Rajyog: 30 ವರ್ಷಗಳ ಬಳಿಕ 3 ರಾಶಿಗಳ ಕುಂಡಲಿಯಲ್ಲಿ ನಿರ್ಮಾಣಗೊಳ್ಳುತ್ತಿದೆ ಈ ಶುಭಯೋಗ, ಆಕಸ್ಮಿಕ ಧನಲಾಭದ ಜೊತೆಗೆ ಬಡ್ತಿ ಭಾಗ್ಯ!

Guru Gochar In Aries: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಶೀಘ್ರದಲ್ಲಿಯೇ ದೇವಗುರು ಬೃಹಸ್ಪತಿಯ ಮೇಷ ಗೋಚರ ನೆರವೇರಲಿದೆ. ಈ ಗೋಚರ ಮೂರು ರಾಶಿಯ ಜಾತಕದವರ ಕುಂಡಲಿಯಲ್ಲಿ ಗಜಲಕ್ಷ್ಮಿ ರಾಜಯೋಗ ನಿರ್ಮಿಸುತ್ತಿದೆ. ಇದರಿಂದ ಈ ಮೂರೂ ರಾಶಿಗಳ ಜನರಿಗೆ ಆಕಸ್ಮಿಕ ಧನಲಾಭ ಹಾಗೂ ವೃತ್ತಿ ಜೀವನದಲ್ಲಿ ಬಡ್ತಿ ಭಾಗ್ಯ ಸಿಗುವ ಸಾಧ್ಯತೆ ಇದೆ.  

Written by - Nitin Tabib | Last Updated : Mar 4, 2023, 07:13 PM IST
  • ಬೃಹಸ್ಪತಿಯನ್ನು ದೇವತೆಗಳ ಗುರು ಎಂದು ಭಾವಿಸಲಾಗುತ್ತದೆ.
  • ಏಪ್ರಿಲ್ 22, 2023 ರಂದು ಬೆಳಗ್ಗೆ 3.33ಕ್ಕೆ ಗುರು ಮೀನ ರಾಶಿಯನ್ನು ತೊರೆದು ಮೇಷ ರಾಶಿಯನ್ನು ಪ್ರವೇಶಿಸಲಿದೆ.
  • ಚಂದ್ರ ಈ ರಾಶಿಯಲ್ಲಿ ಈಗಾಗಲೇ ವಿರಾಜಮಾನನಾಗಿದ್ದಾನೆ.
Rajyog: 30 ವರ್ಷಗಳ ಬಳಿಕ 3 ರಾಶಿಗಳ ಕುಂಡಲಿಯಲ್ಲಿ ನಿರ್ಮಾಣಗೊಳ್ಳುತ್ತಿದೆ ಈ ಶುಭಯೋಗ, ಆಕಸ್ಮಿಕ ಧನಲಾಭದ ಜೊತೆಗೆ ಬಡ್ತಿ ಭಾಗ್ಯ! title=
3 ರಾಶಿಗಳ ಜನರ ಕುಂಡಲಿಯಲ್ಲಿ ಮಹಾಯೋಗ!

Gajlakshmi Rajyog: ಎಲ್ಲಾ 9 ಗ್ರಹಗಳು ಕಾಲಕಾಲಕ್ಕೆ ತಮ್ಮ ರಾಶಿಯನ್ನು ಪರಿವರ್ತಿಸುತ್ತವೆ ಮತ್ತು ಇತರ ಗ್ರಹಗಳ ಜೊತೆಗೆ ಮೈತ್ರಿಯನ್ನು ಮಾಡಿಕೊಳ್ಳುತ್ತವೆ. ಗ್ರಹಗಳ ಈ ಗೋಚರ ಹಾಗೂ ಗ್ರಹಗಳ ಈ ಯುತಿ ಶುಭ ಹಾಗೂ ಅಶುಭ ಯೋಗಗಳನ್ನು ರೂಪಿಸುತ್ತವೆ. ಇನ್ನೂ ಕೆಲವೇ ದಿನಗಳಲ್ಲಿ ಹೋಳಿ ಹಬ್ಬ ಆಗಮಿಸುತ್ತಿದೆ. ಹೋಳಿ ಹಬ್ಬದ ನಂತರ ಅತ್ಯಂತ ಶುಭ ಯೋಗವೊಂದು ನಿರ್ಮಾಣಗೊಳ್ಳುತ್ತಿದೆ. ಜೋತಿಷ್ಯ ಪಂಡಿತರ ಪ್ರಕಾರ, ಏಪ್ರಿಲ್ 22, 2023 ರಂದು ದೇವಗುರು ಬೃಹಸ್ಪತಿ ಮೀನ ರಾಶಿಯನ್ನು ತೊರೆದು ಮೇಷ ರಾಶಿಯನ್ನು ಪ್ರವೇಶಿಸಲಿದೆ. ಹೀಗಿರುವಾಗ ಮೇಷ ರಾಶಿಯಲ್ಲಿ ಈಗಾಗಲೇ ಇರುವ ಚಂದ್ರನ ಜೊತೆಗೆ ಗುರುವಿನ ಮೈತ್ರಿ ನೆರವೇರಿ ಗಜಲಕ್ಷ್ಮಿ ರಾಜಯೋಗ ನಿರ್ಮಾಣಗೊಳ್ಳಲಿದೆ. ಈ ಗಜಲಕ್ಷ್ಮಿ ಯೋಗ ಹಲವು ರಾಶಿಗಳ ಪಾಲಿಗೆ ಅತ್ಯಂತ ಶುಭ ಸಾಬೀತಾಗಲಿದೆ. 

ಬೃಹಸ್ಪತಿಯನ್ನು ದೇವತೆಗಳ ಗುರು ಎಂದು ಭಾವಿಸಲಾಗುತ್ತದೆ. ಏಪ್ರಿಲ್ 22, 2023 ರಂದು ಬೆಳಗ್ಗೆ 3.33ಕ್ಕೆ ಗುರು ಮೀನ ರಾಶಿಯನ್ನು ತೊರೆದು ಮೇಷ ರಾಶಿಯನ್ನು ಪ್ರವೇಶಿಸಲಿದೆ. ಚಂದ್ರ ಈ ರಾಶಿಯಲ್ಲಿ ಈಗಾಗಲೇ ವಿರಾಜಮಾನನಾಗಿದ್ದಾನೆ. ಹೀಗಾಗಿ ಮೇಷ ರಾಶಿಯಲ್ಲಿ ಗುರು ಹಾಗೂ ಚಂದ್ರರ ಮೈತ್ರಿಯಿಂದ ಗಜಲಕ್ಷ್ಮಿ ರಾಜಯೋಗ ನಿರ್ಮಾಣಗೊಳ್ಳಲಿದೆ. ಜೋತಿಷ್ಯ ಶಾಸ್ತ್ರದ ಪ್ರಕಾರ ಈ ಯೋಗದಿಂದ ಧನ-ಸುಖ, ಸಮೃದ್ಧಿಯಲ್ಲಿ ಹೆಚ್ಚಳವಾಗುತ್ತದೆ. ಇದರ ಜೊತೆಗೆ ಗಜಲಕ್ಷ್ಮಿ ರಾಜಯೋಗ ಯಾವ ರಾಶಿಯ ಮೇಲೆ ನಿರ್ಮಾಣಗೊಳ್ಳುತ್ತದೆಯೋ, ಆ ರಾಶಿಯ ಮೇಲೆ ಶನಿಯ ಸಾಡೆಸಾತಿ ಅಂತ್ಯವಾಗುತ್ತದೆ ಎನ್ನಲಾಗುತ್ತದೆ. ಹೋಳಿ ಹಬ್ಬದ ಬಳಿಕ ನಿರ್ಮಾಣಗೊಳ್ಳುತ್ತಿರುವ ಈ ಯೋಗ ಯಾವ ರಾಶಿಗಳ ಜನರಿಗೆ ಲಾಭಕಾರಿ ಸಾಬೀತಾಗಲಿದೆ ತಿಳಿದುಕೊಳ್ಳೋಣ ಬನ್ನಿ,

ಮೇಷ ರಾಶಿ- ಗಜಲಕ್ಷ್ಮಿ ರಾಜಯೋಗದಿಂದ ಮೇಷ ರಾಶಿಯ ಜನರಿಗೆ ಉತ್ತಮ ಫಲಿತಾಂಶಗಳು ಪ್ರಾಪ್ತಿಯಾಗಲಿವೆ. ನೌಕರಿಯ ಹುಡುಕಾಟದಲ್ಲಿ ನಿರತರಾದವರ ಹುಡುಕಾಟ ಅಂತ್ಯವಾಗಲಿದೆ. ಕಾರ್ಯಕ್ಷೇತ್ರದಲ್ಲಿ ಪ್ರಶಂಶೆ ನಿಮ್ಮದಾಗಲಿದೆ. ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ವಿದ್ಯಾರ್ಥಿಗಳಿಗೆ ಯಶಸ್ಸು ಸಿಗಲಿವೆ. ಪ್ರೇಮ ಸಂಬಂಧಕ್ಕೆ ಸಮಯ ತುಂಬಾ ಅನುಕೂಲಕರವಾಗಿದೆ. ಅವಿವಾಹಿತರಿಗೆ ಕಂಕಣ ಬಲ ಕೂಡಿ ಬರಲಿದೆ. ದಾಂಪತ್ಯ ಜೀವನ ಸುಖದಿಂದ ಕೂದಿರಲಿದೆ. ಭಾಗ್ಯದ ಸಾಥ್ ನಿಮಗೆ ಸಿಗಲಿದೆ. ಇದರಿಂದ ಎಲ್ಲಾ ಕೆಲಸಗಳಲ್ಲಿ ನಿಮಗೆ ಕಾರ್ಯಸಿದ್ಧಿ ಪ್ರಾಪ್ತಿಯಾಗಲಿದೆ. ಹಳೆ ಮತ್ತು ನೆನಗುದಿಗೆ ಬಿದ್ದ ಕೆಲಸ ಕಾರ್ಯಗಳಲ್ಲಿ ಯಶಸ್ಸು ಸಿಗಲಿದೆ. ಆದಾಯದಲ್ಲಿಯೂ ಕೂಡ ಹೆಚ್ಚಳವಾಗುವ ಸಾಧ್ಯತೆ ಇದೆ.  

ಮಿಥುನ ರಾಶಿ-  ಗಜಲಕ್ಷ್ಮಿ ರಾಜಯೋಗದ ಕಾರಣ ನಿಮ್ಮ ಆದಾಯದಲ್ಲಿ ಅಪಾರ ಹೆಚ್ಚಳವಾಗಲಿದೆ. ಹಳೆ ಹೂಡಿಕೆಗಳು ಕೂಡ ನಿಮಗೆ ಲಾಭ ನೀಡಲಿವೆ. ವ್ಯಾಪಾರದಲ್ಲಿ ಲಾಭದ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ವಿದ್ಯಾರ್ಥಿಗಳಿಗೆ ಶಿಕ್ಷಣ ಕ್ಷೇತ್ರದಲ್ಲಿ ಅಡೆತಡೆಗಳ ಹೊರತಾಗಿಯೂ ಮುಂದುವರೆಯುವ ಅವಕಾಶ ಸಿಗಲಿದೆ. ಸಮಾಜದಲ್ಲಿ ನಿಮ್ಮ ಘನತೆ-ಗೌರವ ಹೆಚ್ಚಾಗಲಿದೆ. ದಾಂಪತ್ಯ ಜೀವನ ಸುಖಮಯವಾಗಿರಲಿದೆ. ಸಿಂಗಲ್ ಆಗಿರುವ ಜಾತಕದವರ ಜೀವನದಲ್ಲಿ ಹೊಸ ವ್ಯಕ್ತಿಯ ಎಂಟ್ರಿ ಸಾಧ್ಯತೆಗಳಿವೆ. ಅವರೊಂದಿಗೆ ಒಂದು ಗಟ್ಟಿ ಸಂಬಂಧ ನಿರ್ಮಿಸುವ ಆಲೋಚನೆ ನಿಮ್ಮ ಮನದಲ್ಲಿ ಬರಲಿದೆ.  

ಇದನ್ನೂ ಓದಿ-ಸುದೀರ್ಘ 30 ವರ್ಷಗಳ ಬಳಿಕ ಕುಂಭ ರಾಶಿಯಲ್ಲಿ ಈ ಯೋಗ ನಿರ್ಮಾಣ, ವಜ್ರದಂತೆ ಹೊಳೆಯಲಿದೆ 3 ರಾಶಿಗಳ ಜನರ ಭಾಗ್ಯ!

ಧನು ರಾಶಿ- ಗಜಲಕ್ಷ್ಮಿ ರಾಜಯೋಗ ಧನು ರಾಶಿಯ ಜಾತಕದವರಿಗೆ ಆಕಸ್ಮಿಕ ಧನಲಾಭ ನೀಡಲಿದೆ. ಏಕೆಂದರೆ ಗುರು ನಿಮ್ಮ ಜಾತಕದ ಪಂಚಮ ಭಾವದಲ್ಲಿ ಗೋಚರಿಸಲಿದ್ದಾನೆ. ಇದರಿಂದ ವ್ಯಾಪಾರಿಗಳಿಗೆ ಅವರ ವ್ಯಾಪಾರದಲ್ಲಿ ಅಪಾರ ಲಾಭ ಸಿಗುವ ಸಾಧ್ಯತೆ ಇದೆ. ಪ್ರೇಮ-ಸಂಬಂಧಗಳಲ್ಲಿ ಸುಮಧುರತೆ ಇರಲಿದೆ. ಶಿಕ್ಷಣದ ಕುರಿತು ಹೇಳುವುದಾದರೆ, ವಿದ್ಯಾರ್ಥಿಗಳು ವಿದೇಶಕ್ಕೆ ತೆರಳಿ ವ್ಯಾಸಂಗ ಮಾಡುವುದರ ಕುರಿತು ಸೀರಿಯಸ್ಸಾಗಿ ಯೋಚಿಸಬಹುದು. ಅವರಿಗೆ ಸಮಯ ತುಂಬಾ ಅನುಕೂಲಕರವಾಗಿದೆ.

ಇದನ್ನೂ ಓದಿ-Mangal Gochar 2023: ಮುಂದಿನ 69 ದಿನ ಮಿಥುನ ರಾಶಿಯಲ್ಲಿ ಮಂಗಳ, 3 ರಾಶಿಗಳ ಜನರಿಗೆ ಭಾರಿ ಧನಲಾಭ!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)  

ಇದನ್ನೂ ನೋಡಿ-

 

Trending News