ಹೀಗಿತ್ತು ಡಿಕೆ ಶಿವಕುಮಾರ್ ಪುತ್ರಿ ವಿವಾಹದ ಸಂಭ್ರಮ

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪುತ್ರಿ ಐಶ್ವರ್ಯಾ ಮತ್ತು ಅಮರ್ಥ್ಯ ಹೆಗಡೆ ವಿವಾಹ ಸಂಭ್ರಮ ಹೀಗಿತ್ತು.. 

ಬೆಂಗಳೂರು : ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್ (DK Shiva Kumar) ಪುತ್ರಿ ಐಶ್ವರ್ಯಾ ಶಿವಕುಮಾರ್ ವಿವಾಹವು ಕಾಫಿ ಡೇ ಮಾಲೀಕ ದಿ. ಸಿದ್ದಾರ್ಥ ಹೆಗಡೆ ಪುತ್ರ ಅಮರ್ಥ್ಯ ಹೆಗಡೆ ಜೊತೆ ಭಾನುವಾರ ನೆರವೇರಿತು. ಬೆಂಗಳೂರಿನ ಪ್ರತಿಷ್ಠಿತ ಶರಟಾನ್ ಹೊಟೇಲಿನಲ್ಲಿ ಈ ಹೈಪ್ರೊಫೈಲ್ ಮದುವೆ ನಡೆಯಿತು. ವಿವಾಹ ಸಮಾರಂಭದಲ್ಲಿ ಸಿಎಂ ಯಡಿಯೂರಪ್ಪ ( BS Yediyurappa), ಮಾಜಿ ಸಿಎಂಗಳಾದ ಸಿದ್ದರಾಮಯ್ಯ (Siddaramaiah), ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಸೇರಿದಂತೆ ಅನೇಕ ರಾಜಕೀಯ ನಾಯಕರು ಭಾಗವಹಿಸಿದ್ದರು. ಅಲ್ಲದೆ ಅನೇಕ ಸ್ವಾಮೀಜಿಗಳು ಮದುವೆ ಸಮಾರಂಭದಲ್ಲಿ ಭಾಗವಹಿಸಿ ವಧು ವರರಿಗೆ ಆಶೀರ್ವಾದ ನೀಡಿದರು.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /8

ಕೆಲವು ಆಯ್ದ ಗಣ್ಯರು, ಮಠಾಧೀಶರು, ಸಂಬಂಧಿಗಳು, ಸ್ನೇಹಿತರು ಹಾಗೂ ಪರಿವಾರ ಸದಸ್ಯರ ಸಮ್ಮುಖದಲ್ಲಿ ಐಶ್ವರ್ಯಾ ಹಾಗೂ  ಅಮರ್ಥ್ಯ ಸತಿಪತಿಯರಾದರು. ಫೆ. 17 ರಂದು ಪ್ರತಿಷ್ಠಿತ ಗಾಲ್ಫ್ ಶೈರ್ ಹೊಟೇಲಿನಲ್ಲಿ ಆರತಕ್ಷತೆ ನೆರವೇರಲಿದೆ.  

2 /8

ಅಮರ್ಥ್ಯ ಹೆಗಡೆ ರಾಜ್ಯ ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರ ಮೊಮ್ಮಗ. ಎಸ್ ಎಂ ಕೃಷ್ಣ ಅವರು ಡಿಕೆ ಶಿವಕುಮಾರ್ ಅವರ ರಾಜಕೀಯ ಗುರು ಹಾಗೂ ಸ್ನೇಹಿತ. ಈಗ ಎಸ್ ಎಂ ಕೃಷ್ಣ ಮತ್ತು ಡಿಕೆ ಶಿವಕುಮಾರ್ ಪರಸ್ಪರ ಬೀಗರಾಗಿದ್ದಾರೆ.  

3 /8

ಡಿ.ಕೆ ಶಿವಕುಮಾರ್ ಸಕಲ ಜನರ ಸಮ್ಮುಖದಲ್ಲಿ ಧಾರೆ ಶಾಸ್ತ್ರ ನೆರವೇರಿಸಿದರು. ಕರೋನಾ ಮಾರ್ಗಸೂಚಿಯಂತೆ ಮದುವೆ ನೆರವೇರಿತು  

4 /8

ಮದುವೆ ಕಾರ್ಯಕ್ರಮದಲ್ಲಿ ಆದಿ ಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ  ಪಾಲ್ಗೊಂಡಿದ್ದರು. 

5 /8

ಹಲವು ಧಾರ್ಮಿಕ ನಾಯಕರೂ ಕೂಡಾ ಈ ಮದುವೆಗೆ ಆಗಮಿಸಿ ನೂತನ ದಂಪತಿಗೆ ಆಶಿರ್ವಾದ ಮಾಡಿದರು.  

6 /8

ವಿವಾಹ ಸಮಾರಂಭದಲ್ಲಿ ಸಿಎಂ ಯಡಿಯೂರಪ್ಪ , ಮಾಜಿ ಸಿಎಂಗಳಾದ ಸಿದ್ದರಾಮಯ್ಯ , ಹೆಚ್ ಡಿ ಕುಮಾರಸ್ವಾಮಿ ಸೇರಿದಂತೆ ಅನೇಕ ರಾಜಕೀಯ ನಾಯಕರು ಭಾಗವಹಿಸಿದ್ದರು.  

7 /8

ಅಮರ್ಥ್ಯ ಹೆಗಡೆ ಕಾಫಿಡೇ ಮುನ್ನಡೆಸುತ್ತಿದ್ದಾರೆ. ಐಶ್ವರ್ಯಾ ಗ್ಲೋಬಲ್ ಇಂಜನೀಯರಿಂಗ್ ಕಾಲೇಜನ್ನು ನೋಡಿಕೊಳ್ಳುತ್ತಿದ್ದಾರೆ.  

8 /8

ಫೆ. 20ರಂದು ಬೆಂಗಳೂರು ಅರಮನೆ ಮೈದಾನದಲ್ಲಿ ಬೀಗರ ಊಟ ನಡೆಯಲಿದೆ.