Anupam Mittal: ಹೇಗಿದೆ ಗೊತ್ತಾ ‘ಶಾರ್ಕ್ ಟ್ಯಾಂಕ್ ಇಂಡಿಯಾ’ ಜಡ್ಜ್ ಅನುಪಮ್ ಮಿತ್ತಲ್ ಐಷಾರಾಮಿ ಜೀವನ!

Anupam Mittal Net Worth: ಕಠಿಣ ಪರಿಶ್ರಮದಿಂದ ಮೇಲೆ ಬಂದ ‘ಶಾರ್ಕ್ ಟ್ಯಾಂಕ್ ಇಂಡಿಯಾ’ ರಿಯಾಲಿಟಿ ಶೋನ ಜಡ್ಜ್ ಅನುಮಪ್ ಮಿತ್ತಲ್ ಇಂದು ರಾಜನಂತೆ ಐಷಾರಾಮಿ ಜೀನವ ನಡೆಸುತ್ತಿದ್ದಾರೆ.

ಶಾರ್ಕ್ ಟ್ಯಾಂಕ್ ಇಂಡಿಯಾ ಅನುಪಮ್ ಮಿತ್ತಲ್ ಐಷಾರಾಮಿ ಜೀವನ: ಶಾರ್ಕ್ ಟ್ಯಾಂಕ್ ಇಂಡಿಯಾದ ಜಡ್ಜ್ ಅನುಪಮ್ ಮಿತ್ತಲ್ ಅವರಿಗೆ ಇಂದು ಯಾವುದೇ ಪರಿಚಯ ಅಗತ್ಯವಿಲ್ಲ. ಯಶಸ್ವಿ ಉದ್ಯಮಿಯಾಗಿರುವ ಶಾದಿ ಡಾಟ್ ಕಾಮ್ ನ ಮಾಲೀಕ ಅನುಪಮ್ ಇಂದು ರಾಜನಂತೆ ಐಷಾರಾಮಿ ಜೀವನ ನಡೆಸುತ್ತಿದ್ದಾರೆ. ಅವರ ಐಷಾರಾಮಿ ಬಂಗಲೆ ಮತ್ತು ಒಟ್ಟು ನಿವ್ವಳ ಮೌಲ್ಯದ ಮಾಹಿತಿ ಇಲ್ಲಿದೆ ನೋಡಿ.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ಅನುಪಮ್ ಮಿತ್ತಲ್ ಒಬ್ಬ ಯಶಸ್ವಿ ಉದ್ಯಮಿ. ‘ಶಾರ್ಕ್ ಟ್ಯಾಂಕ್ ಇಂಡಿಯಾ’ ರಿಯಾಲಿಟಿ ಶೋ ಅವರಿಗೆ ಹೆಚ್ಚಿನ ಮನ್ನಣೆ ನೀಡಿತು. ಇದರಲ್ಲಿ ಜಡ್ಜ್ ಆಗಿ ಕಾಣಿಸಿಕೊಂಡ ನಂತರ ಎಲ್ಲರಿಗೂ ಅನುಪಮ್ ಪರಿಚಯವಾಯಿತು. ತಮ್ಮ ಕಠಿಣ ಪರಿಶ್ರಮದಿಂದ 51ನೇ ವಯಸ್ಸಿನಲ್ಲಿ ಅನುಪಮ್ ರಾಜನಂತೆ ಐಷಾರಾಮಿ ಜೀವನ ನಡೆಸುತ್ತಿದ್ದಾರೆ.

2 /5

ದಕ್ಷಿಣ ಮುಂಬೈನ ಐಷಾರಾಮಿ ಬಂಗಲೆಯಲ್ಲಿ ಅನುಪಮ್ ಮಿತ್ತಲ್ ವಾಸಿಸುತ್ತಿದ್ದಾರೆ. ಅವರ ಮನೆಯ ಮೂಲೆ ಮೂಲೆಯೂ ಸುಂದರವಾಗಿದೆ. ಅವರ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ತಮ್ಮ ಮನೆಯ ಹಲವಾರು ಫೋಟೋಗಳನ್ನು ಅವರು ಹಂಚಿಕೊಂಡಿದ್ದಾರೆ. ಮುಂಬೈನ ಮೆಹ್ರಾನಾಜ್ ಸೊಸೈಟಿಯಲ್ಲಿ ಪತ್ನಿ ಆಂಚಲ್ ಮತ್ತು ಮಗಳೊಂದಿಗೆ ಈ ಐಷಾರಾಮಿ ಮನೆಯಲ್ಲಿ ಅವರು ವಾಸಿಸುತ್ತಿದ್ದಾರೆ. ಈ ಐಷಾರಾಮಿ ನಿವಾಸದ ಮೌಲ್ಯ ಕೋಟಿಗಟ್ಟಲೆ  ಇದೆ ಎಂದು ಹೇಲಾಗಿದೆ.  

3 /5

ಯಶಸ್ವಿ ಉದ್ಯಮಿ ಅನುಪಮ್ ಮಿತ್ತಲ್ ವಾಸಿಸುವ ಕಟ್ಟಡದ ದರ ಪ್ರತಿ ಚದರ ಅಡಿಗೆ 48,000 ರೂ. ಎಂದು ಹೇಳಲಾಗಿದೆ. ಆದ್ದರಿಂದ ಅನುಪಮ್ ಅವರ ಬಂಗಲೆಯ ಬೆಲೆ 15 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಇದರ ಬೆಲೆ ಇದಕ್ಕಿಂತಲೂ ಹೆಚ್ಚಿರಬಹುದು ಅಂತಾನೂ ಹೇಳಲಾಗುತ್ತಿದೆ. ಮನೆ ಹೊರಗಿನಿಂದ ಎಷ್ಟು ಸುಂದರವಾಗಿದೆಯೋ, ಒಳಗೂ ಸಹ ತುಂಬಾ ಅದ್ಭುತವಾಗಿದೆ.

4 /5

ಅನುಪಮ್ ಮಿತ್ತಲ್ ಅವರ ಐಷಾರಾಮಿ ಅಬಂಗಲೆಯ ಒಳಭಾಗ ತುಂಬಾ ಸುಂದರವಾಗಿದೆ. ಗೋಡೆಯು ದುಬಾರಿ ವರ್ಣಚಿತ್ರಗಳಿಂದ ಅಲಂಕರಿಸಲ್ಪಟ್ಟಿದೆ. ಜೊತೆಗೆ ಪ್ರಪಂಚದಾದ್ಯಂತ ಆಯ್ದ ವಸ್ತುಗಳು ಮನೆಯ ಪ್ರತಿಯೊಂದು ಮೂಲೆಯಲ್ಲಿಯೂ ಇರಿಸಲಾಗಿದೆ. ಇದು ಈ ಮನೆಯ ಅಂದವನ್ನು ಮತ್ತಷ್ಟು ಹೆಚ್ಚಿಸಿದ್ದು, ಐಷಾರಾಮಿ ಬಂಗಲೆಗೆ ಇನ್ನಷ್ಟು ಹೊಳಪು ನೀಡಿದೆ. ಮನೆಯ ಬಾಲ್ಕನಿ ಮತ್ತು ಟೆರೇಸ್‌ನಿಂದ ಸಮುದ್ರದ ಸುಂದರ ನೋಟವನ್ನು ವೀಕ್ಷಿಸಬಹುದು. ಇದು ಸೂರ್ಯಾಸ್ತದ ಸಮಯದಲ್ಲಿ ಇನ್ನಷ್ಟು ಸುಂದರವಾಗಿ ಕಾಣುತ್ತದೆ.

5 /5

ಉದ್ಯಮಿ ಅನುಪಮ್ ಮಿತ್ತಲ್ ನಿವ್ವಳ ಮೌಲ್ಯದ ಬಗ್ಗೆ ಹೇಳುವುದಾದರೆ, ಅವರು ಸುಮಾರು 185 ಕೋಟಿ ರೂ.ನ ಒಡೆಯರು. Shaadi.com, makaan.com, mouj ಮೊಬೈಲ್ ಅಪ್ಲಿಕೇಶನ್‌ನ ಮಾಲೀಕನಾಗಿರುವ ಅನುಪಮ್, ಪೀಪಲ್ ಗ್ರೂಪ್‌ನ ಸಂಸ್ಥಾಪಕರೂ ಆಗಿದ್ದಾರೆ. ಅನುಪಮ್ ಮಿತ್ತಲ್ ಅವರು ಶಾರ್ಕ್ ಟ್ಯಾಂಕ್ ಇಂಡಿಯಾ-2ರ ತೀರ್ಪುಗಾರರಾಗಿದ್ದು, ಅತಿಹೆಚ್ಚಿನ ಜನಪ್ರಿಯತೆ ಗಳಿಸಿದ್ದಾರೆ.