ಅರ್ಜುನ್ ಸರ್ಜಾ ಮಗಳ ಮದುವೆಯಲ್ಲಿ ಸೂಪರ್ ಸ್ಟಾರ್ ರಜನಿಕಾಂತರಿಗೆ ಅವಮಾನ.? ವಿಡಿಯೋ ವೈರಲ್

Aishwarya Umapathy marriage : ನಟ ಅರ್ಜುನ್ ಪುತ್ರಿ ಐಶ್ವರ್ಯ ಹಾಗೂ ಹಾಸ್ಯ ನಟ ರಾಮಯ್ಯ ಪುತ್ರ ಉಮಾಪತಿ ಅವರ ವಿವಾಹ ಆರತಕ್ಷತೆ ಕಾರ್ಯಕ್ರಮದಲ್ಲಿ ನಟ ರಜನಿಕಾಂತ್ ಅವರಿಗೆ ಅವಮಾನ ಮಾಡಲಾಗಿದೆ ಎಂಬ ವಿವಾದ ಎದ್ದಿದೆ.. ಈ ಕುರಿತು ವಿಡಿಯೋ ವೈರಲ್‌ ಆಗುತ್ತಿದೆ..
 

1 /7

ನಟ ಅರ್ಜುನ್ ಪುತ್ರಿ ಐಶ್ವರ್ಯ ಮತ್ತು ನಟ ತಂಬಿ ರಾಮಯ್ಯ ಅವರ ಪುತ್ರ ಉಮಾಪತಿ ಕಳೆದ ಕೆಲವು ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದರು. ಸ್ನೇಹ ಅಂತಿಮವಾಗಿ ಪ್ರೀತಿಗೆ ತಿರುಗಿತ್ತು. ಇವರ ಪ್ರೀತಿಗೆ ಮನೆಯವರೂ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

2 /7

ಕಳೆದ ವರ್ಷ ಚೆನ್ನೈನಲ್ಲಿ ನಟ ಅರ್ಜುನ್ ನಿರ್ಮಿಸಿದ ಆಂಜನೇಯರ್ ದೇವಸ್ಥಾನದಲ್ಲಿ ಐಶ್ವರ್ಯಾ-ಉಮಾಪತಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಜೂನ್ 11ರಂದು ಐಶ್ವರ್ಯ-ಉಮಾಪತಿ ಮದುವೆ ನಡೆಯಿತು.

3 /7

ಕಳೆದ ಶುಕ್ರವಾರ ಐಶ್ವರ್ಯಾ-ಉಮಾಪತಿ ದಂಪತಿಯ ವಿವಾಹ ಆರತಕ್ಷತೆ ಚೆನ್ನೈನಲ್ಲಿ ಅದ್ಧೂರಿಯಾಗಿ ನಡೆದಿತ್ತು. ಸೂಪರ್ ಸ್ಟಾರ್ ರಜನಿಕಾಂತ್, ನಟ ಶಿವಕಾರ್ತಿಕೇಯನ್, ಶಶಿಕುಮಾರ್, ಪ್ರಸನ್ನ, ಕೂಲ್ ಸುರೇಶ್, ನಟಿ ಸ್ನೇಹಾ, ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಮತ್ತು ವಿಜಯಭಾಸ್ಕರ್, ಜಿ.ಕೆ.ವಾಸನ್, ಅಣ್ಣಾಮಲೈ, ಡಿಟಿವಿ ದಿನಕರನ್, ಅನ್ಬುಮಣಿ ರಾಮದಾಸ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

4 /7

ನಟ ರಜನಿಕಾಂತ್ ತಮ್ಮ ಪುತ್ರಿ ಐಶ್ವರ್ಯಾ ಅವರೊಂದಿಗೆ ಮದುವೆ ಸಮಾರಂಭದಲ್ಲಿ ಭಾಗವಹಿಸಿದ್ದರು. ಆಗ ರಜನಿ ವೇದಿಕೆ ಮೇಲೆ ಬಂದು ವಧು-ವರರನ್ನು ಅಭಿನಂದಿಸಿ ತಾವು ತಂದಿದ್ದ ಉಡುಗೊರೆಯನ್ನು ನೀಡಿದರು. 

5 /7

ನವ ಜೋಡಿಯಾಗಲಿ, ನಟ ಅರ್ಜುನ್ ಮತ್ತು ತಂಬಿ ರಾಮಯ್ಯ ಕುಟುಂಬವಾಗಲಿ ತಲೈವಾ ತಂದ ಗಿಫ್ಟ್‌ ಅನ್ನು ತೆಗೆದುಕೊಳ್ಳಲಿಲ್ಲ, ಆಗ ರಜನಿ ತಾವೇ ವಧು-ವರ ಕುಳಿತಿದ್ದ ಖುರ್ಚಿಯ ಇಟ್ಟು ಫೋಟೋಗೆ ಪೋಸ್‌ ಕೊಟ್ಟರು. 

6 /7

ಇದಿಗ ಈ ಘಟನೆಯ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಉಡುಗೂರೆಯನ್ನು ತೆಗೆದುಕೊಳ್ಳದೇ ರಜನಿಯವರನ್ನು ಅವಮಾನಿಸಿದ್ದಾರೆ ಎಂದು ಕೆಲ ಕಿಡಿಗೇಡಿಗಳು ಟೀಕಿಸುತ್ತಿದ್ದಾರೆ.

7 /7

ಇನ್ನೂ ಕೆಲವರು ಗಮನ ಕೊರತೆಯಿಂದ ಅಚಾನಕ್ಕಾಗಿ ಈ ಘಟನೆ ಸಂಭವಿಸಿದೆ. ರಜನಿ ಅವರೇ ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ ಅಂತ ಸಮರ್ಥನೆ ಮಾಡಿದ್ದಾರೆ.