ಈ ಫೋಟೋದಲ್ಲಿರುವ ಹುಡುಗಿ ಯಾರೆಂದು ಗುರುತಿಸಬಲ್ಲಿರಾ? ಈಕೆ ಕನ್ನಡದ ಪ್ರಖ್ಯಾತ ನಿರೂಪಕಿ, ನಟಿಯೂ ಹೌದು!!

Famous Anchor Childhood Photo : ಖ್ಯಾತ ನಿರೂಪಕಿ ಅನುಶ್ರೀ ಹಂಚಿಕೊಂಡಿರುವ ತಮ್ಮ ಶಾಲೆಯ ಐಡಿ ಕಾರ್ಡ್‌ ಪೋಟೋಗೆ ನೆಟ್ಟಿಗರು ಕಾಮೆಂಟ್‌ಗಳ ಸುರಿಮಳೆಯನ್ನೇ ಸುರಿಸಿದ್ದಾರೆ. ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದರೆ, ಕೆಲವರು ಕಾಲೆಳೆದಿದ್ದಾರೆ. 
 

1 /6

ಖಾಲಿ ಕೈಯಲ್ಲಿ ಬೆಂಗಳೂರಿಗೆ ಬಂದು ಕಷ್ಟ ಪಟ್ಟು ಎಲ್ಲರೆದುರು ಬೆಳೆದು ಹಣ ಹೆಸರು ಸಂಪಾದಿಸಿರುವ ಅನೇಕ ಪ್ರತಿಭೆಗಳಲ್ಲಿ ನಿರೂಪಕಿ ಅನುಶ್ರೀ ಕೂಡಾ ಒಬ್ಬರು.   

2 /6

ಮಂಗಳೂರಿನ ಚೆಲುವೆ ಸದ್ಯ ಎಲ್ಲರ ಅಚ್ಚುಮೆಚ್ಚಿನ ಆಂಕರ್.‌ ಅನುಶ್ರೀ ಬರೀ ನಿರೂಪಕಿಯಾಗಿ ಮಾತ್ರವಲ್ಲ ನಟಿಯಾಗಿಯೂ ಹೆಸರು ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ಅನುಶ್ರೀ ಇದೀಗ ತಮ್ಮ ಬಾಲ್ಯದ ನೆನಪೊಂದನ್ನು ಹಂಚಿಕೊಂಡಿದ್ದಾರೆ.   

3 /6

ಸ್ಕೂಲ್‌ ಐಡಿ ಕಾರ್ಡ್‌ನ್ನು ಅನುಶ್ರೀ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ತಾವು ಓದಿದ ಅತ್ತಾವರದ ಶಾಲೆಯ ದಿನಗಳನ್ನು ನೆನಪಿಸಿಕೊಂಡು "ಈ ಹುಡುಗಿ ಯಾರೆಂದು ಗೊತ್ತಾ..? ಸ್ಟೂಡೆಂಟ್‌ ಲೈಫ್‌ ಇಸ್‌ ಗೋಲ್ಡನ್‌ ಲೈಫ್‌ ಅಂತಾರೇ ..ನಿಜ ಬೆಲೆ ಕಟ್ಟಲು ಅಸಾಧ್ಯ, ನಿಮ್ಮ ಸ್ಟೂಡೆಂಟ್‌ ಲೈಫ್‌ ಹೇಗಿತ್ತು? ಕಾಮೆಂಟ್‌ ಮಾಡಿ ಎಂದು ಬರೆದುಕೊಂಡಿದ್ದಾರೆ.   

4 /6

ಅನುಶ್ರೀ ತಮ್ಮ ಸ್ಕೂಲ್‌ ಪೋಟೋದಲ್ಲಿ ಕ್ಯೂಟ್‌ ಆಗಿ ಕಾಣುತ್ತಿದ್ದಾರೆ. ಹಣೆಗೆ ಕುಂಕುಮವನ್ನು ಇಟ್ಟಿದ್ದಾರೆ. ನಿರೂಪಕಿ ಅನುಶ್ರೀ ಶೇರ್‌ ಮಾಡಿಕೊಂಡಿರುವ ಪೋಟೋಗೆ ನೆಟ್ಟಿಗರು ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ.  

5 /6

 "ನೀವು ಆ ಸ್ಕೂಲ್‌ನಲ್ಲಿ ಸ್ಟೂಡೆಂಟ್‌ ಆಗಿದ್ದಾಗ ನಾನು ಟೀಚರ್‌ ಆಗಿದ್ದೆ ...ನಿಮ್ಮ ಸಾಧನೆ ಕಂಡು ಹೆಮ್ಮೆಯಾಗುತ್ತಿದೆ ಎಂದು ಶಿಕ್ಷಕಿಯೊಬ್ಬರು ಕಾಮೆಂಟ್‌ ಮಾಡಿದ್ದಾರೆ. ಇನ್ನೊಬ್ಬರು ಹಣೆಗೆ ಕುಂಕುಮ ಇಟ್ಟಿದ್ಯಾಕೆ ಎಂದೆಲ್ಲಾ ಪ್ರಶ್ನಿಸಿದ್ದಾರೆ.   

6 /6

ಸದ್ಯ ನಟಿ, ನಿರೂಪಕಿ ಅನುಶ್ರೀ ಕಾಲೇಜ್‌ ಐಡಿ ಕಾರ್ಡ್‌  ಪೋಟೋ ಸೋಷಿಯಲ್‌ ಮಿಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ.. ಅದಕ್ಕೆ ನೆಟ್ಟಿಗರಿಂದ ಕಾಮೆಂಟ್‌ಗಳು ಹರಿದು ಬರುತ್ತಿವೆ.