ಮೂರು ದಶಕಗಳ ಬಳಿಕ ಶನಿ-ಗುರುವಿನ ವಿಶೇಷ ಸಂಯೋಜನೆ, 4 ರಾಶಿಗಳ ಜನರಿಗೆ ಆಕಸ್ಮಿಕ ಧನಲಾಭ-ಭಾಗ್ಯೋದಯ ಯೋಗ!

Saturn Jupitar Conjunction: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಸುದೀರ್ಘ 30 ವರ್ಷಗಳ ಬಳಿಕ ಶನಿ ತನ್ನ ಸ್ವರಾಶಿಯಾಗಿರುವ ಕುಂಭ ಹಾಗೂ 12 ವರ್ಷಗಳ ಬಳಿಕ ದೇವಗುರು ಬೃಹಸ್ಪತಿ ತನ್ನ ಸ್ವರಾಶಿಯಾಗಿರುವ ಮೀನ ರಾಶಿಯಲ್ಲಿ ವಿರಾಜಮಾನನಾಗಿದ್ದು, 4  ರಾಶಿಗಳ ಜಾತಕದವರಿಗೆ ಆಕಸ್ಮಿಕ ಧನಲಾಭ ಹಾಗೂ ಭಾಗ್ಯೋದಯ ಕರುಣಿಸಲಿದ್ದಾರೆ. ಆ ಅದೃಷ್ಟದ ನಾಲ್ಕು ರಾಶಿಗಳು ಯಾವುವು ತಿಳಿದುಕೊಳ್ಳೋಣ ಬನ್ನಿ,
 

Shani-Guru Shubh Yog: ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಎಲ್ಲಾ ಗ್ರಹಗಳು ಒಂದು ನಿಶ್ಚಿತ ಕಾಲಾಂತರದಲ್ಲಿ ತನ್ನ ರಾಶಿಯನ್ನು ಬದಲಾಯಿಸುತ್ತವೆ. ಇದು ಮಾನವ ಜೀವನ, ದೇಶ ಮತ್ತು ಇಡೀ ಜಗತ್ತಿನ ಮೇಲೆ ಪ್ರಭಾವ ಬೀರುತ್ತವೆ.  ಸುದೀರ್ಘ 3 ದಶಕಗಳ ಬಳಿಕ ಈ ಬಾರಿಯ ಹೋಳಿ ಹಬ್ಬದಂದು ಒಂದು ವಿಶೇಷ ಯೋಗ ರೂಪುಗೊಳ್ಳಲಿದೆ. 30 ವರ್ಷಗಳ ನಂತರ ಶನಿಯು ತನ್ನ  ಸ್ವರಾಶಿ ಕುಂಭದಲ್ಲಿ ವಿರಜಮಾನನಾಗಿದ್ದರೆ ಮತ್ತು 12 ವರ್ಷಗಳ ನಂತರ ದೇವ ಗುರು ಬೃಹಸ್ಪತಿ ತನ್ನ ಸ್ವರಾಶಿ ಮೀನದಲ್ಲಿ ವಿರಾಜಮಾನನಾಗಿದ್ದಾನೆ. ಇದರಿಂದ ಆ  ದಿನ ತ್ರಿಗ್ರಹಿ ಯೋಗವೂ ರೂಪುಗೊಳ್ಳುತ್ತಿದೆ. ಇದರ ಪ್ರಭಾವ ಎಲ್ಲಾ ದ್ವಾದಶ ರಾಶಿಗಳ ಮೇಲೆ ಗೋಚರಿಸಲಿದೆ. ಆದರೆ 4 ರಾಶಿಯವರಿಗೆ ಈ ಯೋಗದಿಂದ ಆಕಸ್ಮಿಕ ಧನಲಾಭ ಮತ್ತು ಪ್ರಗತಿಯ ಸಾಧ್ಯತೆಗಳು ಗೋಚರಿಸುತ್ತಿದೆ. ಈ ಅದೃಷ್ಟದ ರಾಶಿಗಳು ಯಾವುವು ತಿಳಿದುಕೊಳ್ಳೋಣ ಬನ್ನಿ,

 

ಇದನ್ನೂ ಓದಿ-Rajyog: 30 ವರ್ಷಗಳ ಬಳಿಕ 3 ರಾಶಿಗಳ ಕುಂಡಲಿಯಲ್ಲಿ ನಿರ್ಮಾಣಗೊಳ್ಳುತ್ತಿದೆ ಈ ಶುಭಯೋಗ, ಆಕಸ್ಮಿಕ ಧನಲಾಭದ ಜೊತೆಗೆ ಬಡ್ತಿ ಭಾಗ್ಯ!

 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /4

ವೃಷಭ ರಾಶಿ- ಗುರು ಮತ್ತು ಶನಿದೇವರ ಸಂಯೋಜನೆಯು ನಿಮಗೆ ಲಾಭದಾಯಕವೆಂದು ಸಾಬೀತಾಗಲಿದೆ. ನಿಮ್ಮ ಜಾತಕದಲ್ಲಿ ಗುರು ಗ್ರಹವು ಆದಾಯದ ಸ್ಥಳದಲ್ಲಿ ಸಂಚಾರ ಮಾಡುತ್ತಿದ್ದು, ಶನಿದೇವನು ಕಾರ್ಯಾಧಿಪತಿಯ ಸ್ಥಾನದಲ್ಲಿದ್ದಾನೆ. ಹೀಗಾಗಿ ಈ ಅವಧಿಯಲ್ಲಿ ನಿಮ್ಮ ಆದಾಯದಲ್ಲಿ ಉತ್ತಮ ಏರಿಕೆ ಕಂಡುಬರಲಿದೆ. ನಿರುದ್ಯೋಗಿಗಳು ಈ ಅವಧಿಯಲ್ಲಿ ಹೊಸ ಉದ್ಯೋಗವನ್ನು ಸಹ ಪಡೆಯಬಹುದು. ಇದೇ ವೇಳೆ ನೀವು ಹಲವು ಮೂಲಗಳಿಂದ ಹಣವನ್ನು ಪಡೆಯುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ಮತ್ತೊಂದೆಡೆ, ಹೋಳಿ ನಂತರ ಉದ್ಯೋಗಿಗಳಿಗೆ ಬಡ್ತಿ ಮತ್ತು ಇನ್ಕ್ರಿಮೆಂಟ್ ಯೋಗ ಕೂಡ ನಿರ್ಮಾಣಗೊಳ್ಳುತ್ತಿದೆ. ಕೆಲಸದ ಸ್ಥಳದಲ್ಲಿ ನಿಮಗೆ ಕಿರಿಯರ ಮತ್ತು ಹಿರಿಯರ ಬೆಂಬಲ ಕೂಡ ಸಿಗಲಿದೆ.  

2 /4

ಮಿಥುನ ರಾಶಿ- ಶನಿ ಮತ್ತು ಗುರುಗಳ ವಿಶೇಷ ಸಂಯೋಜನೆಯು ನಿಮಗೆ ಅನುಕೂಲಕರವಾಗಿದೆ. ಏಕೆಂದರೆ ಶನಿದೇವನು ನಿಮ್ಮ ಜಾತಕದಲ್ಲಿ ನವಮೇಶನಾಗಿದ್ದರೆ ಮತ್ತು ಗುರು ದಶಮೇಶನಾಗಿದ್ದಾನೆ. ಹೀಗಾಗಿ ಈ ಅವಧಿಯಲ್ಲಿ  ನಿಮ್ಮ ಅದೃಷ್ಟವು ನಿಮ್ಮೊಂದಿಗೆ ಇರಲಿದೆ. ಅಲ್ಲದೆ, ಈ ಅವಧಿಯಲ್ಲಿ, ನೀವು ಕೆಲಸ ಮತ್ತು ವ್ಯವಹಾರಕ್ಕೆ ಸಂಬಂಧಿಸಿದಂತೆ ಪ್ರಯಾಣಿಸುವ ಸಾಧ್ಯತೆ ಇದೆ, ಅದು ನಿಮಗೆ ಸಾಕಷ್ಟು ಪ್ರಯೋಜನಗಳನ್ನು ನೀಡಲಿದೆ. ಮತ್ತೊಂದೆಡೆ, ಉದ್ಯಮಿಗಳು ಈ ಅವಧಿಯಲ್ಲಿ ವಿಶೇಷ ಲಾಭವನ್ನು ಪಡೆಯಬಹುದು. ಅಲ್ಲದೆ, ವಿದೇಶದಲ್ಲಿ ಅಧ್ಯಯನ ಮಾಡಲು ಬಯಸುವ ವಿದ್ಯಾರ್ಥಿಗಳ ಆಸೆ ಈಡೇರಲಿದೆ,  

3 /4

ವೃಶ್ಚಿಕ ರಾಶಿ- ಗುರು ಮತ್ತು ಶನಿದೇವರ ಸಂಯೋಜನೆಯು ನಿಮಗೆ ಸಾಕಷ್ಟು ಅನುಕೂಲಗಳನ್ನು ನೀಡಲಿದೆ. ಏಕೆಂದರೆ ಈ ಸಮಯದಲ್ಲಿ ಶನಿದೇವರು ನಿಮ್ಮ ರಾಶಿಯ ಚತುರ್ಥ ಭಾವದಲ್ಲಿ ಮತ್ತು ಗುರು ಪಂಚಮ ಭಾವದಲ್ಲಿ ಸಂಚರಿಸುತ್ತಿದ್ದಾರೆ. ಹೀಗಾಗಿ ನೀವು ಈ ಸಮಯದಲ್ಲಿ ಭೌತಿಕ ಸುಖಗಳನ್ನು ಪಡೆಯಬಹುದು. ಅಲ್ಲದೆ, ಈ ಸಮಯದಲ್ಲಿ ನೀವು ವಾಹನ ಮತ್ತು ಆಸ್ತಿಯನ್ನು ಖೆರೀದಿಸುವ ಸಾಧ್ಯತೆ ಇದೆ. ಮತ್ತೊಂದೆಡೆ, ಆಹಾರ, ಆಸ್ತಿ ಮತ್ತು ರಿಯಲ್ ಎಸ್ಟೇಟ್ ವ್ಯವಹಾರವನ್ನು ಹೊಂದಿದವರಿಗೆ ಈ ಸಮಯವು ಅದ್ಭುತವಾಗಿದೆ.ಈ ಅವಧಿಯಲ್ಲಿ ನೀವು ಮಗುವಿನ ಕಡೆಯಿಂದ ಕೆಲವು ಒಳ್ಳೆಯ ಸುದ್ದಿಗಳನ್ನು ಪಡೆಯಬಹುದು. ಅಲ್ಲದೆ, ಈ ಅವಧಿಯಲ್ಲಿ ನೀವು ಪ್ರೀತಿಯ ಸಂಬಂಧದಲ್ಲಿ ಯಶಸ್ಸನ್ನು ಪಡೆಯಬಹುದು.  

4 /4

ಕುಂಭ ರಾಶಿ- ಶನಿ ಮತ್ತು ಗುರುದೇವರ ಸಂಯೋಜನೆಯು ಕುಂಭ ರಾಶಿಯವರಿಗೆ ಮಂಗಳಕರ ಮತ್ತು ಫಲಪ್ರದ ಸಾಬೀತಾಗಲಿದೆ. ಏಕೆಂದರೆ ಶನಿ ದೇವನು ನಿಮ್ಮ ಜಾತಕದ ಲಗ್ನ ಭಾವದಲ್ಲಿ ಮತ್ತು ಗುರು ನಿಮ್ಮ ಸಂಚಾರ ಜಾತಕದ ದ್ವಾದಶ ಭಾವದಲ್ಲಿ ಸಂಚರಿಸುತ್ತಿದ್ದಾರೆ.  ಈ ಅವಧಿಯಲ್ಲಿ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುವುದನ್ನು ನೀವು ನೋಡಬಹುದು. ಅಲ್ಲದೆ, ಈ ಸಮಯದಲ್ಲಿ ನೀವು ನಿಮ್ಮ ಸಂಗಾತಿಯೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿರುತ್ತೀರಿ. ಧನಲಾಭಕ್ಕೆ ಅವಕಾಶವಿರುತ್ತದೆ. ಇದರೊಂದಿಗೆ, ಈ ಸ್ಥಳೀಯ ಜಾತಕದವರು ಶಿಕ್ಷಣ ಕ್ಷೇತ್ರದಲ್ಲಿ ಅತ್ಯುತ್ತಮ ಫಲಿತಾಂಶಗಳನ್ನು ಪಡೆಯುತ್ತಾರೆ. ಮತ್ತೊಂದೆಡೆ, ಅವಿವಾಹಿತರಿಗೆ ಮದುವೆ ಪ್ರಸ್ತಾಪ ಬರುವ ಸಾಧ್ಯತೆ ಇದೆ. (ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)