Holi 2024 ಬಳಿಕ ಗುರುವಿನ ನಕ್ಷತ್ರಕ್ಕೆ ಶನಿಯ ಪ್ರವೇಶ, ಈ ಜನರ ಜೀವನದಲ್ಲಿ ಗೋಲ್ಡನ್ ಟೈಮ್ ಆರಂಭ!

Shani Nakshatra Parivartan: ಶೀಘ್ರದಲ್ಲಿಯೇ ಕರ್ಮ ಫಳದಾಟ ಶನಿ ಗುರುವಿನ ನಕ್ಷತ್ರವಾಗಿರುವ ಪೂರ್ವ ಭಾದ್ರಪದ ನಕ್ಷತ್ರಕ್ಕೆ ಕಾಲಿಡುತ್ತಿದ್ದಾನೆ (Shani Purva Bhadrapad Nakshatra Pravesh). ಇದರಿಂದ ಮೂರು ರಾಶಿಗಳ ಜನರಿಗೆ ಆಕಸ್ಮಿಕ ಧನಲಾಭದ ಜೊತೆಗೆ ಭಾಗ್ಯೋದಯ ಯೋಗ ನಿರ್ಮಾಣಗೊಳ್ಳಲಿದೆ. (Spiritual News In Kannada)
 

Shani Nakshatra Parivartan 2024: ಎಲ್ಲಾ ಗ್ರಹಗಳು ಒಂದು ನಿಶ್ಚಿತ ಕಾಲಾಂತರದಲ್ಲಿ ರಾಶಿ ಪರಿವರ್ತಿಸಿದಂತೆ ನಕ್ಷತ್ರಗಳನ್ನು ಕೂಡ ಪರಿವರ್ತಿಸುತ್ತವೆ ಮತ್ತು ಗ್ರಹಗಳ ಈ ನಕ್ಷತ್ರ ಪರಿವರ್ತನೆ ಎಲ್ಲಾ ದ್ವಾದಶ ರಾಶಿಗಳ (Astrology) ಜನರ ಮೇಲೆ ಪ್ರಭಾವ ಬೀರುತ್ತವೆ. ಪ್ರಸ್ತುತ ಕರ್ಮ ಫಲದಾತ ಶನಿ ಪೂರ್ವಾ ಭಾದ್ರಪದ ನಕ್ಷತ್ರಕ್ಕೆ ಕಾಲಿಡುತ್ತಿದ್ದಾನೆ. ಈ ನಕ್ಷತ್ರದ ಮೇಲೆ ಗುರುವಿನ ಆಧಿಪತ್ಯವಿದೆ. ಹೀಗಿರುವಾಗ ಇದು ಭಾರಿ ಮಹತ್ವ ಪಡೆದುಕೊಂಡಿದೆ. ಈ ಅವಧಿಯಲ್ಲಿ ಶನಿ ಕೆಲ ರಾಶಿಗಳ (Zodiac Signs) ಜನರ ಭಾಗ್ಯವನ್ನೇ ಬೆಳಗಳಿದ್ದಾನೆ ಮತ್ತು ಅವರಿಗೆ ಜೀವನದಲ್ಲಿ ಅಪಾರ ಧನ ಸಂಪತ್ತು ಕರುಣಿಸಲಿದ್ದಾನೆ. ಬನ್ನಿ ಆ ಅದೃಷ್ಟವಂತ ರಾಶಿಗಳು ಯಾವುವು ತಿಳಿದುಕೊಳ್ಳೋಣ (Spiritual News In Kannada), 

 

ಇದನ್ನೂ ನೋಡಿ-Lunar Eclipse 2024: 100 ಬಳಿಕ ಚಂದ್ರ ಗ್ರಹಣದ ದಿನ ಈ ವಿಶೇಷ ಕಾಕತಾಳೀಯ, ಈ ಜನರಿಗೆ ಲಾಭವೋ ಲಾಭ !

 


ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /7

ಮೇಷ ರಾಶಿ: ಶನಿಯ ನಕ್ಷತ್ರ ಪರಿವರ್ತನೆ ನಿಮ್ಮ ಪಾಲಿಗೆ ಲಾಭದಾಯಕ ಸಿದ್ಧ ಸಾಬೀತಾಗಲಿದೆ. ಏಕೆಂದರೆ ಈ ಅವಧಿಯಲ್ಲಿ ಶನಿ ದೇವ ನಿಮ್ಮ ಗೋಚರ ಜಾತಕದ ಏಕಾದಶ ಭಾವದಲ್ಲಿ ಸಂಚರಿಸಲಿದ್ದಾನೆ. ಹೀಗಾಗಿ ನಿಮ್ಮ ಆದಯಾಯದಲ್ಲಿ ಅಪಾರ ಹೆಚ್ಚಳ ಸಂಭವಿಸಲಿದೆ.   

2 /7

ಶನಿಯ ಈ ನಕ್ಷತ್ರ ಪರಿವರ್ತನೆಯಿಂದ ಮೇಷ ಜಾತಕದವರು ಈ ಅವಧಿಯಲ್ಲಿ ಸಾಕಷ್ಟು ಹಣಗಳಿಕೆ ಮಾಡುವುದರ ಜೊತೆಗೆ ಹಣ ಕೂಡಿ ಹಾಕುವಲ್ಲಿಯೂ ಕೂಡ ಯಶಸ್ಸನ್ನು ಸಾದಿಸುವರು. ಇದಲ್ಲದೆ ಕುಟುಂಬ ಸದಸ್ಯರ ಶ್ರೇಯೋಭಿವೃದ್ಧಿ ಕಂಡು ಮನಸ್ಸು ಪ್ರಸನ್ನವಾಗಲಿದೆ. ಈ ಅವಧಿಯಲ್ಲಿ ಹಲವು ಮಾರ್ಗಗಳಿಂದ ನೀವು ಹಣ ಗಳಿಸುವಲ್ಲಿ ಯಶಸ್ಸನ್ನು ಸಾಧಿಸುವಿರಿ. ಷೇರು ಮಾರುಕಟ್ಟೆ, ಮ್ಯೂಚವಲ್ ಫಂಡ್ ಗಳಂತಹ ಮಾರ್ಗಗಳಿಂದ ನಿಮಗೆ ಅಪಾರ ಧನಲಾಭ ಉಂಟಾಗಲಿದೆ.    

3 /7

ಮಕರ ರಾಶಿ: ಶನಿಯ ಪೂರ್ವಾ ಭಾದ್ರಪದ ನಕ್ಷತ್ರ ಪ್ರವೇಶ ನಿಮ್ಮ ಪಾಲಿಗೆ ವರದಾನ ಸಾಬೀತಾಗಲಿದೆ. ಏಕೆಂದರೆ ಶನಿ ನಿಮ್ಮ ರಾಶಿಗೆ ಅಧಿಪತಿಯಾಗಿದ್ದಾನೆ ಮತ್ತು ನಿಮ್ಮ ಧನ ಭಾವದಲ್ಲಿ ಆತ ಸಂಚರಿಸಲಿದ್ದಾನೆ. ಇದರಿಂದ ನಿಮಗೆ ಕಾಲಕಾಲಕ್ಕೆ ಧನಲಾಭ ಉಂಟಾಗಲಿದೆ.   

4 /7

ಶನಿಯ ಈ ನಕ್ಷತ್ರ ಪರಿವರ್ತನೆಯಿಂದ ಮಕರ ರಾಶಿಯ್ಹ ಜನರಿಗೆ ಸಮಾಜದಲ್ಲಿ ಗೌರವ ಹೆಚ್ಚಾಗಲಿದೆ. ವ್ಯಾಪಾರದಲ್ಲಿ ಉತ್ತಮ ಲಾಭ ನಿಮ್ಮದಾಗಲಿದೆ. ಈ ಅವಧಿಯಲ್ಲಿ ನಿಮ್ಮ ಮಾತಿನಲ್ಲಿ ಪ್ರಭಾವ ನೋಡಲು ಸಿಗಲಿದ್ದು, ಜನರು ನಿಮ್ಮ ಮಾತಿನಿಂದ ಪ್ರಭಾವಿತರಾಗಲಿದ್ದಾರೆ. ನಿಮ್ಮ ಆಸೆ ಆಕಾಂಕ್ಷೆಗಳು ಈಡೇರಲಿವೆ. ಈ ಅವಧಿಯಲ್ಲಿ ನೀವು ವಾಹನ, ಆಸ್ತಿಪಾಸ್ತಿ ಖರೀದಿಸುವ ಸಾಧ್ಯತೆ ಇದೆ.   

5 /7

ವೃಷಭ ರಾಶಿ: ಪೂರ್ವಾ ಭಾದ್ರಪದ ನಕ್ಷತ್ರಕ್ಕೆ ಶನಿಯ ಪ್ರವೇಶ ನಿಮ್ಮ ಪಾಲಿಗೆ ಸಾಕಷ್ಟು ಅನುಕೂಲಕರ ಸಾಬೀತಾಗಲಿದೆ. ಏಕೆಂದರೆ ಈ ಅವಧಿಯಲ್ಲಿ ಶನಿ ನಿಮ್ಮ ಗೋಚರ ಜಾತಕದ ಕರ್ಮ ಭಾವದಲ್ಲಿ ಸಂಚರಿಸಲಿದ್ದಾನೆ. ಹೀಗಾಗಿ ಈ ಅವಧಿಯಲ್ಲಿ ನಿಮಗೆ ಕೆಲಸ ಕಾರ್ಯಗಳಲ್ಲಿ ಉತ್ತಮ ಯಶಸ್ಸು ಲಭಿಸಲಿದೆ.   

6 /7

ಶನಿ ನಕ್ಷತ್ರ ಪರಿವರ್ತನೆಯಿಂದ ವೃಷಭ ರಾಶಿಯ ನಿರುದ್ಯೋಗಿಗಳಿಗೆ ನೌಕರಿ ಭಾಗ್ಯ ಸಿಗಲಿದೆ. ನೌಕರ ವರ್ಗದ ಜನರಿಗೆ ಮತ್ತು ವ್ಯಾಪಾರಿಗಳಿಗೆ ಉತ್ತಮ ಲಾಭ ಸಿಗಲಿದೆ. ಅರ್ಧಕ್ಕೆ ನಿಂತುಹೋದ ಕೆಲಸಗಳು ಗ್ರಹಗಳ ಕಾರಣ ಸಂಪನ್ನಗೊಳ್ಳಲಿವೆ. ತಂದೆಯ ಜೊತೆಗಿನ ನಿಮ್ಮ ಸಂಬಂಧ ಉತ್ತಮವಾಗಿರಲಿದೆ. ನೌಕರವರ್ಗದ ಜನರಿಗೆ ಕಾರ್ಯಸ್ಥಳದಲ್ಲಿ ಹೊಸ ಜವಾಬ್ದಾರಿ ಸಿಗಲಿದೆ.   

7 /7

(Disclaimer- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)