ಬರೋಬ್ಬರಿ ಒಂದು ತಿಂಗಳ ಬಳಿಕ ಸಂಭವಿಸಲಿದೆ ಈ ಮಹಾಬದಲಾವಣೆ, ಜೇಬು ಹಣದಿಂದ ತುಂಬಿ ತುಳುಕಲಿದೆ!

ಎಲ್ಲಾ ನವಗ್ರಹಗಳು ಕಾಲಕಾಲಕ್ಕೆ ತಮ್ಮ ರಾಶಿಯನ್ನು ಪರಿವರ್ತಿಸುತ್ತವೆ. ಹೀಗಿರುವಾಗ ಕೆಲವೊಮ್ಮೆ ಒಂದೇ ರಾಶಿಯಲ್ಲಿ ಎರಡೆರಡು ಗ್ರಹಗಳು ಬಂದಾಗ ಗ್ರಹಗಳ ನಡುವೆ ಮೈತ್ರಿ ಸಂಭವಿಸುತ್ತದೆ. ಈ ಮೈತ್ರಿ ಕೆಲವರ ಪಾಲಿಗೆ ಶುಭ ಹಾಗೂ ಉಳಿದವರ ಪಾಲಿಗೆ ಅಶುಭ ಸಾಬೀತಾಗುತ್ತದೆ.
 

ಬೆಂಗಳೂರು: ವೈದಿಕ ಜ್ಯೋತಿಷ್ಯದ ಪ್ರಕಾರ, ಎಲ್ಲಾ ಗ್ರಹಗಳು ಒಂದು ನಿರ್ದಿಷ್ಟ ಕಾಲಾಂತರದಲ್ಲಿ ತಮ್ಮ ತಮ್ಮ ರಾಶಿಗಳನ್ನು ಬದಲಾಯಿಸುತ್ತವೆ. ಕೆಲವು ಗ್ರಹಗಳು ರಾಶಿ ಪರಿವರ್ತನೆಗೆ ಕಡಿಮೆ ಕಾಲಾವಕಾಶ ತೆಗೆದುಕೊಂಡರೆ, ಕೆಲವು ದೀರ್ಘಕಾಲದ ಬಳಿಕ ರಾಶಿಯನ್ನು ಪರಿವರ್ತಿಸುತ್ತವೆ.  ಕೆಲವೊಮ್ಮೆ ಎರಡು ಅಥವಾ ಮೂರು ಗ್ರಹಗಳು ಒಂದೇ ರಾಶಿಯಲ್ಲಿ ಬರುತ್ತವೆ. ಅವುಗಳ ಈ ಸಂಯೋಜನೆಯನ್ನು ಮೈತ್ರಿ ಎಂದು ಕರೆಯಲಾಗುತ್ತದೆ. ಗ್ರಹಗಳ ರಾಜ ಎಂದೇ ಕರೆಯಲಾಗುವ, ಸೂರ್ಯ ದೇವ ಪ್ರತಿ ತಿಂಗಳು ತನ್ನ ರಾಶಿಯನ್ನು ಪರಿವರ್ತಿಸುತ್ತಾನೆ. ಆಗಸ್ಟ್ 17 ರಂದು ಅವನು ಸಿಂಹ ರಾಶಿಯನ್ನು ಪ್ರವೇಶಿಸಲಿದ್ದಾರೆ. ಇನ್ನೊಂದೆಡೆ ಸಿಂಹ ರಾಶಿಯಲ್ಲಿ ಈಗಾಗಲೇ ಮಂಗಳ ಗೋಚರಿಸಿರುವುದರಿಂದ ಅಲ್ಲಿ ಸೂರ್ಯ ಮತ್ತು ಮಂಗಳನ ಮೈತ್ರಿ ನೆರವೇರಲಿದೆ. ಈ ಎರಡೂ ದೊಡ್ಡ ಗ್ರಹಗಳ ಮೈತ್ರಿಯ ಕಾರಣ ದೊಡ್ಡ ಬದಲಾವಣೆಗಳು ಸಂಭವಿಸಲಿವೆ. ಈ ಬದಲಾವಣೆಗಳು ಎಲ್ಲಾ ದ್ವಾದಶ ರಾಶಿಗಳ ಮೇಲೆ ಪ್ರಭಾವ ಬೀರಲಿವೆ.  ಆದರೆ ವಿಶೇಷವಾಗಿ ಮೂರು ರಾಶಿಗಳ ಜನರ ಪಾಲಿಗೆ ಈ ಬದಲಾವಣೆ ಅತ್ಯಂತ ಮಂಗಳಕರವಾಗಿರಲಿದೆ. ಬನ್ನಿ ಆ ಅದೃಷ್ಟವಂತ ರಾಶಿಗಳು ಯಾವುವು ತಿಳಿದುಕೊಳ್ಳೋಣ, 

 

ಇದನ್ನೂ ಓದಿ-ಈ ಬಾರಿ ಎರಡು ಶಿವರಾತ್ರಿಗಳ ಅದ್ಭುತ ಯೋಗ, ಧನ-ಸಂಪತ್ತು ವೃದ್ಧಿಗೆ ಈ ಉಪಾಯ ಮಾಡಿ!

 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /5

ಎಲ್ಲಾ ನವಗ್ರಹಗಳು ಕಾಲಕಾಲಕ್ಕೆ ತಮ್ಮ ರಾಶಿಯನ್ನು ಪರಿವರ್ತಿಸುತ್ತವೆ. ಹೀಗಿರುವಾಗ ಕೆಲವೊಮ್ಮೆ ಒಂದೇ ರಾಶಿಯಲ್ಲಿ ಎರಡೆರಡು ಗ್ರಹಗಳು ಬಂದಾಗ ಗ್ರಹಗಳ ನಡುವೆ ಮೈತ್ರಿ ಸಂಭವಿಸುತ್ತದೆ. ಈ ಮೈತ್ರಿ ಕೆಲವರ ಪಾಲಿಗೆ ಶುಭ ಹಾಗೂ ಉಳಿದವರ ಪಾಲಿಗೆ ಅಶುಭ ಸಾಬೀತಾಗುತ್ತದೆ.  

2 /5

ಕರ್ಕ ರಾಶಿ-ಸೂರ್ಯ ಮತ್ತು ಮಂಗಳನ ಈ ಮೈತ್ರಿ ಕರ್ಕ ರಾಶಿಯ ಜಾತಕದವರ ಪಾಲಿಗೆ ಅತ್ಯಂತ ಮಂಗಳಕರ ಸಾಬೀತಾಗಲಿದೆ. ಈ ಮೈತ್ರಿ ಈ ಜನರಿಗೆ ಸಾಕಷ್ಟು ಧನಲಾಭವನ್ನು ನೀಡಲಿದೆ. ಈ ರಾಶಿಯ ಸ್ಥಳೀಯರ ಆದಾಯದಲ್ಲಿ ಹೆಚ್ಚಳವಾಗಲಿದೆ. ದೀರ್ಘಾವಧಿಯಿಂದ ನಿಮಗೆ ಬರಬೇಕಾದ ಹಣ ನಿಮ್ಮತ್ತ ಮರಳಲಿದೆ. ಇದರಿಂದ ಆರ್ಥಿಕ ಸ್ಥಿತಿ ಉತ್ತಮವಾಗಲಿದೆ. ಅಗತ್ಯ ಕೆಲಸಗಳು ಪೂರ್ಣಗೊಳ್ಳಲಿವೆ. ವ್ಯಾಪಾರಿಗಳಿಗೆ ಲಾಭವಾಗಲಿದೆ.  

3 /5

ಮೇಷ ರಾಶಿ-ಮಂಗಳ-ಸೂರ್ಯನ ಈ ಮೈತ್ರಿ ಮೇಷ ರಾಶಿಯವರಿಗೆ ಸಾಕಷ್ಟು  ಪ್ರಯೋಜನಗಳನ್ನು ನೀಡಲಿದೆ. ಸಂತಾನಕ್ಕೆ ಸಂಬಂಧಿಸಿದ ಕೆಲವು ಒಳ್ಳೆಯ ಸುದ್ದಿಗಳನ್ನು ನೀವು ಪಡೆಯಬಹುದು. ಉದ್ಯೋಗದಲ್ಲಿ ಪರಿಸ್ಥಿತಿ ಉತ್ತಮವಾಗಿರುತ್ತದೆ. ಎಲ್ಲಿಂದಲಾದರೂ ಇದ್ದಕ್ಕಿದ್ದಂತೆ ಹಣ ಪ್ರಾಪ್ತಿಯಾಗಲಿದೆ. ಪ್ರೇಮ ಜೀವನ ಚೆನ್ನಾಗಿರುತ್ತದೆ. ಆರ್ಥಿಕ ಸ್ಥಿತಿ ಬಲವಾಗಿರುತ್ತದೆ.  

4 /5

ಸಿಂಹ ರಾಶಿ: ಮಂಗಳ ಮತ್ತು ಸೂರ್ಯನ ಈ ಮೈತ್ರಿ ಸಿಂಹರಾಶಿಯಲ್ಲಿಯೇ ನೆರವೇರುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಈ ರಾಶಿಯವರಿಗೆ ಆತ್ಮಸ್ಥೈರ್ಯ ಹೆಚ್ಚಾಗಲಿದೆ. ಉದ್ಯೋಗಸ್ಥರಿಗೆ ಬಡ್ತಿ-ಇನ್ಕ್ರಿಮೆಂಟ್ ಸಿಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ವ್ಯಾಪಾರದಲ್ಲಿ ಹೆಚ್ಚಿನ ಲಾಭ ನಿಮ್ಮದಾಗಲಿದೆ. ಅವಿವಾಹಿತರ ವಿವಾಹ ನಿಶ್ಚಯವಾಗಬಹುದು. ಸಂಗಾತಿಯೊಂದಿಗಿನ ಸಂಬಂಧವು ಸುಮಧುರವಾಗಿರಲಿದೆ. ಆರೋಗ್ಯ ಸುಧಾರಿಸಲಿದೆ.

5 /5

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)