ್ ಕಾಯುವ ಅವಶ್ಯಕತೆ ಇಲ್ಲ.
ನವದೆಹಲಿ: ಝೀರೋ ಬ್ಯಾಲೆನ್ಸ್ ಸೇವಿಂಗ್ ಅಕೌಂಟ್ ಒಂದು ಬ್ಯಾಂಕ್ ಖಾತೆಯಾಗಿದ್ದು ಇದರಲ್ಲಿ ನೀವು ಕನಿಷ್ಠ ಬ್ಯಾಲೆನ್ಸ್ ಕಾಯುವ ಅವಶ್ಯಕತೆ ಇಲ್ಲ. ಒಂದು ವೇಳೆ ನಿಮ್ಮ ಖಾತೆಯಲ್ಲಿ ಒಂದು ರೂಪಾಯಿಯೂ ಕೂಡ ಇಲ್ಲದಿದ್ದ ಸಂದರ್ಭದಲ್ಲಿಯೂ ಕೂಡ ನೀವು ಶುಲ್ಕ ಕಟ್ಟುವ ಅವಶ್ಯಕತೆ ಇಲ್ಲ. ಅಷ್ಟೇ ಅಲ್ಲ ನಿಮ್ಮ ಖಾತೆ ಕೂಡ ಡಿಆಕ್ಟಿವೇಟ್ ಆಗುವುದಿಲ್ಲ. ಹಾಗಾದರ ಬನ್ನಿ ಉತ್ತಮ ಬಡ್ಡಿ ನೀಡುವ 5 ಝೀರೋ ಬ್ಯಾಲೆನ್ಸ್ ಅಕೌಂಟ್ ಕುರಿತು ಅರಿಯೋಣ ಬನ್ನಿ.
ಇಂದಿಗೂ ಕೂಡ ಹಲವು ಬ್ಯಾಂಕ್ ಗಳಿದ್ದು , ಇವುಗಳಲ್ಲಿ ನೀವು ಉಳಿತಾಯ ಖಾತೆ ಹೊಂದಿದ್ದರೆ, ತಿಂಗಳಿಗೆ 10 ಸಾವಿರ ರೂ. ಮಿನಿಮಮ್ ಬ್ಯಾಲೆನ್ಸ್ ಹೊಂದುವ ಅವಶ್ಯಕತೆ ಇದೆ. ಆದರೆ, ದೇಶದ ಉಳಿದ ಹಲವು ಬ್ಯಾಂಕ್ ಗಳು ಝೀರೋ ಬ್ಯಾಲೆನ್ಸ್ ಸೇವಿಂಗ್ ಅಕೌಂಟ್ ಸೌಲಭ್ಯ ಕೂಡ ನೀಡುತ್ತವೆ. ಖಾತೆ ತೆರೆಯುವ ಮೊದಲು ಈ ಖಾತೆಗಳ ಲಿಸ್ಟ್ ಚೆಕ್ ಮಾಡಿ.
ಈ ಬ್ಯಾಂಕ್ ನಲ್ಲಿ ಝೀರೋ ಬ್ಯಾಲೆನ್ಸ್ ಅಕೌಂಟ್ ಹೊಂದಿದವರಿಗೆ ಎಲ್ಲ ಸೌಲಭ್ಯಗಳು ಉಚಿತ ಸಿಗುತ್ತವೆ. ಪ್ರಸ್ತುತ ಈ ಬ್ಯಾಂಕ್ ನಲ್ಲಿ ಝೀರೋ ಬ್ಯಾಲೆನ್ಸ್ ಅಕೌಂಟ್ ಹೊಂದಿದವರಿಗೆ ವಾರ್ಷಿಕ ಶೇ. 6 ರಿಂದ ಶೇ.7 ರಷ್ಟು ಬಡ್ಡಿ ಸಿಗುತ್ತದೆ. ಎಲ್ಲ ಆವಶ್ಯಕ ದಾಖಲೆಗಳೊಂದಿಗೆ ನೀವು ಹತ್ತಿರದ ಬ್ರಾಂಚ್ ಗೆ ಭೇಟಿ ನೀಡಿ ಈ ಬ್ಯಾಂಕ್ ನಲ್ಲಿ ಖಾತೆಯನ್ನು ತೆರೆಯಬಹುದಾಗಿದೆ.
SBI ನ ಈ ಖಾತೆ ನೀವು KYC ದಾಖಲೆಯನ್ನು ನೀಡುವ ಮೂಲಕ ತೆರೆಯಬಹುದು. ಈ ಖಾತೆಯಲ್ಲಿ ನಿಮಗೆ ವಾರ್ಷಿಕವಾಗಿ ಶೇ.2.75 ರಷ್ಟು ಬಡ್ಡಿ ಸಿಗುತ್ತದೆ. ಇದಲ್ಲದೆ ಇದರಲ್ಲಿ ರುಪೇ ATM ಕಮ್ ಡೆಬಿಟ್ ಕಾರ್ಡ್ ಸೌಲಭ್ಯ ಕೂಡ ಸಿಗುತ್ತದೆ. ಇದರಲ್ಲಿ ಪ್ರತಿ ತಿಂಗಳು SBI ATM ಅಥವಾ ಇತರೆ ಬ್ಯಾಂಕ್ ಗಳ ATM ನಿಂದ 4 ಕ್ಯಾಶ್ ವಿಥ್ ಡ್ರಾವಲ್ ಉಚಿತ ಸಿಗುತ್ತವೆ.
ಇಂಡಸ್ ಇಂಡ್ ಬ್ಯಾಂಕ್ ನ ಸೇವಿಂಗ್ಸ್ ಅಕೌಂಟ್ ನಲ್ಲಿ ನಿಮಗೆ ವಾರ್ಷಿಕ ಶೇ.4 ರಿಂದ ಶೇ.6 ರಷ್ಟು ಬಡ್ಡಿ ಸಿಗುತ್ತದೆ. ಇದರ ಜೊತೆಗೆ ಇಂಟರ್ನೆಟ್ ಬ್ಯಾಂಕಿಂಗ್, ಅನ್ಲಿಮಿಟೆಡ್ ATM ಟ್ರಾನ್ಸಾಕ್ಶನ್ ಸೌಲಭ್ಯ ಕೂಡ ಸಿಗುತ್ತದೆ. ಆನ್ಲೈನ್ ನಲ್ಲಿ ಅಪ್ಪ್ಲಿಕೆಶನ್ ಸಲ್ಲಿಸುವ ಮೂಲಕ ಕೂಡ ನೀವು ಈ ಖಾತೆಯನ್ನು ತೆರೆಯಬಹುದು.
ಕೊಟಕ್ ಬ್ಯಾಂಕ್ ನ ಈ ಖಾತೆಯನ್ನು ನೀವು ಡಿಜಿಟಲ್ ಬ್ಯಾಂಕಿಂಗ್ ಮೂಲಕ ತೆರೆಯಬಹುದಾಗಿದೆ. ಇದರಲ್ಲಿ ಮಿನಿಮಮ್ ಬ್ಯಾಲೆನ್ಸ್ ಹೊಂದುವ ಯಾವುದೇ ಅವಶ್ಯಕತೆ ಇಲ್ಲ. ಇದರಲ್ಲಿ ನಿಮಗೆ 811 ವರ್ಚ್ಯುವಲ್ ಡೆಬಿಟ್ ಕಾರ್ಡ್ ಸಿಗುತ್ತದೆ. ಆನ್ಲೈನ್ ಶಾಪಿಂಗ್ ವೇಳೆ ನೀವು ಇದರ ಬಳಕೆ ಮಾಡಬಹುದು. ಈ ಬ್ಯಾಂಕ್ ಖಾತೆಯಲ್ಲಿ ನಿಮಗೆ ಶೇ.4 ರಷ್ಟು ಬಡ್ಡಿ ಸಿಗುತ್ತದೆ.
HDFC ಬ್ಯಾಂಕ್ ನಲ್ಲಿ ನೀವು ಬೇಸಿಕ್ ಸೇವಿಂಗ್ಸ್ ಬ್ಯಾಂಕ್ ಖಾತೆಯನ್ನು ತೆರೆಯಬಹುದು. ಇದರಲ್ಲಿಯೂ ಕೂಡ ನೀವು ಮಿನಿಮಮ್ ಬ್ಯಾಲೆನ್ಸ್ ಹೊಂದುವ ಅವಶ್ಯಕತೆ ಇಲ್ಲ. ಈ ಖಾತೆಯಲ್ಲಿ ನಿಮಗೆ ವಾರ್ಷಿಕ ಶೇ.3 ರಿಂದ ಶೇ.3.5ರಷ್ಟು ಬಡ್ಡಿ ಸಿಗುತ್ತದೆ. ಖಾತೆದಾರರಿಗೆ ಏಟಿಎಂ ಕಂ ಡೆಬಿಟ್ ಕಾರ್ಡ್, ಉಚಿತ ಪಾಸ್ಬುಕ್, ಫ್ರೀ ಡಿಪಾಜಿಟ್, ವಿಥ್ ಡ್ರಾವಲ್ ಹಾಗೂ ಚೆಕ್ ಬುಕ್, ಇ-ಮೇಲ್ ಸ್ಟೇಟ್ಮೆಂಟ್, ಡಿಮಾಂಡ್ ಡ್ರಾಫ್ಟ್ ಗಳಂತಹ ಹಲವು ಸೌಕರ್ಯಗಳು ಸಿಗುತ್ತವೆ.