ಶನಿದೇವನು 2025ರ ಮಾರ್ಚ್ 29ರಂದು ಕುಂಭ ರಾಶಿಯಿಂದ ಮೀನ ರಾಶಿಗೆ ತನ್ನ ರಾಶಿ ಪರಿವರ್ತನೆ ಮಾಡುವ ಮೂಲಕ ಎರಡು ರಾಶಿಯವರ ಜಾತಕದಲ್ಲಿ ಶನಿಯ ದೈಯ್ಯಾ ಹಾಗೂ ಒಂದು ರಾಶಿಯವರ ಜಾತಕದಲ್ಲಿ ಸಾಡೇಸಾತಿ ಮುಕ್ತವಾಗಲಿದೆ.
ಬೆಂಗಳೂರು : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶನಿಯು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಬರಲು ಸುಮಾರು ಎರಡೂವರೆ ವರ್ಷ ಬೇಕಾಗುತ್ತದೆ . ಪ್ರಸ್ತುತ ಕುಂಭ ರಾಶಿಯಲ್ಲಿರುವ ಶನಿಯು ಹೊಸ ವರ್ಷದಲ್ಲಿ ಮೀನ ರಾಶಿಯನ್ನು ಪ್ರವೇಶಿಸುತ್ತಾನೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಶನಿದೇವನು ರಾಶಿಯನ್ನು ಬದಲಾಯಿಸಿದಾಗ, ಕೆಲವು ರಾಶಿಯವರಿಗೆ ಶನಿ ಧೈಯ್ಯಾ ಅಥವಾ ಎರಡೂವರೆ ವರ್ಷದ ಶನಿ ದೆಸೆ ಆರಂಭವಾಗುತ್ತದೆ. ಇನ್ನು ಕೆಲವು ರಾಶಿಯವರಿಗೆ ಶನಿ ಸಾಡೇ ಸಾತಿ ಅಥವಾ ಏಳೂವರೆ ವರ್ಷದ ಶನಿ ದೆಸೆ ಶುರುವಾಗುತ್ತದೆ.
ಯಾರ ಜೀವನದಲ್ಲಿ ಶನಿ ದೆಸೆ ಆರಂಭವಾಗುತ್ತದೆಯೋ ಅಲ್ಲಿ ಕಷ್ಟ-ನಷ್ಟ ನೋವುಗಳು ಕೂಡಾ ಆರಂಭ ಎಂದೇ ಹೇಳಲಾಗುತ್ತದೆ.ಈ ಬಾರಿ ಶನಿ ಸಂಕ್ರಮಣದ ನಂತರ ಕೆಲವು ರಾಶಿಗಳು ಶನಿ ಮಹಾ ದೆಸೆಯಿಂದ ಸಂಪೂರ್ಣ ಮುಕ್ತಿ ಪಡೆಯಲಿದೆ.
ಶನಿದೇವನು 2025ರ ಮಾರ್ಚ್ 29ರಂದು ಕುಂಭ ರಾಶಿಯಿಂದ ಮೀನ ರಾಶಿಗೆ ತನ್ನ ರಾಶಿ ಪರಿವರ್ತನೆ ಮಾಡುವ ಮೂಲಕ ಎರಡು ರಾಶಿಯವರ ಜಾತಕದಲ್ಲಿ ಶನಿಯ ದೈಯ್ಯಾ ಹಾಗೂ ಒಂದು ರಾಶಿಯವರ ಜಾತಕದಲ್ಲಿ ಸಾಡೇಸಾತಿ ಮುಕ್ತವಾಗಲಿದೆ.
ಶನಿದೇವನು ಮೀನ ರಾಶಿಗೆ ಕಾಲಿಡುತ್ತಿದ್ದಂತೆ ಮಕರ ರಾಶಿಯವರಿಗೆ ಶನಿ ದೆಸೆಯಿಂದ ಸಂಪೂರ್ಣ ಮುಕ್ತಿ ಸಿಗಲಿದೆ. ಏಳೂವರೆ ವರ್ಷದಿಂದ ಅನುಭವಿಸುತ್ತಿದ್ದ ನೋವು ಕಷ್ಟಗಳಿಗೆ ತೆರೆ ಬೀಳಲಿದೆ. ಇದರ ಜೊತೆಗೆ ಕುಂಭ ರಾಶಿಯವರ ಜಾತಕದಲ್ಲಿ ಸಾಡೇಸಾತಿಯ ಅಂತಿಮ ಚರಣ ಆರಂಭವಾಗಲಿದೆ.
ಇನ್ನು ವೃಶ್ಚಿಕ ರಾಶಿಯವರ ಜಾತಕದಲ್ಲಿ ನಡೆಯುತ್ತಿದ್ದ ಶನಿ ಧೈಯ್ಯಾ ಅಥವಾ ಎರಡೂವರೆ ವರ್ಷದ ಶನಿ ದೆಸೆ ಕೂಡಾ ಅಂತ್ಯವಾಗಲಿದೆ. ಇದರೊಂದಿಗೆ ಇವರನ್ನು ಕಾಡುತ್ತಿದ್ದ ಆರೋಗ್ಯ ಸಮಸ್ಯೆಯಿಂದ ಮುಕ್ತಿ ಸಿಗಲಿದೆ.
ಹಾಗೆಯೇ ಮೀನ ರಾಶಿಯ ಜಾತಕದವರ ಮೇಲೆ ಮೊದಲನೇ ಹಂತ ಪ್ರಾರಂಭವಾಗಲಿದೆ. ಆ ಅರ್ಥದಲ್ಲಿ 2025 ರಲ್ಲಿ ಕುಂಭ ಮೀನ ಹಾಗೂ ಮೇಷ ರಾಶಿಯವರ ಮೇಲೆ ಶನಿಯ ಸಾಡೇಸಾತಿ ಪ್ರಭಾವ ಕಂಡು ಬರಲಿದೆ.
ಇನ್ನು ಶನಿದೇವನ ರಾಶಿ ಪರಿವರ್ತನೆಯಿಂದ ಮೇಷ ಮತ್ತು ಮೀನ ರಾಶಿಯವರಿಗೆ ಏಳೂವರೆ ಶನಿ ದೆಸೆ ಆರಂಭವಾದರೆ, ಸಿಂಹ ಮಾತು ಧನು ರಾಶಿಯವರಿಗೆ ಶನಿ ಧೈಯ್ಯಾ ಅಥವಾ ಎರಡೂವರೆ ವರ್ಷದ ಶನಿ ಕಾಟ ಆರಂಭವಾಗಲಿದೆ.
ಸೂಚನೆ : ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ.