Shishir Shastry Marriage Rumour: ಬಿಗ್ ಬಾಸ್ ಕನ್ನಡ ಸೀಸನ್ 11ರಲ್ಲಿ ಈ ವಾರದ ಎಲಿಮಿನೇಷನ್ ಪ್ರಕ್ರಿಯೆ ಮುಕ್ತಾಯಗೊಂಡಿದೆ. ಕಡಿಮೆ ಮತ ಪಡೆದಿರುವ ಸ್ಪರ್ಧಿ ಶಿಶಿರ್ ಶಾಸ್ತ್ರಿ ದೊಡ್ಮನೆಯಿಂದ ಹೊರಬಂದಿದ್ದರೆ, ಕೌಟುಂಬಿಕ ಕಾರಣದಿಂದ ಗೋಲ್ಡ್ ಸುರೇಶ್ ಅವರು ಹೊರನಡೆದಿದ್ದಾರೆ. ಈ ಮೂಲಕ ಬಿಗ್ ಬಾಸ್‌ನಲ್ಲಿ ಈ ವಾರ ಡಬಲ್ ಎಲಿಮಿನೇಷನ್ ನಡೆದಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಬಿಗ್ ಬಾಸ್ ಕನ್ನಡ ಸೀಸನ್ 11ರಲ್ಲಿ ಈ ವಾರದ ಎಲಿಮಿನೇಷನ್ ಪ್ರಕ್ರಿಯೆ ಮುಕ್ತಾಯಗೊಂಡಿದೆ. ಕಡಿಮೆ ಮತ ಪಡೆದಿರುವ ಸ್ಪರ್ಧಿ ಶಿಶಿರ್ ಶಾಸ್ತ್ರಿ ದೊಡ್ಮನೆಯಿಂದ ಹೊರಬಂದಿದ್ದರೆ, ಕೌಟುಂಬಿಕ ಕಾರಣದಿಂದ ಗೋಲ್ಡ್ ಸುರೇಶ್ ಅವರು ಹೊರನಡೆದಿದ್ದಾರೆ. ಈ ಮೂಲಕ ಬಿಗ್ ಬಾಸ್‌ನಲ್ಲಿ ಈ ವಾರ ಡಬಲ್ ಎಲಿಮಿನೇಷನ್ ನಡೆದಿದೆ.
ಇನ್ನೊಂದೆಡೆ ಶಿಶಿರ್ ಶಾಸ್ತ್ರಿ ಬಿಗ್ ಬಾಸ್‌ಗೆ ಪ್ರವೇಶಿಸುತ್ತಾರೆ ಎಂದು ಗೊತ್ತಾದ ದಿನದಿಂದ ಅವರ ವೈಯಕ್ತಿಕ ಜೀವನದ ಬಗ್ಗೆ ಭಾರೀ ಚರ್ಚೆಗಳು ಸೋಶಿಯಲ್ ಮೀಡಿಯಾದಲ್ಲಿ ಹಬ್ಬಿದ್ದವು. ಬಿಗ್ ಬಾಸ್ ವೇದಿಕೆ ಮೇಲೆ ತಾನು ಸಿಂಗಲ್ ಎಂದು ಹೇಳಿಕೊಂಡಿದ್ದ ಶಿಶಿರ್ , ಡಿವೋರ್ಸ್ ಪಡೆದಿದ್ದು ಇದೀಗ ಏಕಾಂಗಿ ಜೀವನ ನಡೆಸುತ್ತಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ ಇದು ಎಷ್ಟರ ಮಟ್ಟಿಗೆ ಸತ್ಯ ಎಂಬುದು ತಿಳಿದುಬಂದಿಲ್ಲ.
ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ವದಂತಿ ಪ್ರಕಾರ, ಶಿಶಿರ್ ಶಾಸ್ತ್ರಿ ಅವರು ನಟಿ ರಮ್ಯಾ ಅವರನ್ನು ವಿವಾಹವಾಗಿದ್ದಾರೆ. ನಟಿ ರಮ್ಯಾ ಅವರನ್ನು ಕೋಳಿ ರಮ್ಯಾ ಎಂದೇ ಕರೆಯೋದು. ಇದಕ್ಕೆ ಕಾರಣ, ಈ ಹಿಂದೆ ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫ್ ರಿಯಾಲಿಟಿ ಶೋ ನಲ್ಲಿ ಭಾಗವಹಿಸಿದ್ದ ರಮ್ಯಾ ಅವರು, ಕೋಳಿ ಹಿಡಿಯುವ ಟಾಸ್ಕ್‌ನಲ್ಲಿ ಭರ್ಜರಿಯಾಗಿ ಆಟವಾಡಿ ಗೆದ್ದಿದ್ದರು. ಅದಾದ ಬಳಿಕ ಅವರನ್ನು ಕೋಳಿ ರಮ್ಯಾ ಎಂದೇ ಕರೆಯಲಾಗುತ್ತದೆ.
ಇನ್ನು ರಮ್ಯಾ ಮತ್ತು ಶಿಶಿರ್ ಶಾಸ್ತ್ರಿ ಅವರು ʼಸೊಸೆ ತಂದ ಸೌಭಾಗ್ಯʼ ಸೀರಿಯಲ್‌ನಲ್ಲೂ ಒಟ್ಟಿಗೆ ನಟಿಸಿದ್ದರು. ಅದಾದ ನಂತರ ಇವರಿಬ್ಬರು ಪ್ರೀತಿಸಿ ವಿವಾಹವಾಗಿದ್ದರು ಎಂದು ಹೇಳಲಾಗಿದೆ. ಆದರೆ ಮದುವೆಯಾದ ಕೊಂಚ ದಿನಗಳ ಬಳಿಕ ಇಬ್ಬರ ನಡುವೆ ವೈಮನಸ್ಸು ಉಂಟಾಗಿ ಡಿವೋರ್ಸ್ ಪಡೆದಿದ್ದಾರೆ ಎನ್ನಲಾಗಿದೆ.
ಡಿವೋರ್ಸ್ ಬಳಿಕ ಕೋಳಿ ರಮ್ಯಾ ಡ್ಯಾನ್ಸರ್ ವರದ ಎಂಬವರ ಜೊತೆ ಡೇಟಿಂಗ್ ಮಾಡುತ್ತಿದ್ದರು ಎಂದು ವದಂತಿ ಹಬ್ಬಿತ್ತು. ಆದರೆ ಶಿಶಿರ್ ಮಾತ್ರ ತಮ್ಮ ಕುಟುಂಬ ಮತ್ತು ಕೆಲಸದ ಕಡೆಗೆ ಹೆಚ್ಚು ಗಮನ ನೀಡುತ್ತಾ ಸಿಂಗಲ್ ಆಗಿಯೇ ಬದುಕುತ್ತಿದ್ದಾರೆ.
ಇನ್ನು ಈ ವದಂತಿ ಎಷ್ಟರಮಟ್ಟಿಗೆ ನಿಜ ಎಂಬುದು ತಿಳಿದಿಲ್ಲ. ಈ ಬಗ್ಗೆ ಶಿಶಿರ್ ಆಗಲಿ, ಕೋಳಿ ರಮ್ಯಾ ಆಗಲಿ ತುಟಿಬಿಚ್ಚಿಲ್ಲ. ಆದರೆ ಗೂಗಲ್‌ನಲ್ಲಿ ಕೋಳಿ ರಮ್ಯ ಪತಿ ಯಾರೆಂದು ಸರ್ಚ್ ಮಾಡಿದಾಗ ಶಿಶಿರ್ ಹೆಸರೇ ಬರುತ್ತಿದೆ. ಅಷ್ಟೇ ಅಲ್ಲದೆ, ಸೋಶಿಯಲ್ ಮೀಡಿಯಾದಲ್ಲಿ ಈ ವಿಚಾರಕ್ಕೆ ಸಂಬಂಧಿಸಿ ಹಲವಾರು ವಿಡಿಯೋಗಳು ವೈರಲ್ ಆಗಿವೆ.
ಸೂಚನೆ: ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿರುವ ವರದಿಗಳ ಅನುಸಾರ ಈ ಸುದ್ದಿಯನ್ನು ಬರೆಯಲಾಗಿದೆ. ಈ ವರದಿಯನ್ನು ಜೀ ಕನ್ನಡ ನ್ಯೂಸ್ ಅನುಮೋದಿಸುವುದಿಲ್ಲ. ಜೊತೆಗೆ ಖಚಿತಪಡಿಸುವುದಿಲ್ಲ.