Shobha Shetty Got National Award: ಕನ್ನಡ ಕಿರುತೆರೆಯಲ್ಲಿ ಪೋಷಕ ನಟಿಯಾಗಿ ಕಾಣಿಸಿಕೊಳ್ಳುವ ಮೂಲಕ ನಾಯಕಿಯಾಗಿ ಭಡ್ತಿ ಪಡೆದ ನಟಿ ಶೋಭಾ ಶೆಟ್ಟಗೆ, ಸದ್ಯ ಪರಭಾಷೆಯ ಕಿರುತೆರೆಯಲ್ಲಿ ಮೋಡಿದಕ್ಕೆ ರಾಷ್ಟ್ರೀಯ ಗೌರವ ಪ್ರಶಸ್ತಿ ನೀಡಲಾಗಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಕಿರುತೆರೆ ನಟಿ ಶೋಭಾ ಶೆಟ್ಟಿ, ಸಹಜ ನಟನೆಯ ಮೂಲಕ ಕನ್ನಡದ ಜೊತೆಗೆ ಪರಭಾಷೆಯ ಕಿರುತೆರೆಯಲ್ಲಿ ಮೋಡಿ ಮಾಡಿರುವ ಈಕೆಗೆ ರಾಷ್ಟ್ರೀಯ ಗೌರವ ಪ್ರಶಸ್ತಿ ಒಂದನ್ನು ಸ್ವೀಕರಿಸಿದ್ದಾರೆ.
ಶೋಭಾ ಶೆಟ್ಟಿ ಕಲರ್ಸ್ ಕನ್ನಡ ವಾಹಿನಿಯ ಜನಪ್ರಿಯ ಧಾರಾವಾಹಿ 'ಅಗ್ನಿಸಾಕ್ಷಿ' ಯಲ್ಲಿ ನಾಯಕಿ ತಂಗಿ ತನು ಆಗಿ ನಟಿಸಿದ್ದವರು, ನಂತರದ ದಿನಗಳಲ್ಲಿ ತೆಲುಗು ಕಿರುತೆರೆಯಲ್ಲಿ ಮಿಂಚಿದ್ದೇ ಹೆಚ್ಚು.
ನಟಿ ಶೋಭಾ ಶೆಟ್ಟಿ,'ಕಾರ್ತಿಕ ದೀಪ' ಎಂಬ ಧಾರಾವಾಹಿಯಲ್ಲಿ ಖಳನಾಯಕಿ ಮೋನಿತಾ ಎಂಬ ಪಾತ್ರಕ್ಕೆ ರಾಷ್ಟ್ರೀಯ ಗೌರವ ಪ್ರಶಸ್ತಿ ದೊರಕಿದ್ದು, ಈಕೆಯ ಯಶಸ್ಸಿನತ್ತ ಒಂದು ಮೆಟ್ಟಿಲು ಹೆಚ್ಚಿಸಿದೆ ಎಂದು ಹೇಳಬಹುದು.
ಕಿರುತೆರೆ ಬೆಡಗಿ ಶೋಭಾ ಶೆಟ್ಟಿ, ತೆಲುಗು ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ 'ಬಿಗ್ ಬಾಸ್ ಸೀಸನ್ 7'ರ ಸ್ಪರ್ಧಿಯಾಗಿಯೂ ಈಕೆ ಕಾಣಿಸಿಕೊಂಡು, ಈಕೆ ಫಿನಾಲೆಗೆ ಒಂದು ವಾರ ಇದೆ ಎನ್ನುವಾಗ ದೊಡ್ಮನೆಯಿಂದ ಹೊರ ಬಂದಿದ್ದಾರೆ.
ನಟಿ ಶೋಭಾ ಶೆಟ್ಟಿಯವರು ಸೋಶಿಯಲ್ ಮೀಡಿಯಾದಲ್ಲಿ ಬಹಳಷ್ಟು ಆ್ಯಕ್ಟೀವ್ ಇದ್ದು, ಈ ಸಂಭ್ರಮದ ವಿಚಾರವನ್ನು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಪ್ರೇಕ್ಷಕರು ಅಭಿಮಾನಿಗಳು ಇವರಿಗೆ ಶುಭ ಕೋರಿ ಹಾರೈಕೆಗಳ ಸುರಿಮಳೆಯನ್ನೇ ಸುರಿಸಿದ್ದಾರೆ.
ಕಿರುತೆರೆ ಸುಂದರಿ ಶೋಭಾ ಕನ್ನಡದಿಂದ ತೆಲುಗಿಗೆ ಹೋಗಿ ಬಹಳಷ್ಟು ಹೆಸರು ಮಾಡಿ ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದಿರುವ ಈ ನಟಿಗೆ ಇನ್ನೂ ಬಹಳಷ್ಟು ಅವಕಾಶಗಳು ಮುಂದೆ ಖಂಡಿತ ಬರಲಿದ್ದು ನಾವೆಲ್ಲ ಕಾದು ನೋಡಬೇಕಿದೆ.
ನಟಿ ಶೋಭಾ ಶೆಟ್ಟಿ ಕಿರುತೆರೆಯಲ್ಲಿ ಮಾತ್ರವಲ್ಲದೆ, ಈ ಹಿಂದೆ ಡಾ. ಪುನೀತ್ ರಾಜ್‌ಕುಮಾರ್ ಅಭಿನಯದ ಅಂಜನಿಪುತ್ರ ಸಿನಿಮಾದಲ್ಲಿ ಚಿತ್ರದ ನಾಯಕನ ತಂಗಿಯ ಪಾತ್ರವನ್ನು ನಿರ್ವಹಿಸಿದ್ದರು.