ಅಕ್ಟೋಬರ್ ತಿಂಗಳು ಆರಂಭವಾಗಿದೆ. ಇದರೊಂದಿಗೆ ಗ್ಯಾಸ್ ಸಿಲಿಂಡರ್, ಆಧಾರ್ ಕಾರ್ಡ್, ಸುಕನ್ಯಾ ಸಮೃದ್ಧಿ ಯೋಜನೆ, ಸಣ್ಣ ಉಳಿತಾಯ ಖಾತೆಗಳು ಸೇರಿದಂತೆ ಹಲವು ನಿಯಮಗಳಲ್ಲಿ ಬದಲಾವಣೆ ಆಗಲಿದೆ.
ಅಕ್ಟೋಬರ್ 1, 2024 ರಿಂದ ಪ್ಯಾನ್-ಆಧಾರ್‌ಗೆ ಸಂಬಂಧಿಸಿದ ನಿಯಮಗಳಲ್ಲಿ ಬದಲಾವಣೆಯಾಗಲಿದೆ. ಪ್ಯಾನ್ ಕಾರ್ಡ್‌ಗೆ ಅರ್ಜಿ ಸಲ್ಲಿಸುವಾಗ ಅಥವಾ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವಾಗ ಆಧಾರ್ ನೋಂದಣಿ ಐಡಿ ಬಳಕೆಯನ್ನು ಅಕ್ಟೋಬರ್ 1 ರಿಂದ ಅನುಮತಿಸಲಾಗುವುದಿಲ್ಲ. ಈ ನಿಟ್ಟಿನಲ್ಲಿ ನಿಯಮಗಳಲ್ಲಿ ತಿದ್ದುಪಡಿ ಮಾಡಲಾಗಿದೆ.
ಅಕ್ಟೋಬರ್ 01ರಂದು ತೈಲ ಕಂಪನಿಗಳು ಗ್ಯಾಸ್ ಸಿಲಿಂಡರ್ ಬೆಲೆಯನ್ನು ಪರಿಷ್ಕರಿಸಿವೆ. ಗೃಹ ಬಳಕೆ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಆದರೆ, ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ 47.50 ರೂ. ಏರಿಕೆ ಕಂಡು ಬಂದಿದೆ.
ಅಕ್ಟೋಬರ್ 01ರಿಂದ ಸುಕನ್ಯಾ ಸಮೃದ್ಧಿ ಯೋಜನೆಯಡಿ ಹೆಣ್ಣು ಮಕ್ಕಳ ಕಾನೂನು ಪಾಲಕರು ಮಾತ್ರ ಈ ಖಾತೆಗಳನ್ನು ನಿರ್ವಹಿಸಲು ಸಾಧ್ಯವಾಗುತ್ತದೆ. ಹಾಗಾಗಿ, ಬೇರೆಯವರು (ಸಂಬಂಧಿಕರು) ಹೆಣ್ಣು ಮಕ್ಕಳ ಹೆಸರಿನಲ್ಲಿ ಸುಕನ್ಯಾ ಸಮೃದ್ಧಿ ಖಾತೆ ತೆರೆದಿದ್ದಾರೆ ಈ ಖಾತೆಯನ್ನು ಮಗಳ ಕಾನೂನುಬದ್ಧ ಪೋಷಕರಿಗೆ ವರ್ಗಾಯಿಸಬೇಕಾಗುತ್ತದೆ.
ಅಕ್ಟೋಬರ್ 1 ರಿಂದ ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸ್ 'ವಿವಾದ್ ಸೇ ವಿಶ್ವಾಸ್' ಎಂಬ ಯೋಜನೆಯನ್ನು ಜಾರಿಗೆ ತರಲಿದೆ. ಈ ಯೋಜನೆಯು ಜೂನ್ 22, 2024 ರಿಂದ ಬಾಕಿ ಇರುವ ಅರ್ಜಿಗಳನ್ನು ವಿಲೇವಾರಿ ಮಾಡಲು ಅವಕಾಶವನ್ನು ಒದಗಿಸುತ್ತದೆ. ಆದಾಯ ತೆರಿಗೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್, ಹೈಕೋರ್ಟ್ ಮತ್ತು ವಿವಿಧ ಮೇಲ್ಮನವಿ ಪ್ರಾಧಿಕಾರಗಳ ಮುಂದೆ ಹಲವಾರು ಅರ್ಜಿಗಳು ಬಾಕಿ ಉಳಿದಿವೆ. ಈ ಅರ್ಜಿಗಳನ್ನು ಪ್ರಕ್ರಿಯೆಗೊಳಿಸಲು ಹೊಸ ನಿಯಮ ಜಾರಿಯಾಗಲಿದೆ.
ಅಂಚೆ ಕಚೇರಿಗಳಲ್ಲಿನ ಸಣ್ಣ ಉಳಿತಾಯ ಖಾತೆಗಳಲ್ಲಿ ದೊಡ್ಡ ಬದಲಾವಣೆಯಾಗಲಿದೆ. ಇದರಿಂದಾಗಿ ಅಕ್ಟೋಬರ್ 01 ರಿಂದ ಉಳಿತಾಯದ ಮೇಲಿನ ಬಡ್ಡಿಯ ಮೇಲೆ ಪರಿಣಾಮ ಬೀರುತ್ತದೆ.
ರೈಲಿನಲ್ಲಿ ಬಿಡುವಿಲ್ಲದ ವಾರಾಂತ್ಯಗಳಲ್ಲಿ ಟಿಕೆಟ್ ಇಲ್ಲದೆ ಪ್ರಯಾಣಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ಅಂತಹವರ ಪಟ್ಟೆಗಾತಿ ಭಾರತೀಯ ರೈಲ್ವೆ ಅಕ್ಟೋಬರ್ 01ರಿಂದ ಹೊಸ ಅಭಿಯಾನವನ್ನು ಆರಂಭಿಸಲಿದೆ.
ಅಕ್ಟೋಬರ್ 1 ರಿಂದ,ಸ್ಥಿರಾಸ್ತಿ ಮಾರಾಟದ ಮೇಲಿನ ತೆರಿಗೆ ನಿಯಮಗಳನ್ನು ಕೇಂದ್ರ ಬದಲಾಯಿಸಿದೆ. ಇಂದಿನಿಂದ ಯಾರಾದರೂ 50 ಲಕ್ಷಕ್ಕಿಂತ ಹೆಚ್ಚು ಮೌಲ್ಯದ ಆಸ್ತಿಯನ್ನು ಮಾರಾಟ ಮಾಡಿದರೆ ಅದರ ಮೇಲೆ ಶೇಕಡಾ 1 ರಷ್ಟು ಟಿಡಿಎಸ್ ಪಾವತಿಸಬೇಕಾಗುತ್ತದೆ.