ವಿಚ್ಛೇದನ ವದಂತಿ ಬೆನ್ನಲ್ಲೇ ಹೊರಬಿತ್ತು ಬಿಗ್‌ ಸಿಕ್ರೇಟ್..‌ ಖ್ಯಾತ ಬಾಲಿವುಡ್‌ ನಟಿಯೊಂದಿಗೆ ಹಾರ್ದಿಕ್‌ ಪಾಂಡ್ಯ ಡೇಟಿಂಗ್!‌?

Hardik Pandya: ಭಾರತದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ವಿಶ್ವ ಚಾಂಪಿಯನ್ ಆದ ಬಳಿಕ ದೇಶಕ್ಕೆ ಮರಳಿದ್ದಾರೆ. ವಿಶ್ವ ಕಪ್‌ ಟೀಂ ಇಂಡಿಯಾ ಗೆಲುವಿನಲ್ಲಿ ಹಾರ್ದಿಕ್ ಪ್ರಮುಖ ಪಾತ್ರ ವಹಿಸಿದ್ದರು. ಆದರೆ ಕಳೆದ ಕೆಲವು ತಿಂಗಳುಗಳಿಂದ ಹಾರ್ದಿಕ್ ಅವರ ವೈಯಕ್ತಿಕ ಜೀವನದಲ್ಲಿ ಯಾವುದು ಸರಿಯಾಗಿಲ್ಲ.. ಪತ್ನಿ ನತಾಶಾ ಜೊತೆ ವಿಚ್ಛೇದನ ಪಡೆಯಲಿದ್ದಾರೆ ಎನ್ನುವ ವದಂತಿಗಳು ಹರಿದಾಡುತ್ತಿವೆ..
 

1 /5

ಹಾರ್ದಿಕ್ ಪಾಂಡ್ಯ ಹಾಗೂ ಪತ್ನಿ  ನತಾಶಾ ಸ್ಟಾಂಕೋವಿಕ್ ಜೊತೆಗಿನ ವಿಚ್ಛೇದನದ ವದಂತಿಗಳು ಸಾಕಷ್ಟು ಸದ್ದು ಮಾಡುತ್ತಿವೆ.. ಆದರೆ ಈ ಬಗ್ಗೆ ಅವರಿಬ್ಬರೂ ಪ್ರತಿಕ್ರಿಯೆ ನೀಡಿಲ್ಲ..   

2 /5

ಟಿ20 ವಿಶ್ವ ಕಪ್ ಬಳಿಕ ನತಾಶಾ ಹಾರ್ದಿಕ್‌ಗಾಗಿ ಸೋಷಿಯಲ್‌ ಮಿಡಿಯಾದಲ್ಲಿ ಯಾವುದೇ ಪೋಸ್ಟ್ ಮಾಡಿರಲಿಲ್ಲ.. ಆದರೆ ಇದೀಗ ರಷ್ಯಾದ ಖ್ಯಾತ ಮಾಡೆಲ್‌ ಹಾರ್ದಿಕ್‌ ಜೊತೆಗಿನ ಪೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ..   

3 /5

ಹೌದು ರಷ್ಯಾದ ಮಾಡೆಲ್ ಮತ್ತು ಬಾಲಿವುಡ್ ನಟಿ ಎಲೀನಾ ತುತೇಜಾ ಹಾರ್ದಿಕ್ ಜೊತೆಗಿನ ಕೆಲವು ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಅದರೊಂದಿಗೆ ಕ್ಯಾಪ್ಷನ್‌ ಕೂಡಾ ಬರೆದಿದ್ದಾರೆ. “ಈಗ ಭಾರತವು ತನ್ನ ಚಾಂಪಿಯನ್ ಬಗ್ಗೆ ಹೆಮ್ಮೆಪಡುತ್ತದೆ. ನನ್ನ ಫೋಟೋ ಶೂಟ್‌ನ ಪೋಟೋಗಳನ್ನು ಅವರಲ್ಲಿ ಒಬ್ಬರೊಂದಿಗೆ ಹಂಚಿಕೊಳ್ಳಲು ನಾನು ಯೋಚಿಸಿದೆ. ಹಾರ್ದಿಕ್ ಪಾಂಡ್ಯ ನಮಗೆಲ್ಲರಿಗೂ ಹೆಮ್ಮೆಪಡುವ ಅವಕಾಶವನ್ನು ನೀಡಿದ್ದಾರೆ" ಎಂದು ಬರೆದುಕೊಂಡಿದ್ದಾರೆ..   

4 /5

 ಈ ಪೋಸ್ಟ್ ನಂತರ, ಭಾರತೀಯ ಅಭಿಮಾನಿಗಳು ವಿವಿಧ ಊಹಾಪೋಹಗಳನ್ನು ಮಾಡುತ್ತಿದ್ದು, ಕೆಲವು ಬಳಕೆದಾರರು ಅವರನ್ನು ಹಾರ್ದಿಕ್ ಪಾಂಡ್ಯ ಅವರ ಗೆಳತಿ ಎಂದು ಕರೆಯುತ್ತಿದ್ದರೆ, ಇನ್ನೂ ಕೆಲವರು ಭಾಭಿ ಎಂದು ಕಾಮೆಂಟ್ ಮಾಡುತ್ತಿದ್ದಾರೆ.  

5 /5

ಇನ್ನು ಎಲೀನಾ ತುತೇಜಾ ರಷ್ಯಾದ ಮಾಡೆಲ್ ಮತ್ತು ಬಾಲಿವುಡ್ ನಟಿ. ಅವರು ಮಾಸ್ಕೋದಲ್ಲಿ ಜನಿಸಿದರು. ಕೆಲವು ವರ್ಷಗಳ ಹಿಂದೆ ಮುಂಬೈಗೆ ಬಂದು ಮಿಸೆಸ್ ಇಂಡಿಯಾ ಅರ್ಥ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಈ ಸ್ಪರ್ಧೆಯಲ್ಲಿ ಅವರು ಮೂರನೇ ಸ್ಥಾನ ಪಡೆದರು. ಪಾರ್ಟ್‌ನರ್ಸ್, ಸಾವಧಾನ್ ಇಂಡಿಯಾ ಮತ್ತು ಬಟ್ಮೀಜ್ ದಿಲ್ ಎಂಬ ಟಿವಿ ಸಿರೀಸ್‌ನಲ್ಲಿ ಎಲೀನಾ ಕಾಣಿಸಿಕೊಂಡಿದ್ದಾರೆ.