Revenue From Alcohol Sales: ಕರೋನಾ ಸಾಂಕ್ರಾಮಿಕ (ಕೋವಿಡ್ -19) ನಂತರ ವಿಧಿಸಲಾದ ಲಾಕ್ಡೌನ್ನಿಂದಾಗಿ, ದೇಶದ ಬಹುತೇಕ ರಾಜ್ಯಗಳ ಆದಾಯದಲ್ಲಿ ಭಾರಿ ಇಳಿಕೆ ಕಂಡುಬಂದಿತ್ತು. ಲಾಕ್ಡೌನ್ ಅವಧಿಯಲ್ಲಿ ಅನೇಕ ರಾಜ್ಯ ಸರ್ಕಾರಗಳು ಮದ್ಯದ ಅಂಗಡಿಗಳನ್ನು ತೆರೆಯಲು ಅನುಮತಿ ಕಾರಣ ಭಾರಿ ಟೀಕೆಗಳು ಕೂಡ ವ್ಯಕ್ತವಾಗಿದ್ದವು.
Revenue From Alcohol Sales: ಕರೋನಾ ಸಾಂಕ್ರಾಮಿಕ (ಕೋವಿಡ್ -19) ನಂತರ ವಿಧಿಸಲಾದ ಲಾಕ್ಡೌನ್ನಿಂದಾಗಿ, ದೇಶದ ಬಹುತೇಕ ರಾಜ್ಯಗಳ ಆದಾಯದಲ್ಲಿ ಭಾರಿ ಇಳಿಕೆ ಕಂಡುಬಂದಿತ್ತು. ಲಾಕ್ಡೌನ್ ಅವಧಿಯಲ್ಲಿ ಅನೇಕ ರಾಜ್ಯ ಸರ್ಕಾರಗಳು ಮದ್ಯದ ಅಂಗಡಿಗಳನ್ನು ತೆರೆಯಲು ಅನುಮತಿ ಕಾರಣ ಭಾರಿ ಟೀಕೆಗಳು ಕೂಡ ವ್ಯಕ್ತವಾಗಿದ್ದವು. ಆದರೆ ಮದ್ಯ ಮಾರಾಟದಿಂದ ರಾಜ್ಯಗಳು ಎಷ್ಟು ಗಳಿಸುತ್ತವೆ ಎಂಬುದನ್ನು ನೀವು ಎಂದಾದರೂ ಯೋಚಿಸಿದ್ದೀರಾ? ಇಂದು ನಾವು ನಿಮಗೆ ಆಲ್ಕೋಹಾಲ್ನಿಂದ ಹೆಚ್ಚು ಆದಾಯವನ್ನು ಗಳಿಸುವ 5 ರಾಜ್ಯಗಳ ಬಗ್ಗೆ ಮಾಹಿತಿಯನ್ನು ನೀಡಲಿದ್ದೇವೆ.
ಇದನ್ನೂ ಓದಿ-Free Smartphone: Jio ಕಂಪನಿಯ ಸೂಪರ್ ಹಿಟ್ ಕೊಡುಗೆ! ಉಚಿತವಾಗಿ ಸಿಗುತ್ತಿದೆ 4G ಸ್ಮಾರ್ಟ್ ಫೋನ್
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
1. ಕರ್ನಾಟಕ - SBI State Finance Report 2021-22 ವರದಿಯ ಪ್ರಕಾರ, ದಕ್ಷಿಣ ಭಾರತದ ರಾಜ್ಯಗಳು ಅತಿ ಹೆಚ್ಚು ಮದ್ಯ ಮಾರಾಟವನ್ನು ಹೊಂದಿವೆ. ಕರ್ನಾಟಕದಲ್ಲಿ ರಾಜ್ಯ ಸರ್ಕಾರವು ಮದ್ಯದ ಮೇಲೆ ವಿಧಿಸುವ ತೆರಿಗೆಯಿಂದ ಶೇ.14.27 ರಷ್ಟು ಆದಾಯವನ್ನು ಗಳಿಸುತ್ತದೆ ಎಂದು ಹೇಳಿದರೆ ನಿಮಗೂ ಆಶ್ಚರ್ಯವಾಗಬಹುದು. ಅಂದರೆ, 100 ರೂ. ಮದ್ಯ ಮಾರಾಟವಾದರೆ, ಅದರಲ್ಲಿ ಸರ್ಕಾರದ ಆದಾಯ 14.27 ರೂ. ಆಗಿದೆ.
2. ದೆಹಲಿ - ಮದ್ಯಪಾನದಿಂದ ಅತಿ ಹೆಚ್ಚು ಗಳಿಕೆ ಮಾಡುವ ಎರಡನೇ ರಾಜ್ಯ ಎಂದರೆ ಅದು ರಾಷ್ಟ್ರರಾಜಧಾನಿ ದೆಹಲಿ, ದೆಹಲಿ ಸರ್ಕಾರ 100 ರೂಪಾಯಿ ಗಳಿಸಿದರೆ, ಮದ್ಯದ ಮೇಲಿನ ತೆರಿಗೆಯಿಂದ 11.37 ರೂಪಾಯಿ ಗಳಿಸುತ್ತದೆ.
3. ಹರಿಯಾಣ - ದೆಹಲಿಯ ನಂತರ ಹರಿಯಾಣದ ಸ್ಥಾನ ಈ ಪಟ್ಟಿಯಲ್ಲಿದೆ. ಹರಿಯಾಣ ಸರ್ಕಾರವು ಮದ್ಯದ ಮೇಲಿನ ತೆರಿಗೆಯಿಂದ ಶೇ.10.49 ಗಳಿಸುತ್ತದೆ. ರಾಜ್ಯ ಸರಕಾರಕ್ಕೆ 100 ರೂ. ಆದಾಯ ಬಂದರೆ ಅದರಲ್ಲಿ ಮದ್ಯ ಮಾರಾಟದಿಂದ 10.49 ರೂ. ಸುಂಕದ ರೂಪದಲ್ಲಿ ಬರುತ್ತದೆ.
4. ಉತ್ತರ ಪ್ರದೇಶ - ಉತ್ತರ ಪ್ರದೇಶದಲ್ಲಿ, ಮದ್ಯದ ಮೇಲೆ ವಿಧಿಸಲಾಗುವ ತೆರಿಗೆಯಿಂದ ರಾಜ್ಯ ಸರ್ಕಾರವು ಶೇ.9.92 ರಷ್ಟು ಗಳಿಕೆ ಮಾಡುತ್ತದೆ. ಅಂದರೆ, ಸರ್ಕಾರಕ್ಕೆ 100 ರೂ.ಗಳಿಂದ ಒಟ್ಟು 9.92 ರೂ.ಗಳ ಆದಾಯವು ಮದ್ಯದಿಂದ ಬರುತ್ತದೆ.
5. ತೆಲಂಗಾಣ - ಮದ್ಯದ ಆದಾಯ ಗಳಿಕೆಯಲ್ಲಿ ತೆಲಂಗಾಣ ರಾಜ್ಯ ಐದನೇ ಸ್ಥಾನದಲ್ಲಿದೆ. ತೆಲಂಗಾಣ ಸರ್ಕಾರ 100 ರೂಪಾಯಿ ಗಳಿಕೆಯಿಂದ 9.65 ರೂ.ಗಳನ್ನು ತೆರಿಗೆಯ ರೂಪದಲ್ಲಿ ಗಳಿಕೆ ಮಾಡುತ್ತದೆ
6. ಇತರ ರಾಜ್ಯಗಳ ಪರಿಸ್ಥಿತಿ ಹೇಗಿದೆ? - ಇದಲ್ಲದೆ ಪಶ್ಚಿಮ ಬಂಗಾಳದಲ್ಲಿ 100 ರೂ.ಗಳಲ್ಲಿ 8.62 ರೂ., ಮಧ್ಯಪ್ರದೇಶದಲ್ಲಿ ರೂ.7.35, ಪಂಜಾಬ್ನಲ್ಲಿ ರೂ.7.35, ಉತ್ತರಾಖಂಡದಲ್ಲಿ ರೂ.7.25, ರಾಜಸ್ಥಾನದಲ್ಲಿ ರೂ.7.19 ಮತ್ತು ಮಹಾರಾಷ್ಟ್ರದಲ್ಲಿ ರೂ.5.28 ರೂ. ಈ ಪಟ್ಟಿಯಲ್ಲಿ ಗುಜರಾತ್ ಸರ್ಕಾರವು ಕನಿಷ್ಠ ಆದಾಯವನ್ನು ಪಡೆದು ಕೊನೆಯ ಸ್ಥಾನದಲ್ಲಿದೆ. ಗುಜರಾತ್ ಕೇವಲ 100 ರೂ.ಗಳ ಮದ್ಯ ಮಾರಾಟದಿಂದ 0.09 ರೂ. ಮಾತ್ರ ಪಡೆದುಕೊಳ್ಳುತ್ತದೆ. ಇದೇ ವೇಳೆ, ಬಿಹಾರ ಸರ್ಕಾರವು ಮದ್ಯ ಮಾರಾಟದಿಂದ ಯಾವುದೇ ಹಣವನ್ನು ಗಳಿಸುವುದಿಲ್ಲ, ಏಕೆಂದರೆ ಅಲ್ಲಿ ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ.