ಫಸ್ಟ್‌ ಲವ್‌ ಬ್ರೇಕಪ್‌.. ಆಗ ಮಗು ಕೂಡ ಆಗಿತ್ತು.. ಇದೀಗ ಎರಡನೇ ಮದುವೆಯಾದ ಸ್ಟಾರ್‌ ನಟಿ..! ಕನ್ನಡಿಗರಿಗೂ ಈಕೆ ತುಂಬಾ ಇಷ್ಟ

Amy Jackson wedding : ದಿ ವಿಲನ್‌ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ಸುಂದರಿ ಆಮಿ ಜಾಕ್ಸನ್‌ ಲೈಪ್‌ ಒಂಥರಾ ಕ್ಯೂರಿಯಾಸಿಟಿ ಹುಟ್ಟಿಸುತ್ತೆ.. ಆಮಿ ಮಗುವಿಗೆ ಜನ್ಮ ನೀಡಿದ ನಂತರ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.  ಹಾಲಿವುಡ್ ನಟರೊಬ್ಬರನ್ನು ಪ್ರೀತಿಸಿ ಮದುವೆಯಾದರು. ಈಗ ಆ ಫೋಟೋಗಳು ವೈರಲ್ ಆಗುತ್ತಿವೆ.
 

1 /8

ಕನ್ನಡ, ತೆಲುಗು ಮತ್ತು ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದ ಹಾಲಿವುಡ್‌ನ ಖ್ಯಾತ ನಟಿ ಆಮಿ ಜಾಕ್ಸನ್ ಕೊನೆಗೂ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಹಾಲಿವುಡ್‌ ಖ್ಯಾತ ನಟನೊಂದಿಗೆ ಪ್ರೀತಿಯಲ್ಲಿದ್ದ ನಟಿ ಕೊನೆಗೂ ವಿವಾಹವಾಗಿದ್ದಾರೆ..  

2 /8

ಆಮಿ ಅವರು ಹಾಲಿವುಡ್ ನಟ ಎಡ್ ವೆಸ್ಟ್‌ವಿಕ್ ಅವರನ್ನು ಬಹಳ ದಿನಗಳಿಂದ ಪ್ರೀತಿಸುತ್ತಿದ್ದರು. ಇತ್ತೀಚೆಗೆ ಇಬ್ಬರ ವಿವಾಹ ಅದ್ಧೂರಿಯಾಗಿ ನೆರವೇರಿತು. ಆಮಿ ಜಾಕ್ಸನ್ ತಮ್ಮ ಮದುವೆಯ ಫೋಟೋಗಳನ್ನು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ..   

3 /8

ಆಮಿ ಜಾಕ್ಸನ್ ಮದುವೆ ಸಮಾರಂಭ ಇಟಲಿಯಲ್ಲಿ ಅದ್ಧೂರಿಯಾಗಿ ನೆರವೇರಿತು. 'ಹೊಸ ಪ್ರಯಾಣ ಶುರುವಾಗಿದೆ...' ಅಂತ ಶೀರ್ಷಿಕೆ ಬರೆದು ಚಿತ್ರಗಳನ್ನು ಹಂಚಿಕೊಂಡಿದ್ದಾರೆ.   

4 /8

ಬಿಳಿ ಗೌನ್‌ನಲ್ಲಿ ಆಮಿ ಜಾಕ್ಸನ್ ಮಿಂಚಿದ್ದರು. ಎಡ್ ವೆಸ್ಟ್‌ವಿಕ್ ಬಿಳಿ ಬ್ಲೇಜರ್ ಮತ್ತು ಕಪ್ಪು ಪ್ಯಾಂಟ್ ಧರಿಸಿದ್ದರು. ಈ ಜೋಡಿಯ ಫೋಟೋಗಳು ಇದೀಗ ಅಂತರ್ಜಾಲದಲ್ಲಿ ಟ್ರೆಂಡಿಂಗ್ ಆಗಿವೆ.   

5 /8

ಆಮಿ ಜಾಕ್ಸನ್ ಈ ಹಿಂದೆ ಉದ್ಯಮಿ ಜಾರ್ಜ್ ಪ್ಯಾನಿಯೊಟೌ ಜೊತೆ ಡೇಟಿಂಗ್ ನಡೆಸಿದ್ದರು. ಅಷ್ಟೇ ಅಲ್ಲ ಮದುವೆಯಾಗದೇ ಮಗುವಿಗೆ ಜನ್ಮ ನೀಡಿದ್ದರು. ಆಮಿ-ಜಾರ್ಜ್ 2020 ರಲ್ಲಿ ಮದುವೆಯಾಗಬೇಕಿತ್ತು, ಆದರೆ ಕರೋನಾ ಕಾರಣ ಅದನ್ನು ಮುಂದೂಡಲಾಗಿತ್ತು ಎನ್ನಲಾಗಿದೆ.   

6 /8

ಆ ಸಮಯದಲ್ಲಿ, ಆಮಿ ಜಾಕ್ಸನ್ ಮತ್ತು ಜಾರ್ಜ್ ಸಂಬಂಧ ಮುರಿದು ಬಿತ್ತು. ಈ ಮಧ್ಯೆ ನಟಿ ಜಾಕ್ಸನ್ ಜೊತೆ ತನ್ನ ಮಗನೊಂದಿಗೆ ಜೀವನ ಕಳೆಯುತ್ತಿದ್ದಳು. ಪ್ರಸ್ತುತ, ಮದುವೆಯಾಗಿದ್ದಾರೆ. ಹಾಲಿವುಡ್ ನಟ ಎಡ್ ವೆಸ್ಟ್‌ವಿಕ್ ಆಮಿಯನ್ನ ಮೊದಲ ಬಾರಿಗೆ ಸೌದಿ ಅರೇಬಿಯಾದಲ್ಲಿ ಭೇಟಿಯಾಗಿದ್ದರಂತೆ.. ಅದೇ ಸಮಯದಲ್ಲಿ ಅವರು ಮದುವೆ ಪ್ರಸ್ತಾಪ ಮಾಡಿದ್ದರು ಎನ್ನಲಾಗಿದೆ.   

7 /8

ಕನ್ನಡ ದಿ ವಿಲನ್‌, ಮತ್ತು ತಮಿಳಿನ ಐ, 2 ಮತ್ತು ಓ ಚಿತ್ರಗಳ ಜೊತೆಗೆ ರಾಮ್ ಚರಣ್ ಅಭಿನಯದ ಎವಡು ಚಿತ್ರದಲ್ಲಿ ಆಮಿ ಜಾಕ್ಸ್ ನಟಿಸಿದ್ದಾರೆ. ಸುದೀಪ್‌ ಜೊತೆ ದಿ ವಿಲನ್‌ನಲ್ಲಿ ನಟಿಸುವ ಮೂಲಕ ಆಮಿ ಕನ್ನಡಿಗರಿಗೆ ಹತ್ತಿವಾಗಿದ್ದರು..  

8 /8

ಆ್ಯಮಿ ಜಾಕ್ಸನ್ ಬಗ್ಗೆ ಹೇಳುವುದಾದರೆ... ಮಾಡೆಲಿಂಗ್ ಕ್ಷೇತ್ರದಿಂದ ಚಿತ್ರರಂಗಕ್ಕೆ ಬಂದ ನಟಿ ‘ಮದ್ರಾಸು ಟೌನ್’ ಸಿನಿಮಾದ ಮೂಲಕ ನಾಯಕಿಯಾಗಿ ವೃತ್ತಿ ಜೀವನ ಆರಂಭಿಸಿದ್ದರು. ತೆಲುಗಿನ 'ಎವಡು' ಮತ್ತು ಅಭಿನೇತ್ರಿ' ಚಿತ್ರಗಳಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿ ದಿ ವಿಲನ್‌ನಲ್ಲಿ ಕಾಣಿಸಿಕೊಂಡಿದ್ದಾರೆ.. ಈ ಸುಂದರಿ ನಟನೆ ವಿಕ್ರಮ್‌ ಅಭಿನಯದ ಐ ಸಿನಿಮಾ ಸೂಪರ್‌ ಹಿಟ್‌ ಆಗಿತ್ತು..