ಬೆಡ್‌ ರೂಂನಲ್ಲಿ ಮಲಗಿ ಬರ್ತ್‌ಡೇ ಆಚರಿಸಿಕೊಂಡ ನಟಿ ಅನಸೂಯಾ..! ಫೋಟೋಸ್‌ ವೈರಲ್‌

Anasuya Bharadwaj : ಟಾಲಿವುಡ್‌ ಫೇಮಸ್‌ ನಟಿ, ನಿರೂಪಕಿ ಅನಸೂಯಾ ತಮ್ಮ 39ನೇ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಂಡಿದ್ದಾರೆ. ಈ ಕುರಿತ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿವೆ. ಅಲ್ಲದೆ, ಪುಷ್ಪಾ 2 ಚಿತ್ರದಲ್ಲಿರುವ ನಟಿಯ ಫಸ್ಟ್‌ ಲುಕ್‌ ಸಹ ಬಿಡುಗೆಯಾಗಿದೆ..

1 /6

ಜಬರ್ದಸ್ತ್ ಖ್ಯಾತಿಯ ನಿರೂಪಿಕಿ ಅನಸೂಯಾ ಸದ್ಯಕ್ಕೆ ಸೋಷಿಯಲ್‌ ಮೀಡಿಯಾದಲ್ಲಿ ತಮ್ಮ ಟ್ರೆಂಡ್ ಮುಂದುವರೆಸಿದ್ದಾರೆ. ಸ್ಮಾಲ್ ಸ್ಕ್ರೀನ್‌ನಲ್ಲಿ ಹಲವು ಶೋಗಳನ್ನು ಮಾಡುವ ಮೂಲಕ ವಿಶೇಷ ಮನ್ನಣೆ ಗಳಿಸಿರುವ ಈ ಚೆಲುವೆ ಇದೀಗ ಬೆಳ್ಳಿತೆರೆಯಲ್ಲಿ ಮಿಂಚುತ್ತಿದ್ದಾಳೆ.  

2 /6

ತನ್ನ 39ನೇ ಹುಟ್ಟುಹಬ್ಬದವನ್ನು ಅನಸೂಯಾ ತಮ್ಮ ಪತಿ ಮತ್ತು ಮಕ್ಕಳೊಂದಿಗೆ ಅದ್ಧೂರಿಯಾಗಿ ಆಚರಿಸಿಕೊಂಡಿದ್ದಾರೆ. ಬೆಡ್‌ ರೂಂ ತೆಗೆದ ಫೋಟೋಗಳ ಜೊತೆಗೆ, ತಮ್ಮ ಪತಿ ಜೊತೆಗಿರುವ ರೊಮ್ಯಾಂಟಿಕ್ ಚಿತ್ರಗಳನ್ನು ಸಹ ನಟಿ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್‌ ಮಾಡಿಕೊಂಡಿದ್ದಾರೆ.   

3 /6

ಸಧ್ಯ ಅನಸೂಯ ಹುಟ್ಟು ಹಬ್ಬದ ಸ‍ಂಭ್ರಮದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿವೆ. ಶಾರ್ಟ್ ಡ್ರೆಸ್‌ನಲ್ಲಿ ಕಾಣಿಸಿಕೊಂಡಿರುವ ಸುಂದರಿ ಅನಸೂಯಾ ಸೌಂದರ್ಯಕ್ಕೆ ನೆಟ್ಟಿಗರು ಫಿದಾ ಆಗಿದ್ದು, ಹುಟ್ಟು ಹಬ್ಬದ ವಿಶ್‌ ಜೊತೆ ಕ್ಯೂಟ್‌ ಅಂತ ಕಾಮೆಂಟ್‌ ಮಾಡುತ್ತಿದ್ದಾರೆ.   

4 /6

ಕಾಲಕಾಲಕ್ಕೆ ತಮ್ಮ ಕುಟುಂಬದೊಂದಿಗೆ ಟ್ರಿಪ್‌ ಹೋಗುವ ನಟಿ ಈ ಕುರಿತ ಫೋಟೋಗಳು ಮತ್ತು ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಆದರೆ ಈ ಬಾರಿ ಅವರು ತಮ್ಮ ಪತಿ ಸುಶಾಂಕ್ ಭಾರದ್ವಾಜ್ ಅವರೊಂದಿಗೆ ಆನಂದಿಸಿದ ಕ್ಷಣಗಳನ್ನು ಹಂಚಿಕೊಂಡಿದ್ದಾರೆ.   

5 /6

ತೆಲುಗಿನ ಆ್ಯಂಕರ್‌ಗಳಲ್ಲಿ ಟ್ರೆಂಡ್ ಸೆಟ್ಟರ್ ಆಗಿ ಸ್ಮಾಲ್ ಸ್ಕ್ರೀನ್‌ನಲ್ಲಿ ಮಿಂಚಿದ್ದ ಅನಸೂಯಾ ಈಗ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದ್ದಾರೆ.   

6 /6

ಸದ್ಯ ಅನಸೂಯಾ ಅವರ ಕೈಯಲ್ಲಿ ಹಲವು ಪ್ರಾಜೆಕ್ಟ್‌ಗಳಿವೆ. ಪುಷ್ಪ-2 (Pushpa 2) ಚಿತ್ರದಲ್ಲಿ ಅನಸೂಯಾ ಪಾತ್ರ ಬಹುಮುಖ್ಯವಾಗಿರಲಿದೆ. ಅನಸೂಯಾ ಅನೇಕ ಲೇಡಿ ಓರಿಯೆಂಟೆಡ್ ಚಿತ್ರಗಳನ್ನು ಮಾಡುವ ಮೂಲಕ ಬೆಳ್ಳಿತೆರೆಯಲ್ಲಿ ತಮ್ಮ ಶಕ್ತಿಯನ್ನು ಪ್ರದರ್ಶನ ಮಾಡುತ್ತಿದ್ದಾರೆ. ಸದ್ಯ ಈ ಸುಂದರಿಯ ಕಾಲ್ ಶೀಟ್‌ಗಾಗಿ ನಿರ್ಮಾಪಕರು ಸಾಲುಗಟ್ಟಿ ನಿಂತಿದ್ದಾರೆ.