ತನ್ನ ಕೊನೆಯ ಉಸಿರಿರುವ ತನಕ ಕಮಲ್‌ ಹಾಸನ್‌ ಅವರನ್ನು ಹುಚ್ಚಿಯಂತೆ ಪ್ರೀತಿಸಿದ್ದ ಈ ನಟಿ ಯಾರು ಗೊತ್ತಾ? ಕೊನೆಗೂ ನಿಜವಾಗದೆ ಉಳಿಯಿತು ಕಹಿ ಸತ್ಯ

Actress Srividhya: ಮೊದಲ ನೋಟದಲ್ಲೆ ಕಮಲ್‌ ಮೇಲೆ ಪ್ರತೀಯನ್ನು ಬೆಳೆಸಿಕೊಂಡಿದ್ದ ನಟಿ ತನ್ನ ಕೊನೆಯ ಉಸಿರಿರುವರೆಗೂ ಕಮಲ್‌ ಹಾಸನ್‌ ಅವರ ಮೇಲಿನ ಪ್ರೀತಿಯನ್ನು ಬಿಡಲೇ ಇಲ್ಲ. ಆ ನಟಿ ಯಾರು ಗೊತ್ತಾ? ಈಕೆಯ ಕತೆ ಕೇಳಿದ್ರೆ ನೀವೂ ಕೂಡ ಕಣ್ಣೀರು ಹಾಕ್ತೀರ...

1 /10

ಮೊದಲ ನೋಟದಲ್ಲೆ ಕಮಲ್‌ ಮೇಲೆ ಪ್ರತೀಯನ್ನು ಬೆಳೆಸಿಕೊಂಡಿದ್ದ ನಟಿ ತನ್ನ ಕೊನೆಯ ಉಸಿರಿರುವರೆಗೂ ಕಮಲ್‌ ಹಾಸನ್‌ ಅವರ ಮೇಲಿನ ಪ್ರೀತಿಯನ್ನು ಬಿಡಲೇ ಇಲ್ಲ. ಆ ನಟಿ ಯಾರು ಗೊತ್ತಾ? ಈಕೆಯ ಕತೆ ಕೇಳಿದ್ರೆ ನೀವೂ ಕೂಡ ಕಣ್ಣೀರು ಹಾಕ್ತೀರ...

2 /10

3 /10

ಶ್ರೀವಿದ್ಯಾ ತಮಿಳು, ತೆಲುಗು, ಮಲಯಾಳಂ, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ 800 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.  1970ರ ದಶಕದಲ್ಲಿ ಲೇಡಿ ಸೂಪರ್‌ಸ್ಟಾರ್ ಆಗಿ ಖ್ಯಾತಿ ಗಳಿಸಿದ ನಟಿ, ನಟನೆಯ ಜೊತೆಗೆ ಕರ್ನಾಟಕ ಸಂಗೀತ ಮತ್ತು ಭರತನಾಟ್ಯವನ್ನೂ ಕರಗತ ಮಾಡಿಕೊಂಡಿದ್ದಾರೆ.  ಈಕೆ ಕಮಲ್ ಹಾಸನ್ ಅವರ ಮೊದಲ ಗೆಳತಿ ಕೂಡ. ಆಕೆ ಬೇರೆ ಯಾರೂ ಅಲ್ಲ ನಟಿ ಶ್ರೀವಿದ್ಯಾ. 

4 /10

ಶ್ರೀವಿದ್ಯಾ ಅವರು 23 ಜುಲೈ 1953 ರಂದು ಜನಿಸಿದರು. ಆಕೆಯ ತಂದೆ ಕೃಷ್ಣಮೂರ್ತಿ ಅವರು ಚಲನಚಿತ್ರಗಳಲ್ಲಿ ಹಾಸ್ಯನಟರಾಗಿ ಕಾಣಿಸಿಕೊಂಡವರು. ತಾಯಿ ವಸಂತಕುಮಾರಿ ಕರ್ನಾಟಕದ ಸುಪ್ರಸಿದ್ದ ಗಾಯಕಿಯೂ ಹೌದು. 

5 /10

ಶ್ರೀವಿದ್ಯಾ ಹುಟ್ಟಿದ ಕೆಲವು ದಿನಗಳ ನಂತರ ಆಕೆಯ ತಂದೆ ಅಪರೂಪದ ಕಾಯಿಲೆಯಿಂದ ಸಾವನ್ನಪ್ಪುತ್ತಾರೆ, ಸಂಸಾರದ ಭಾರವೆಲ್ಲ ಅಮ್ಮನ ಹೆಗಲ ಮೇಲೆ ಬೀಳುತ್ತದೆ. ಮಕ್ಕಳಿಗೆ ಹಾಲುಣಿಸಲು ಸಮಯವಿಲ್ಲದೆ ನಟಿಯ ತಾಯಿ ಪರದಾಡುತ್ತಾರೆ.  

6 /10

ಶ್ರೀವಿದ್ಯಾ ತನ್ನ ತಾಯಿಯ ಕೆಲಸದ ಹೊರೆಯನ್ನು ಕಡಿಮೆ ಮಾಡಲು ಚಿಕ್ಕ ವಯಸ್ಸಿನಲ್ಲೇ ಚಲನಚಿತ್ರಗಳನ್ನು ಮಾಡಲು ಪ್ರಾರಂಭಿಸುತ್ತಾರೆ. 1967 ರಲ್ಲಿ ಬಾಲನಟಿಯಾಗಿ ತಮ್ಮ ಚಲನಚಿತ್ರ ಪ್ರಯಾಣವನ್ನು ಪ್ರಾರಂಭಿಸಿದ ಅವರು 1971 ರಲ್ಲಿ ತಮ್ಮ ಮೊದಲ ಯಶಸ್ಸನ್ನು ಪಡೆಯುತ್ತಾರೆ. 

7 /10

ಶ್ರೀವಿದ್ಯಾ ಅಪೂರ್ವ ರಾಗಂಗಳ್‌ ಮುಂತಾದ ಹಿಟ್ ಚಿತ್ರಗಳಲ್ಲಿ ನಟಿಸಿ ಸ್ಟಾರ್ ಹೀರೋಯಿನ್ ಆಗುತ್ತಾರೆ. ಸೂಪರ್‌ ಸ್ಟಾರ್‌ ರಜನಿಕಾಂತ್‌ ಶ್ರೀವಿದ್ಯಾ ಅವರೊಂದಿಗೆ ಮೊದಲ ಭಾರಿಗೆ ಜೋಡಿಯಾಗಿ ನಟಿಸುತ್ತಾರೆ. ಇದೇ ಚಿತ್ರದಲ್ಲಿ ಕಮಲ್‌ ಹಾಸನ್‌ ಅವರು ಕೂಡ ನಟಿಸಿದ್ದು, ನಟಿಗೆ ಕಮಲ್‌ ಹಾಸನ್‌ ಅವರ ಮೇಲೆ ಮೊದಲ ನೋಟದಲ್ಲೆ ಪ್ರೀತಿಯಾಗುತ್ತದೆ.

8 /10

ಆದರೆ ಶ್ರೀವಿದ್ಯಾ ತಾಯಿ ಆಕೆಯ ಪ್ರೀತಿಗೆ ಒಪ್ಪದ ಕಾರಣ ಕಮಲ್‌ ಹಾಸನ್‌ ಅವರ ಜೊತೆ ಸಂಭಂದವನ್ನು ಮುರಿದು ಕೊಳ್ಳುತ್ತಾರೆ. ಕಮಲ್‌ ಹಾಸನ್‌ ಅವರೊಂದಿಗಿನ ಬ್ರೇಕಪ್‌ನ ನಂತರ, ಕಮಲ್‌ ಹಾಸನ್‌ ನಟಿ ವಾಣಿ ಗಣಪತಿ ಅವರನ್ನು ಪ್ರೀತಿಸಿ ಮದುವೆಯಾಗುತ್ತಾರೆ.  ಇದು ಶ್ರೀವಿದ್ಯಾ ಅವರಿಗೆ ಅತೀವ ನೋವು ತಂದೊಡ್ಡುತ್ತದೆ. 

9 /10

ಭರತನ್ ಮತ್ತು ಜಾರ್ಜ್ ಥಾಮಸ್ ಅವರನ್ನು ಮದುವೆಯಾಗಿ ಕೆಲವೇ ವರ್ಷಗಳಲ್ಲಿ ವಿಚ್ಛೇದನ ಪಡೆದ ಶ್ರೀವಿದ್ಯಾ ಕೊನೆಯವರೆಗೂ ಕಮಲ್ ಹಾಸನ್‌ ಅವರ ನೆನಪಿನಲ್ಲಿಯೇ ಉಳಿಯುತ್ತಾರೆ

10 /10

2003 ರಲ್ಲಿ ನಟಿ ಶ್ರೀವಿದ್ಯಾಗೆ ಕ್ಯಾನ್ಸರ್‌ ಇರುವುದು ಗೊತ್ತಾಗುತ್ತದೆ. ಮೂರು ವರ್ಷಗಳ ಚಿಕಿತ್ಸೆಯ ನಂತರ ಕೂಡ 2006ರಲ್ಲಿ ನಟಿ ಸಾವನ್ನಪ್ಪುತ್ತಾರೆ. ಸಾಯುವ ಮುನ್ನ ನಟಿ ಕಮಲ್‌ ಹಾಸನ್‌ ಅವರನ್ನು ನೋಡಬೇಕು ಎಂದು ಕೇಲಿಕೊಂಡಿದ್ದು, ಕಮಲ್‌ ಹಾಸನ್‌ ಆಸ್ಪತ್ರೆಗೆ ಭೇಟಿ ನೀಡಿ ನಟಿಯ ಕೊನೆ ಆಸೆಯನ್ನು ಪೂರೈಸಿದ್ದರಂತೆ.