ವ್ಯಾಲೆಂಟೈನ್ ಡೇ ಪ್ರಯುಕ್ತ ಜನಪ್ರಿಯ ಎಲೆಕ್ಟ್ರಿಕ್ ಸ್ಕೂಟರ್‌ಗಳಲ್ಲಿ ಭರ್ಜರಿ ಕೊಡುಗೆಗಳನ್ನು ನೀಡಲಾಗುತ್ತಿದೆ.
ಪ್ರೇಮಿಗಳ ದಿನದಂದು ನೀವೂ ಕೂಡ ನಿಮ್ಮ ಪ್ರೇಮಿಗಳಿಗೆ ಏನಾದರೂ ಉಡುಗೊರೆ ನೀಡಲು ಬಯಸುತ್ತಿದ್ದರೆ ದ್ವಿಚಕ್ರ ವಾಹನವನ್ನೇ ಗಿಫ್ಟ್ ಆಗಿ ನೀಡಬಹುದು. ಇದಕ್ಕಾಗಿ ಹೆಚ್ಚು ಹಣ ಖರ್ಚಾಗುತ್ತದೆ ಎಂಬ ಚಿಂತೆಯೂ ಬೇಕಿಲ್ಲ. ಏಕೆಂದರೆ, ವ್ಯಾಲೆಂಟೈನ್ ಡೇ ಪ್ರಯುಕ್ತ ಜನಪ್ರಿಯ ಎಲೆಕ್ಟ್ರಿಕ್ ಸ್ಕೂಟರ್‌ಗಳಲ್ಲಿ ಭರ್ಜರಿ ಕೊಡುಗೆಗಳನ್ನು ನೀಡಲಾಗುತ್ತಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ಓಕಿನಾವಾ ಎಲೆಕ್ಟ್ರಿಕ್ ಸ್ಕೂಟರ್: ವ್ಯಾಲೆಂಟೈನ್ ಡೇಯಲ್ಲಿ ನೀವು ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸುವ ಬಗ್ಗೆ ಚಿಂತಿಸುತ್ತಿದ್ದರೆ ಜನಪ್ರಿಯ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಓಕಿನಾವಾ ಆಟೋಟೆಕ್ ತನ್ನ ಗ್ರಾಹಕರಿಗೆ ವ್ಯಾಲೆಂಟೈನ್ಸ್ ಡೇ ಪ್ರಯುಕ್ತ ಭರ್ಜರಿ ಕೊಡುಗೆಗಳನ್ನು ನೀಡುತ್ತಿದೆ.
ವಿಶೇಷ ಕೊಡುಗೆ : ಓಕಿನಾವಾ ಆಟೋಟೆಕ್ ತನ್ನ ಆಯ್ದ ಶ್ರೇಣಿಯ ಎಲೆಕ್ಟ್ರಿಕ್ ಸ್ಕೂಟರ್‌ಗಳ ಮೇಲೆ ವಿಶೇಷ ಕೊಡುಗೆಗಳನ್ನು ಪ್ರಕಟಿಸಿದೆ. ಈ ವ್ಯಾಲೆಂಟೈನ್ಸ್ ಡೇ ಆಫರ್ ಅಡಿಯಲ್ಲಿ, ಕಂಪನಿಯ ಮೂರು ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು 12,500 ರೂ.ವರೆಗಿನ ಭರ್ಜರಿ ಡಿಸ್ಕೌಂಟ್ ನಲ್ಲಿ ಖರೀದಿಸಬಹುದಾಗಿದೆ. ವಿಶೇಷವೆಂದರೆ ಈ ಡಿಸ್ಕೌಂಟ್ ಆಫರ್ ಫೆಬ್ರವರಿ 15 ರವರೆಗೆ ಮಾತ್ರ ಲಭ್ಯವಾಗಲಿದೆ.
ಓಕಿನಾವಾದ ಈ ಮಾದರಿಗಳಲ್ಲಿ ಸಿಗುತ್ತಿದೆ ಆಫರ್: ಓಕಿನಾವಾ ವ್ಯಾಲೆಂಟೈನ್ಸ್ ಡೇ ಕೊಡುಗೆಯು iPraise+, PraisePro ಮತ್ತು Ridge+ ನಂತಹ ಹೆಚ್ಚಿನ ವೇಗದ ಮಾದರಿಗಳು ಮತ್ತು R30 ಮತ್ತು Lite ನಂತಹ ಕಡಿಮೆ-ವೇಗದ ಕೊಡುಗೆಗಳ ಮೇಲೆ ಅನ್ವಯಿಸುತ್ತದೆ ಎಂದು ಕಂಪನಿ ಮಾಹಿತಿ ನೀಡಿದೆ.
iPraise+ ಎಲೆಕ್ಟ್ರಿಕ್ ಸ್ಕೂಟರ್‌ನ ಬೆಲೆ : ಫುಲ್ ಚಾರ್ಜ್‌ನಲ್ಲಿ 137KM ಕ್ರಮಿಸಬಲ್ಲ iPraise+ ಎಲೆಕ್ಟ್ರಿಕ್ ಸ್ಕೂಟರ್‌ನ ಬೆಲೆ 145,965 ರೂಪಾಯಿಗಳು. ಆದರೆ, ವ್ಯಾಲೆಂಟೈನ್ಸ್ ಡೇ ಕೊಡುಗೆಯಲ್ಲಿ ಈ ವಾಹನವನ್ನು ಕಡಿಮೆ ಬೆಲೆಯಲ್ಲಿ ಖರೀದಿಸಬಹುದಾಗಿದೆ. 3.6 kWh ಬ್ಯಾಟರಿಯೊಂದಿಗೆ ಬರುವ ಈ ಸ್ಕೂಟರ್‌ನ ಗರಿಷ್ಠ ವೇಗ ಗಂಟೆಗೆ 50 ಕಿಮೀ. ಸಂಪೂರ್ಣ ಚಾರ್ಜ್ ಆಗಲು 4-5 ಗಂಟೆ ತೆಗೆದುಕೊಳ್ಳುತ್ತದೆ ಎಂದು ಕಂಪನಿ ತಿಳಿಸಿದೆ.
iPraise Pro ಎಲೆಕ್ಟ್ರಿಕ್ ಸ್ಕೂಟರ್: iPraise Pro ಎಲೆಕ್ಟ್ರಿಕ್ ಸ್ಕೂಟರ್ ಬೆಲೆ 99,645 ರೂ. ಕೊಡುಗೆಯ ನಂತರ ಅದನ್ನು ಇನ್ನೂ ಕಡಿಮೆ ಬೆಲೆಯಲ್ಲಿ ಖರೀದಿಸಬಹುದು. 2.08 kWh ಬ್ಯಾಟರಿಯೊಂದಿಗೆ ಬರುವ ಈ ಸ್ಕೂಟರ್ ಸಂಪೂರ್ಣ ಚಾರ್ಜ್ ಆಗಲು 2-3 ಗಂಟೆ ತೆಗೆದುಕೊಳ್ಳುತ್ತದೆ. ಸ್ಕೂಟರ್‌ನ ಗರಿಷ್ಠ ವೇಗ ಗಂಟೆಗೆ 50 ಕಿಮೀ. ಪುಲ್ ಚಾರ್ಜ್‌ನಲ್ಲಿ 81KM ಚಲಿಸಬಲ್ಲದು ಎಂದು ಕಂಪನಿ ಹೇಳಿಕೊಂಡಿದೆ.