Milk With Dates: ಬಿಸಿ ಹಾಲಿನಲ್ಲಿ ಖಜೂರ ಬೆರೆಸಿ ಸೇವಿಸಿ, ಹಲವು ಕಾಯಿಲೆಗಳನ್ನು ದೂರವಿರಿಸಿ

Milk With Dates Benefits:ಹಾಲು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ತಂಪಾದ ವಾತಾವರಣದಲ್ಲಿ ಬಿಸಿ ಹಾಲು ಕುಡಿಯುವುದರಿಂದ ಹಲವಾರು ಪ್ರಯೋಜನಗಳು ಲಭಿಸುತ್ತವೆ. ಹಲವು ಕಡೆಗಳಲ್ಲಿ ಹಾಲು ಕುಡಿಯುವ ಪ್ರವೃತ್ತಿ ಇನ್ನೂ ಇದೆ. ಕೆಲವರು ಹಾಲಿಗೆ ಬಾದಾಮಿ ಸೇರಿಸಿ ಕುಡಿಯುತ್ತಾರೆ, ಇನ್ನು ಕೆಲವರು ಅದರಲ್ಲಿ ಅರಿಶಿನವನ್ನು ಬೆರೆಸುತ್ತಾರೆ.

Milk With Dates Benefits:ಹಾಲು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ತಂಪಾದ ವಾತಾವರಣದಲ್ಲಿ ಬಿಸಿ ಹಾಲು ಕುಡಿಯುವುದರಿಂದ ಹಲವಾರು ಪ್ರಯೋಜನಗಳು ಲಭಿಸುತ್ತವೆ. ಹಲವು ಕಡೆಗಳಲ್ಲಿ ಹಾಲು ಕುಡಿಯುವ ಪ್ರವೃತ್ತಿ ಇನ್ನೂ ಇದೆ. ಕೆಲವರು ಹಾಲಿಗೆ ಬಾದಾಮಿ ಸೇರಿಸಿ ಕುಡಿಯುತ್ತಾರೆ, ಇನ್ನು ಕೆಲವರು ಅದರಲ್ಲಿ ಅರಿಶಿನವನ್ನು ಬೆರೆಸುತ್ತಾರೆ. ನೀವು ರೋಗಗಳನ್ನು ತಪ್ಪಿಸಲು ಬಯಸಿದರೆ, ನೀವು ಅದರಲ್ಲಿ ಖರ್ಜೂರವನ್ನು ಬೆರೆಸಿ ಸೇವಿಸಬಹುದು. ಪ್ರೋಟೀನ್, ಆ್ಯಂಟಿ ಆಕ್ಸಿಡೆಂಟ್, ವಿಟಮಿನ್ ಎ, ವಿಟಮಿನ್ ಸಿ, ಕ್ಯಾಲ್ಸಿಯಂ, ಸತು ಮತ್ತು ರಂಜಕದಂತಹ ಪೋಷಕಾಂಶಗಳು ಖರ್ಜೂರದಲ್ಲಿದ್ದು, ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಕಾರಿಯಾಗಿದೆ. ಖರ್ಜೂರ ಬೆರೆಸಿದ ಹಾಲು ಕುಡಿಯುವುದರಿಂದ ಆಗುವ ಲಾಭಗಳೇನು ತಿಳಿದುಕೊಳ್ಳೋಣ ಬನ್ನಿ.

 

ಇದನ್ನೂ ಓದಿ-Cancer Symptoms: ಶರೀರದ ಈ ಲಕ್ಷಣಗಳು ಕ್ಯಾನ್ಸರ್ ಸಂಕೇತಗಳಾಗಿರಬಹುದು! ಮರೆತೂ ನಿರ್ಲಕ್ಷಿಸಬೇಡಿ

 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

1. ಖರ್ಜೂರ ಉತ್ಕರ್ಷಣ ನಿರೋಧಕಗಳು ಮತ್ತು ವಿಟಮಿನ್ ಸಿ ಸಮೃದ್ಧವಾಗಿದೆ. ಹಾಲಿನೊಂದಿಗೆ ಖರ್ಜೂರವನ್ನು ಬೆರೆಸಿ ಕುಡಿಯುವುದರಿಂದ ಚರ್ಮಕ್ಕೆ ಪ್ರಯೋಜನವಾಗುತ್ತದೆ. ಇದರಿಂದ ಮೊಡವೆಯಂತಹ ಸಮಸ್ಯೆಗಳು ದೂರಾಗುತ್ತವೆ.  

2 /5

2. ಖರ್ಜೂರದಲ್ಲಿ ಹೇರಳ ಪ್ರಮಾಣದಲ್ಲಿ ಪಾಚಕ ಕಂಡುಬರುತ್ತದೆ. ಇದು ಜೀರ್ಣಾಂಗ ವ್ಯವಸ್ಥೆಗೆ ಪ್ರಯೋಜನಕಾರಿಯಾಗಿದೆ. ಹಾಲಿನೊಂದಿಗೆ ಖರ್ಜೂರವನ್ನು ಬೆರೆಸಿ ಕುಡಿಯುವುದರಿಂದ ಜೀರ್ಣಕ್ರಿಯೆಗೆ ಸಂಬಂಧಿಸಿದ ತೊಂದರೆಗಳು ದೂರಾಗುತ್ತವೆ.  

3 /5

3. ಖರ್ಜೂರ ಬೆರೆಸಿದ ಹಾಲನ್ನು ಸೇವಿಸುವುದರಿಂದ ಮೂಳೆಗಳು ಆರೋಗ್ಯಕರವಾಗಿರುತ್ತವೆ. ಇದೆ ರೀತಿಯಾಗಿ, ಕ್ಯಾಲ್ಸಿಯಂ ಅನ್ನು ಹೊರತುಪಡಿಸಿ, ಮೆಗ್ನೀಸಿಯಮ್ ಮತ್ತು ಆಂಟಿ-ಆಕ್ಸಿಡೆಂಟ್‌ಗಳಂತಹ ಪೋಷಕಾಂಶಗಳು ಹಾಲಿನಲ್ಲಿ ಸೇರಿವೆ, ಇವು ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನವನ್ನು ನೀಡುತ್ತವೆ.  

4 /5

4. ಖರ್ಜೂರವನ್ನು ಬೆರೆಸಿದ ಹಾಲು ಕುಡಿಯುವುದರಿಂದ ತೂಕ ಹೆಚ್ಚಾಗುತ್ತದೆ. ನೀವೂ ಒಂದು ವೇಳೆ ತೆಳ್ಳಗಿದ್ದರೆ ಅಥವಾ ನಿಮ್ಮ ದೇಹವು ದುರ್ಬಲವಾಗಿದ್ದರೆ, ಖರ್ಜೂರ ಬೆರೆಸಿದ ಹಾಲು ಕುಡಿಯುವುದು ತುಂಬಾ ಪ್ರಯೋಜನಕಾರಿ ಎಂದು ಸಾಬೀತಾಗುತ್ತದೆ.  

5 /5

5. ಖರ್ಜೂರದಲ್ಲಿ ಕಬ್ಬಿಣ ಹೇರಳವಾಗಿ ಕಂಡು ಬರುತ್ತದೆ. ಖರ್ಜೂರವನ್ನು ಹಾಲಿನೊಂದಿಗೆ ಬೆರೆಸಿ ಸೇವಿಸುವುದರಿಂದ ರಕ್ತಹೀನತೆ ಸಮಸ್ಯೆ ದೂರಾಗುತ್ತದೆ. ರಕ್ತಹೀನತೆಯಂತಹ ಕಾಯಿಲೆಗಳಲ್ಲಿ ಇದು ಪ್ರಯೋಜನಕಾರಿಯಾಗಿದೆ. ಇದು ರಕ್ತ ಪರಿಚಲನೆ ಸುಧಾರಿಸುವ ಕೆಲಸ ಮಾಡುತ್ತದೆ.