Solar Eclipse 2023: 84 ವರ್ಷಗಳ ಬಳಿಕ ನಾಳೆ 'ಹಂಸ ರಾಜ ಯೋಗ' ನಿರ್ಮಾಣ, ಚಿನ್ನದಂತೆ ಹೊಳೆಯಲಿದೆ ಈ ಜನರ ಭಾಗ್ಯ!

Hansa Raj Yog: ವೈದಿಕ ಜೋತಿಷ್ಯ ಪಂಡಿತರ ಪ್ರಕಾರ ನಾಳೆ 84 ವರ್ಷಗಳ ಸುದೀರ್ಘ ಅವಧಿಯ ಬಳಿಕ ಹಂಸ ರಾಜ ಯೋಗ ಹೆಸರಿನ ಶುಭ ಯೋಗ ನಿರ್ಮಾಣಗೊಳ್ಳುತ್ತಿದ್ದು, ಇದು ಎಲ್ಲಾ ದ್ವಾದಶ ರಾಶಿಗಳ ಮೇಲೆ ಪ್ರಭಾವ ಬೀರಲಿದೆ. ಅದರಲ್ಲಿಯೂ ವಿಶೇಷವಾಗಿ ಮೂರು ರಾಶಿಗಳ ಜಾತಕದ ಜನರಿಗೆ ಇದು ಅತ್ಯಂತ ಲಾಭಕಾರಿ ಸಾಬೀತಾಗಲಿದ್ದು, ಅವರ ಭಾಗ್ಯ ಚಿನ್ನದಂತೆ ಹೊಳೆಯಲಿದೆ. ಬನ್ನಿ ಆ ಅದೃಷ್ಟವಂತ ರಾಶಿಗಳು ಯಾವುವು ತಿಳಿದುಕೊಳ್ಳೋಣ,
 

Hansa Raj Yog On Solar Eclipse 2023: ಇನ್ನು ಕೆಲವು ಗಂಟೆಗಳ ನಂತರ, ವರ್ಷದ ಮೊದಲ ಸೂರ್ಯಗ್ರಹಣ ಗೋಚರಿಸಲಿದೆ. 2023 ರ ಮೊದಲ ಸೂರ್ಯಗ್ರಹಣವು ಗುರುವಾರ, ಏಪ್ರಿಲ್ 20 ರಂದು ಬೆಳಗ್ಗೆ  07.05 ಕ್ಕೆ ಆರಂಭಗೊಳ್ಳಲಿದ್ದು ಮತ್ತು ಮಧ್ಯಾಹ್ನ 12.29 ರವರೆಗೆ ಇರಲಿದೆ.  ಈ ಗ್ರಹಣ ಭಾರತದಲ್ಲಿ ಗೋಚರಿಸದಿರುವ ಕಾರಣ ಅದರ ಸೂತಕ ಕಾಲಕ್ಕೆ ಭಾರತದಲ್ಲಿ ಮಾನ್ಯತೆ ಇಲ್ಲ. ಆದರೆ ಜ್ಯೋತಿಷಿಗಳ ಪ್ರಕಾರ, ಈ ದಿನದಂದು ಅತ್ಯಂತ ಮಂಗಳಕರವಾದ ಹಂಸ ರಾಜ ಯೋಗ ಕೂಡ ರೂಪುಗೊಳ್ಳುತ್ತಿದೆ, ಇದು  3 ರಾಶಿಗಳ ಜನರ ಪಾಲಿಗೆ ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ, ಆ ಅದೃಷ್ಟವಂತ ರಾಶಿಗಳು ಯಾವುವು ತಿಳಿದುಕೊಳ್ಳೋಣ,

 

ಇದನ್ನೂ ಓದಿ-May 2 ರಂದು ಸ್ವರಾಶಿಯನ್ನು ತೊರೆದು ಮಿಥುನ ರಾಶಿಗೆ ಶುಕ್ರನ ಪ್ರವೇಶ, 3 ರಾಶಿಗಳ ಜನರು ಮುಟ್ಟಿದ್ದೆಲ್ಲಾ ಚಿನ್ನ!

 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

1 /3

ವೃಷಭ ರಾಶಿ- ಸೂರ್ಯಗ್ರಹಣದ ಸಮಯದಲ್ಲಿ ಹಂಸ ರಾಜಯೋಗ ನಿರ್ಮಾಣದಿಂದ ವೃಷಭ ರಾಶಿಯವರ ಆರ್ಥಿಕ ಸ್ಥಿತಿಯಲ್ಲಿ ಅಪಾರ ಸುಧಾರಣೆ ಕಂಡುಬರಲಿದೆ.  ವ್ಯಾಪಾರ ವರ್ಗದ ಸ್ಥಳೀಯರಿಗೆ ಇದರಿಂದ ಅಧಿಕ ಲಾಭ ಸಿಗಲಿದೆ, ಸ್ಥಗಿತಗೊಂಡಿದ್ದ ಕೆಲಸಗಳೆಲ್ಲವೂ ಪೂರ್ಣಗೊಳ್ಳಲಿವೆ. ಕೌಟುಂಬಿಕ ಜೀವನದಲ್ಲಿ ಸಂತಸದ ವಾತಾವರಣ ಇರಲಿದೆ. ಹೂಡಿಕೆಯ ದೃಷ್ಟಿಯಿಂದ ಇದು ಅತ್ಯುತ್ತಮ ಸಮಯವಾಗಿದೆ. ಗ್ರಹಣದ ನಂತರ ನೀವು ಮಾಡುವ ಯೋಜನೆಗಳು ನಿಮಗೆ ದೀರ್ಘಾವಧಿಯ ಪ್ರಯೋಜನಗಳನ್ನು ನೀಡಲಿವೆ.  

2 /3

ಕನ್ಯಾ ರಾಶಿ- ಹಂಸ ರಾಜ ಯೋಗ ನಿರ್ಮಾಣದಿಂದ ಕನ್ಯಾ ರಾಶಿಯ ಜನರು ಆರ್ಥಿಕ ಸಮಸ್ಯೆಗಳಿಂದ ಮುಕ್ತರಾಗಲಿದ್ದಾರೆ, ಇದರಿಂದ ನೀವು ವ್ಯಾಪಾರದಲ್ಲಿ ಅಪಾರ  ಲಾಭವನ್ನು ಪಡೆಯುವಿರಿ. ಕೆಲಸದ ಸ್ಥಳದಲ್ಲಿ ಪ್ರಗತಿಗೆ ಅವಕಾಶಗಳಿವೆ, ಮದುವೆಗೆ ಸಂಬಂಧಿಸಿದ ಸಮಸ್ಯೆಗಳಿರುವ ಸ್ಥಳೀಯರ ಅಡೆತಡೆಗಳು ದೂರಾಗಲಿವೆ. ನಿಮಗೆ  ಕುಟುಂಬದ ಸಂಪೂರ್ಣ ಬೆಂಬಲ ಸಿಗಲಿದೆ. ಈ ಸಮಯದಲ್ಲಿ, ಕೆಲಸದಲ್ಲಿ ಯಾವುದೇ ಆತುರತೆಯನ್ನು ತೋರಿಸಬೇಡಿ.  

3 /3

ಮೀನ ರಾಶಿ - ಸೂರ್ಯ ಗ್ರಹಣ ಮೀನ ಆದಾಯವನ್ನು ಹೆಚ್ಚಿಸುವ ಅವಕಾಶಗಳನ್ನು ಸೃಷ್ಟಿಸಲಿದೆ. ಉನ್ನತ ಅಧಿಕಾರಿಗಳೊಂದಿಗಿನ ನಿಮ್ಮ ಸಂಬಂಧಗಳು ಗಟ್ಟಿಗೊಳ್ಳಲಿವೆ. ನೀವು ಮಾಡುವ ಪ್ರತಿಯೊಂದು ಪ್ರಯತ್ನವೂ ಫಲಪ್ರದ ಸಿದ್ಧ ಸಾಬೀತಾಗಲಿದೆ. ನೀವು ದೀರ್ಘಕಾಲದಿಂದ ಪರದಾಡುತ್ತಿರುವ ಕೆಲಸಗಳಲ್ಲಿ ನೀವು ಯಶಸ್ಸನ್ನು ಪಡೆಯುವಿರಿ. ಉದ್ಯೋಗದಲ್ಲಿ ಬಡ್ತಿ ಮತ್ತು ಇಂಕ್ರಿಮೆಂಟ್ ಸಾಧ್ಯತೆಗಳಿವೆ. (ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿವೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)