7th Pay Commission : ಕೇಂದ್ರ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ : ನಿಮ್ಮ ಸಂಬಳದಲ್ಲಿ 8 ಸಾವಿರ ಹೆಚ್ಚಳ!

ಮಾಧ್ಯಮ ವರದಿಗಳ ಪ್ರಕಾರ, 7ನೇ ವೇತನ ಆಯೋಗದ ಅಡಿಯಲ್ಲಿ ಕೇಂದ್ರ ಸರ್ಕಾರಿ ನೌಕರರ ವೇತನವು ಆಗಸ್ಟ್‌ನಲ್ಲಿ ಹೆಚ್ಚಾಗುವ ನಿರೀಕ್ಷೆಯಿದೆ.

7th Pay Commission : ನೀವೇ ಅಥವಾ ನಿಮ್ಮ ಮನೆಯಲ್ಲಿ ಯಾವುದೇ ಕೇಂದ್ರ ಸರ್ಕಾರಿ ನೌಕರರಾಗಿದ್ದರೆ, ಈ ಸುದ್ದಿ ಇದಾಗಿದೆ. ಫಿಟ್‌ಮೆಂಟ್ ಅಂಶದ ಬದಲಾವಣೆಗಾಗಿ ಕಾತರದಿಂದ ಕಾಯುತ್ತಿರುವ ಸರ್ಕಾರಿ ನೌಕರರಿಗೆ ಕೊನೆಗೂ ಗುಡ್ ನ್ಯೂಸ್ ಸಿಕ್ಕಿದೆ. ಮಾಧ್ಯಮ ವರದಿಗಳ ಪ್ರಕಾರ, 7ನೇ ವೇತನ ಆಯೋಗದ ಅಡಿಯಲ್ಲಿ ಕೇಂದ್ರ ಸರ್ಕಾರಿ ನೌಕರರ ವೇತನವು ಆಗಸ್ಟ್‌ನಲ್ಲಿ ಹೆಚ್ಚಾಗುವ ನಿರೀಕ್ಷೆಯಿದೆ.

1 /4

ಫಿಟ್ಮೆಂಟ್ ಅಂಶವನ್ನು ಹೆಚ್ಚಿಸಲು ಪ್ಲಾನ್ : ಆಗಸ್ಟ್‌ನಲ್ಲಿ ನೌಕರರ ತುಟ್ಟಿಭತ್ಯೆ ಹೆಚ್ಚಾಗುವುದು ಬಹುತೇಕ ಖಚಿತವಾಗಿದೆ. ಸರ್ಕಾರದಿಂದ ಡಿಎ ಹೆಚ್ಚಳ ಮಾಡಿದ್ದು ಬಿಟ್ಟರೆ ನೌಕರರಿಗೆ ಮತ್ತೊಂದು ದೊಡ್ಡ ಕೊಡುಗೆ ನೀಡಬಹುದು. ನೌಕರರ ಫಿಟ್‌ಮೆಂಟ್ ಅಂಶವನ್ನು ಹೆಚ್ಚಿಸಲು ಸರ್ಕಾರ ಯೋಜಿಸುತ್ತಿದೆ ಎಂದು ನಿರೀಕ್ಷಿಸಲಾಗಿದೆ. ಫಿಟ್‌ಮೆಂಟ್ ಅಂಶ ಹೆಚ್ಚಿಸುವಂತೆ ಸರ್ಕಾರಿ ನೌಕರರು ಬಹಳ ದಿನಗಳಿಂದ ಆಗ್ರಹಿಸುತ್ತಿದ್ದಾರೆ.

2 /4

3.68 ಬಾರಿ ಮಾಡಲು ಸಿದ್ಧತೆ ನಡೆಸುತ್ತಿದೆ : ಪ್ರಸ್ತುತ, ಸರ್ಕಾರಿ ನೌಕರರಿಗೆ ಶೇ. 2.57 ರಷ್ಟು ಫಿಟ್‌ಮೆಂಟ್ ಅಂಶವನ್ನು ನೀಡಲಾಗುತ್ತಿದೆ. ಇದು ಆಗಸ್ಟ್ ತಿಂಗಳಲ್ಲಿ 3.68 ಪಟ್ಟು ಹೆಚ್ಚಾಗಲಿದೆ. ವಾಸ್ತವವಾಗಿ, ಕೇಂದ್ರ ನೌಕರರ ವೇತನವನ್ನು ನಿರ್ಧರಿಸುವಲ್ಲಿ ಫಿಟ್‌ಮೆಂಟ್ ಅಂಶವು ದೊಡ್ಡ ಪಾತ್ರವನ್ನು ವಹಿಸುತ್ತದೆ. ಹೆಚ್ಚಿನ ಫಿಟ್‌ಮೆಂಟ್ ಅಂಶ ಎಂದರೆ ನಿಮ್ಮ ಸಂಬಳವೂ ಹೆಚ್ಚಾಗಿರುತ್ತದೆ. ಉದ್ಯೋಗಿಗಳ ಮೂಲ ವೇತನವನ್ನು ಫಿಟ್‌ಮೆಂಟ್ ಅಂಶದ ಆಧಾರದ ಮೇಲೆ ಮಾತ್ರ ಹೆಚ್ಚಿಸಲಾಗುತ್ತದೆ.

3 /4

2017ರಲ್ಲಿ ಹೆಚ್ಚಿಸಲಾಗಿದೆ ಮೂಲ ವೇತನ : ಈ ಹಿಂದೆ 2017ರಲ್ಲಿ ಸರ್ಕಾರ ಮೂಲ ವೇತನ ಹೆಚ್ಚಿಸಿ ಎಂಟ್ರಿ ಲೆವೆಲ್ ನೌಕರರಿಗೆ ಸಂತಸ ತಂದಿತ್ತು. ಆದರೆ ನಂತರ ಅದರಲ್ಲಿ ಯಾವುದೇ ಬದಲಾವಣೆ ಮಾಡಿರಲಿಲ್ಲ. ಪ್ರಸ್ತುತ ಕೇಂದ್ರ ನೌಕರರು ಕನಿಷ್ಠ ವೇತನ 18 ಸಾವಿರ ರೂ., ಗರಿಷ್ಠ ವೇತನ 66,900 ರೂ. ಇದೆ.

4 /4

ಸಂಬಳ ಎಷ್ಟು ಹೆಚ್ಚಾಗುತ್ತದೆ? ಟ್‌ಮೆಂಟ್ ಅಂಶವನ್ನು 2.57 ರಿಂದ 3.68 ಕ್ಕೆ ಹೆಚ್ಚಿಸಿದಾಗ, ಕನಿಷ್ಠ ಮೂಲ ವೇತನವು 18 ಸಾವಿರದಿಂದ 26 ಸಾವಿರ ರೂಪಾಯಿಗಳಿಗೆ ಹೆಚ್ಚಾಗುತ್ತದೆ. ಮೂಲವೇತನವನ್ನು 8 ಸಾವಿರ ರೂ. ಹೆಚ್ಚಿಸಿದರೆ ಇತರ ಭತ್ಯೆಗಳ ಮೇಲೂ ಪರಿಣಾಮ ಬೀರುತ್ತದೆ. ಅಂದರೆ, ಫಿಟ್ಮೆಂಟ್ ಅಂಶವನ್ನು ಹೆಚ್ಚಿಸುವುದು ನಿಮ್ಮ ಸಂಪೂರ್ಣ ಸಂಬಳದ ಮೇಲೆ ಪರಿಣಾಮ ಬೀರುತ್ತದೆ ಎಂದು ನೀವು ಹೇಳಬಹುದು.