30 ವರ್ಷಗಳ ಬಳಿಕ ನವರಾತ್ರಿಯ ಸಂದರ್ಭದಲ್ಲಿ 3 ಅಪರೂಪದ ರಾಜಯೋಗಗಳು, ಧನಕುಬೇರ ಕೃಪೆಯಿಂದ ಈ ಜನರಿಗೆ ಅಪಾರ ಸಿರಿಸಂಪತ್ತು ಪ್ರಾಪ್ತಿ!

Navratri 2023 Horoscope: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಈ ಬಾರಿಯ ನವರಾತ್ರಿ ಮಹಾಪರ್ವ ಮೂರು ರಾಜಯೋಗಗಳಲ್ಲಿ ಆರಂಭಗೊಳ್ಳುತ್ತಿದೆ. ಇದರಿಂದ ಒಟ್ಟು 5 ರಾಶಿಗಳ ಜನರ ಜೀವನದಲ್ಲಿ ಸುವರ್ಣಕಾಲ ಆರಂಭಗೊಳ್ಳಲಿದೆ. ಬನ್ನಿ ಯಾವುವು ತಿಳಿದುಕೊಳ್ಳೋಣ, (Spiritual News In Kannada)
 

Sharadiya Navratri 2023 Horoscope: ವೈದಿಕ ಜೋತಿಷ್ಯ  ಶಾಸ್ತ್ರದ ಪ್ರಕಾರ ಈ ಬಾರಿ ಅಕ್ಟೋಬರ್ 15, 2023 ರಿಂದ ಶಾರದೀಯ ನವರಾತ್ರಿ ಉತ್ಸವದ ಆಚರಣೆ ಆರಂಭವಾಗಲಿದೆ. ನವರಾತ್ರಿಯ 9 ದಿನಗಳ ಕಾಲ ದೇವೇ ದುರ್ಗೆಯ 9 ಸ್ವರೂಪಗಳನ್ನು ಶ್ರದ್ಧಾ ಭಕ್ತಿಯಿಂದ ಪೂಜಿಸಲಾಗುತ್ತದೆ. ಇನ್ನೊಂದೆಡೆ ಈ ಬಾರಿಯ ಹಬ್ಬದ ಸಂದರ್ಭದಲ್ಲಿ 30 ವರ್ಷಗಳ ಬಳಿಕ ಒಂದು ಅಪರೂಪದ ಕಾಕತಾಳೀಯ ರೂಪುಗೊಳ್ಳುತ್ತಿದೆ. ಇದರಲ್ಲಿ ಬುಧಾದಿತ್ಯ ರಾಜಯೋಗ, ಶಶ ರಾಜಯೋಗ ಹಾಗೂ ಭದ್ರ ರಾಜಯೋಗಗಳು ನಿರ್ಮಾಣಗೊಳ್ಳುತ್ತಿವೆ. ಹೀಗಿರುವಾಗ ಈ ಯೋಗಗಳ ಪ್ರಭಾವ ಎಲ್ಲಾ ದ್ವಾದಶ ರಾಶಿಗಳ ಜನರ ಮೇಲೆ ಉಂಟಾಗಲಿದೆ, ಆದರೆ 5 ರಾಶಿಗಳ ಜಾತಕದವರಿಗೆ ಈ ಅವಧಿಯಲ್ಲಿ ದೇವಿ ದುರ್ಗೆಯ ಕೃಪೆಯಿಂದ ಆಕಸ್ಮಿಕ ಧನಪ್ರಾಪ್ತಿ ಹಾಗೂ ಭಾಗ್ಯೋದಯದ ಯೋಗ ರೂಪುಗೊಳ್ಳುತ್ತಿದೆ. ಅಂದರೆ ಈ ರಾಶಿಗಳ ಜನರಿಗೆ ತಾಯಿ ದುರ್ಗಾ ಮಾತೆಯ ವಿಶೇಷ ಕೃಪಾಕಟಾಕ್ಷ ಪ್ರಾಪ್ತಿಯಾಗಲಿದೆ. ಬನ್ನಿ ಆ ರಾಶಿಗಳು ಯಾವುವು ತಿಳಿದುಕೊಳ್ಳೋಣ,

 

ಇದನ್ನೂ ಓದಿ-ನವೆಂಬರ್ ಆರಂಭದಿಂದ ಈ ಜನರ ಜೀವನದಲ್ಲಿ ಶುಕ್ರ ಪರ್ವ, ಧನಲಕ್ಷ್ಮಿಯ ಕೃಪೆಯಿಂದ ಅಪಾರ ಕನಕವೃಷ್ಟಿ!

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /7

ಪ್ರಸ್ತುತ 30 ವರ್ಷಗಳ ಬಳಿಕ ಶನಿ ತನ್ನ ಸ್ವರಾಶಿಯಾಗಿರುವ ಕುಂಭ ರಾಶಿಯಲ್ಲಿ ವಿರಾಜಮಾನನಾಗಿದ್ದಾನೆ. ಇದರ ಜೊತೆಗೆ ಬುಧ ಹಾಗೂ ಸೂರ್ಯ ಕೂಡ ಕನ್ಯಾ ರಾಶಿಯಲ್ಲಿ ಬುಧಾದಿತ್ಯ ರಾಜಯೋಗವನ್ನು ನಿರ್ಮಿಸಿದ್ದಾರೆ. ಇನ್ನೊಂದೆಡೆ ಬುಧ ತನ್ನ ಸ್ವರಾಶಿಯಲ್ಲಿ ಮಹಾಭದ್ರ ರಾಜಯೋಗ ಕೂಡ ರೂಪಿಸಿದ್ದಾನೆ. ಶನಿ ತನ್ನ ಸ್ವರಾಶಿಯಲ್ಲಿ ಶಶ ಮಹಾಪೃಷ ರಾಜಯೋಗ ನಿರ್ಮಿಸಿದ್ದಾನೆ. ಹೀಗಿರುವಾಗ ಶಾರದೀಯ ನವರಾತ್ರಿ ಹಬ್ಬ ಕೆಲ ಜನರಿಗೆ ತುಂಬಾ ವಿಶೇಷವಾಗಿರಲಿದೆ. ಈ ಜನರ ಜೀವನದಲ್ಲಿ ಧನ-ಧಾನ್ಯ ವೃದ್ಧಿಯಾಗಲಿದ್ದು, ಘನತೆ-ಗೌರವ ಹೆಚ್ಚಾಗಲಿದೆ. ಕುಟುಂಬ ಸದಸ್ಯರ ಜೊತೆಗೆ ಉತ್ತಮ ಕಾಲ ಕಳೆಯಲಿದೆ. ಬನ್ನಿ ನವರಾತ್ರಿ ಹಬ್ಬ ಯಾರ ಪಾಲಿಗೆ ಶುಭವಾಗಿದೆ ಎಂಬುದನ್ನು ತಿಳಿದುಕೊಳ್ಳೋಣ,     

2 /7

ಮೇಷ ರಾಶಿ: ಈ ಮೂರು ರಾಜಯೋಗಗಳ ನಿರ್ಮಾಣ ಮೇಷ ರಾಶಿಗಳ ಜನರಿಗೆ ವಿಶೇಷ ಲಾಭವನ್ನು ತಂದುಕೊಡಲಿವೆ. ಈ ಅವಧಿಯಲ್ಲಿ ನೀವು ವಾಹನ ಆಸ್ತಿಪಾಸ್ತಿ ಖರೀದಿಸುವ ಸಾಧ್ಯತೆ ಇದೆ. ಕಾರ್ಯಕ್ಷೇತ್ರದಲ್ಲಿ ದೊಡ್ಡ ಜವಾಬ್ದಾರಿ ಪ್ರಾಪ್ತಿಯಾಗುವ ಸಾಧ್ಯತೆ ಇದೆ. ನೌಕರಿಗೆ ಸಂಬಂಧಿಸಿದಂತೆ ಒಳ್ಳೆಯ ಪ್ರಸ್ತಾಪ ಬರುವ ಸಾಧ್ಯತೆ ಇದೆ. ವ್ಯಾಪಾರ ವರ್ಗದ ಜನರಿಗೆ ಆಕಸ್ಮಿಕ ಧನಲಾಭದ ಯೋಗವಿದೆ. ಈ ಅವಧಿಯಲ್ಲಿ ಸಣ್ಣಪುಟ್ಟ ಯಾತ್ರೆಗಳು ಸಂಭವಿಸುವ ಸಾಧ್ಯತೆ ಇದೆ. ಇವು ಶುಭ ಸಾಬೀತಾಗಲಿವೆ. ತಾಯಿ ದುರ್ಗೆಯ ಕೃಪೆಯಿಂದ ಹೂಡಿಕೆಯಿಂದ ನಿಮಗೆ ಲಾಭ ಬರುವ ಸಾಧ್ಯತೆ ಇದೆ.   

3 /7

ವೃಷಭ ರಾಶಿ: ನವರಾತ್ರಿಯ ಸಂದರ್ಭದಲ್ಲಿ ನಿರ್ಮಾಣಗೊಳ್ಳುತ್ತಿರುವ ಹಲವು ರಾಜಯೋಗಗಳು ವೃಷಭ ರಾಶಿಯ ಜಾತಕದವರಿಗೆ ಅತ್ಯಂತ ಶುಭವಾಗಿರಲಿವೆ. ಈ ಯೋಗಗಳ ಕಾರಣ ನಿಮಗೆ ದೇವಿ ದುರ್ಗೆಯ ಅಪಾರ ಕೃಪೆ ಪ್ರಾಪ್ತಿಯಾಗಲಿದೆ. ದೀರ್ಘಾವಧಿಯಿಂದ ನೆನೆಗುದಿಗೆ ಬಿದ್ದ ಕೆಲಸಗಳು ಯಾವುದೇ ಅಡೆತಡೆಗಳಿಲ್ಲದೆ ಪುನಃ ಆರಂಭಗೊಳ್ಳಲಿವೆ. ಕುಟುಂಬದ ಜೊತೆಗೆ ಒಳ್ಳೆಯ ಕಾಲ ಕಳೆಯುವಿರಿ. ಕುಟುಂಬ ಸದಸ್ಯರ ಜೊತೆಗೆ ಧಾರ್ಮಿಕ ಯಾತ್ರೆ ಕೈಗೊಳ್ಳುವಿರಿ. ಕಾರ್ಯಸ್ಥಳದ ಕುರಿತು ಹೇಳುವುದಾದರೆ. ನಿಮ್ಮ ಕೆಲಸ ಮತ್ತು ಪರಿಶ್ರಮವನ್ನು ಕಂಡು ನಿಮಗೆ ಹೊಸ ಜವಾಬ್ದಾರಿ ಸಿಗುವ ಸಾಧ್ಯತೆ ಇದೆ. ಬಿಸ್ನೆಸ್ ಮಾಡುವವರಿಗೂ ಕೂಡ ದೊಡ್ಡ ಲಾಭ ಸಿಗಲಿದೆ. ಕುಟುಂಬದಲ್ಲಿ ಸುಖ-ಶಾಂತಿ-ನೆಮ್ಮದಿ ನೆಲೆಸಲಿದೆ. ತಾಯಿ ದುರ್ಗೆಯ ಕೃಪೆಯಿಂದ ಹೊಸ ಆದಾಯದ ಮೂಲಗಳು ತೆರೆದುಕೊಳ್ಳಲಿವೆ.     

4 /7

ಕರ್ಕ ರಾಶಿ: ಈ ಮೂರು ರಾಜಯೋಗಗಳ ನಿರ್ಮಾಣ ನಿಮ್ಮ ಪಾಲಿಗೆ ಅತ್ಯಂತ ಲಾಭದಾಯಕ ಸಿದ್ಧ ಸಾಬೀತಾಗಲಿವೆ. ಈ ಅವಧಿಯಲ್ಲಿ ನಿಮ್ಮ ಆರ್ಥಿಕ ಸ್ಥಿತಿ ಸುಧಾರಿಸಲಿದೆ. ಎಲ್ಲಾ ಕಾರ್ಯಗಳಲ್ಲಿ ಕಾರ್ಯ ಸಿದ್ಧಿ ಪ್ರಾಪ್ತಿಯ ಯೋಗವಿದೆ. ನಿಮ್ಮ ಎಲ್ಲ ಆಸೆ ಆಕಾಂಕ್ಷೆಗಳು ಈಡೇರಲಿವೆ. ಹೊಸ ಕೆಲಸ ಆರಂಭಿಸಲು ಈ ಸಮಯ ಅದ್ಭುತವಾಗಿದೆ. ಸಮಾಜದಲ್ಲಿ ಸ್ಥಾನ ಮಾನ ಹೆಚ್ಚಾಗಲಿದೆ ಹಾಗೂ ಸ್ನೇಹಿತರ ಬೆಂಬಲದಿಂದ ನಿಮ್ಮ ಎಲ್ಲಾ ನಿಂತುಹೋದ ಕೆಲಸಗಳು ಪೂರ್ಣಗೊಳ್ಳಲಿವೆ. ದೇಶ-ವಿದೇಶಕ್ಕೆ ಯಾತ್ರೆ ಸಂಭವಿಸುವ ಸಾಧ್ಯತೆ ಇದೆ. ತಾಯಿ ದುರ್ಗೆಯ ಕೃಪೆಯಿಂದ ನಿಮ್ಮ ಎಲ್ಲಾ ಮಹತ್ವಪೂರ್ಣ ಕೆಲಸಗಳು ಪೂರ್ಣಗೊಳ್ಳಲಿವೆ.   

5 /7

ಮಕರ ರಾಶಿ: ಮಕರ ರಾಶಿಯ ಜಾತಕದವರಿಗೂ ಕೂಡ ಈ ಶುಭ ರಾಜಯೋಗಗಳು ಸಾಕಷ್ಟು ಲಾಭವನ್ನು ತಂದುಕೊಡಲಿವೆ. ದೇವಿ ದುರ್ಗೆಯ ಅಪಾರ ಕೃಪೆಯಿಂದ ವಾಹನ-ಆಸ್ತಿಪಾಸ್ತಿ ಖರೀದಿಸುವ ನಿಮ್ಮ ಕನಸು ನನಸಾಗಲಿದೆ. ಕಾರ್ಯಸ್ಥಳದಲ್ಲಿ ನಿಮ್ಮ ಕೆಲಸಕ್ಕೆ ಪ್ರಶಂಸೆ ವ್ಯಕ್ತವಾಗಲಿದ್ದು. ಪ್ರಮೋಷನ್ ಭಾಗ್ಯ ಕೂಡ ಪ್ರಾಪ್ತಿಯಾಗಲಿದೆ. ವ್ಯಾಪಾರದಲ್ಲಿ ಹಲವು ಪಟ್ಟು ಅಧಿಕ ಲಾಭ ಗಳಿಸುವಲ್ಲಿ ನೀವು ಯಶಸ್ವಿಯಾಗುವಿರಿ. ನಿಂತುಹೋದ ಹಣ ನಿಮ್ಮತ್ತ ಪುನಃ ಬರಲಿದೆ. ಆರ್ಥಿಕ ಸ್ಥಿತಿ ತುಂಬಾ ಬಲಿಷ್ಠವಾಗಿ ಧನ-ಧಾನ್ಯದಲ್ಲಿ ಅಪಾರ ವೃದ್ಧಿಯಾಗಲಿದೆ.     

6 /7

ತುಲಾ ರಾಶಿ: ತುಲಾ ರಾಶಿಯ ಜಾತಕದವರಿಗೆ ಶಾರದೀಯ ನವರಾತ್ರಿ ಉತ್ಸವ ಅತ್ಯದ್ಭುತವಾಗಿರಲಿದೆ, ಮಹಾಭದ್ರ, ಬುಧಾದಿತ್ಯ ಹಾಗೂ ಶಶ ಮಹಾಪುರುಷ ರಾಜ್ಯೋಗಗಳ ನಿರ್ಮಾಣದಿಂದ ದೇವಿ ಜಗದಂಬೆಯ ವಿಶೇಷ ಕೃಪೆ ನಿಮಗೆ ಪ್ರಾಪ್ತಿಯಾಗಲಿದೆ. ಮಕ್ಕಳ ಕಡೆಯಿಂದ ಒಳ್ಳೆಯ ಸುದ್ದಿ ಸಿಗುವ ಸಾಧ್ಯತೆ ಇದೆ. ಕುಟುಂಬದ ಜೊತೆಗೆ ಒಳ್ಳೆಯ ಕಾಲ ಕಳೆಯುವಿರಿ. ದೀರ್ಘಾವಧಿಯಿಂದ ನಿಮಗೆ ಬರಬೇಕಾಗಿದ್ದ ಹಣ ನಿಮ್ಮ ಕೈಸೇರಲಿದೆ. ಕೋರ್ಟ್ ಕಚೇರಿ ವ್ಯವಹಾರಗಳಲ್ಲಿಯೂ ಕೂಡ ನಿಮಗೆ ಅಪಾರ ಯಶಸ್ಸು ಸಿಗಲಿದೆ. ಸಮಾಜದಲ್ಲಿ ಸ್ಥಾನಮಾನ ಹೆಚ್ಚಾಗಲಿದೆ. ವೈವಾಹಿಕ ಜೀವನದಲ್ಲಿಯೂ ಕೂಡ ಸಂತಸದ ವಾತಾವರಣ ಇರಲಿದೆ. (Spiritual News In Kannada)  

7 /7

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)