ಆರ್ಸಿಬಿ ಕ್ಯಾಪ್ಟನ್ ಫಾಫ್ ಡು ಪ್ಲೆಸಿಸ್ ಅವರ ಪತ್ನಿಇಮಾರಿಯವರು ಅನುಷ್ಕಾ ಶರ್ಮಾ ಸೀರೆಯಲ್ಲಿ ಬಾಡಿಗೆ ಪಡೆದು ಉಟ್ಟಿಕೊಂಡಿದ್ದಾರೆ. ಇದನ್ನು ಕಂಡ ನೆಟ್ಟಿಗರು ಇದು ಅನುಷ್ಕಾ ಅವರ ಸೀರೆಯಲ್ಲವೇ ಎಂದು ಪ್ರಶ್ನಿಸಿದ್ದಾರೆ. ಈ ಪ್ರಶ್ನೆಗೆ ಉತ್ತರಿಸಿದ ಇಮಾರಿ, "ಮದುವೆ ಪಾರ್ಟಿಯಲ್ಲಿ ಉಡುವುದಕ್ಕಾಗಿ ಅನುಷ್ಕಾ ಅವರ ಬಳಿ ಸೀರೆಯನ್ನು ಕೇಳಿ ಪಡೆದುಕೊಂಡಿದ್ದೆ" ಎಂದು ಹೇಳಿದ್ದಾರೆ.
ಆರ್ಸಿಬಿ ಟೀಂ ಆಟಗಾರ ಮ್ಯಾಕ್ಸ್ವೆಲ್ ಭಾರತ ಮೂಲಕ ಮಹಿಳೆಯೊಂದಿಗೆ ಮದುವೆಯಾಗಿದ್ದರು. ಈ ಹಿನ್ನೆಲೆಯಲ್ಲಿ ಟೀಂ ಆಟಗಾರರಿಗಾಗಿ ಪಾರ್ಟಿಯನ್ನು ಆಯೋಜನೆ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಆರ್ಸಿಬಿ ಕ್ಯಾಪ್ಟನ್ ಫಾಫ್ ಡು ಪ್ಲೆಸಿಸ್ ಅವರ ಪತ್ನಿಇಮಾರಿಯವರು ಅನುಷ್ಕಾ ಶರ್ಮಾ ಸೀರೆಯಲ್ಲಿ ಬಾಡಿಗೆ ಪಡೆದು ಉಟ್ಟಿಕೊಂಡಿದ್ದಾರೆ.
ಆರ್ಸಿಬಿ ಆಟಗಾರ ಮ್ಯಾಕ್ಸ್ವೆಲ್ ಮದುವೆ ಪಾರ್ಟಿಯಲ್ಲಿ ಫಾಫ್ ಡು ಪ್ಲೆಸಿಸ್ ಅವರ ಪತ್ನಿಇಮಾರಿಯವರು ಅನುಷ್ಕಾ ಶರ್ಮಾ ಸೀರೆಯಲ್ಲಿ ಬಾಡಿಗೆ ಪಡೆದು ಉಟ್ಟಿಕೊಂಡಿದ್ದಾರೆ.
ಈ ಪಾರ್ಟಿಯಲ್ಲಿ ವಿರಾಟ್ ಕೊಹ್ಲಿ ಸೇರಿದಂತೆ ಆರ್ಸಿಬಿ ತಂಡದ ಆಟಗಾರರು ಪಾಲ್ಗೊಂಡಿದ್ದರು. ಅಷ್ಟೇ ಅಲ್ಲದೆ ವಿರಾಟ್ ಕೊಹ್ಲಿ ಪಾರ್ಟಿಯಲ್ಲಿ ಡ್ಯಾನ್ಸ್ ಮಾಡಿದ್ದ ವಿಡಿಯೋ ಈ ಹಿಂದೆ ವೈರಲ್ ಆಗಿತ್ತು.
ಈ ಪಾರ್ಟಿಯಲ್ಲಿ ಎಲ್ಲರೂ ಭಾರತೀಯ ಸಂಪ್ರದಾಯದ ಉಡುಗೆಯನ್ನು ತೊಟ್ಟಿದ್ದದ್ದು ವಿಶೇಷವಾಗಿ ಕಂಡುಬಂತು. ಪುರುಷರು ಜುಬ್ಬಾ ಪೈಜಾಮದಲ್ಲಿ ಮಿಂಚಿದರೆ, ಮಹಿಳೆಯರು ಸೀರೆಯಲ್ಲಿ ಕಂಗೊಳಿಸಿದ್ದಾರೆ. ಇನ್ನು ಈ ವೇಳೆ ಇಮಾರಿ ತೊಟ್ಟಿದ್ದ ಹಸಿರು ಬಣ್ಣದ ಸೀರೆ ಎಲ್ಲರ ಗಮನ ಸೆಳೆದಿತ್ತು.
ಈ ಸೀರೆಯನ್ನು 2018ರಲ್ಲಿ ಅನುಷ್ಕಾ ಶರ್ಮಾ ತೊಟ್ಟಿದ್ದರು ಎಂದು ಇಮಾರಿ ಪೋಸ್ಟ್ ಮಾಡಿದ ಫೋಟೋಗೆ ಅಭಿಮಾನಿಗಳು ಕಮೆಂಟ್ ಮಾಡಿದ್ದಾರೆ. ಇದಕ್ಕೆ ಉತ್ತರಿಸಿದ ಇಮಾರಿ, "ಮದುವೆ ಪಾರ್ಟಿಯಲ್ಲಿ ಉಡುವುದಕ್ಕಾಗಿ ಅನುಷ್ಕಾ ಅವರ ಬಳಿ ಸೀರೆಯನ್ನು ಕೇಳಿ ಪಡೆದುಕೊಂಡಿದ್ದೆ" ಎಂದು ಹೇಳಿದ್ದಾರೆ.
ಇನ್ನೂ ಕೆಲವರು ಇಮಾರಿ ಅವರ ದೇಸಿ ಲುಕ್ಗೆ ಫಿದಾ ಆಗಿದ್ದು, ಕಮೆಂಟ್, ಲೈಕ್ ಮೂಲಕ ಮೆಚ್ಚುಗೆ ಸೂಚಿಸಿದ್ದಾರೆ. ಅನುಷ್ಕಾ ಶರ್ಮಾರಂತೆ ಈ ಸೀರೆಯಲ್ಲಿ ನೀವು ಮುದ್ದಾಗಿ ಕಾಣುತ್ತೀರಾ ಎಂದು ಕಮೆಂಟ್ ಮೂಲಕ ಹೇಳಿದ್ದಾರೆ.