Deepika Padukone ಸೇರಿದಂತೆ Anushka Sharmaವರೆಗೆ ಬಾಲಿವುಡ್ ನ 5 ಶ್ರೀಮಂತ ನಟಿಮಣಿಗಳು

Aug 8, 2020, 01:39 PM IST

ಇಂದು ಬಾಲಿವುಡ್ ನಲ್ಲಿ ಅತಿ ಹೆಚ್ಚು ಗಳಿಕೆ ಮಾಡುವ ನಟಿಮಣಿಯಾರಲ್ಲಿ ದೀಪಿಕಾ ಪಡುಕೋಣೆ (Deepika Padukone) ಮತ್ತು ಅನುಷ್ಕಾ ಶರ್ಮಾ (Anushka Sharma) ಹೆಸರು ಮುಂಚೂಣಿಯಲ್ಲಿದೆ. ಕಳೆದ ಕೆಲ ಸಮಯದಿಂದ ಅನುಷ್ಕಾ ಬಾಲಿವುಡ್ ನಿಂದ ದೂರ ಉಳಿದಿದ್ದಾರೆ. ಆದರೂ ಕೂಡ OTT ಪ್ಲಾಟ್ಫಾರ್ಮ್ ಮೇಲೆ ಅವರ 'ಪಾತಾಲ್ ಲೋಕ್ ಹಾಗೂ ಬುಲ್ಬುಲ್ ವೆಬ್ ಸೀರಿಸ್ ಗಳಿಗೆ ಭಾರಿ ರಿಸ್ಪಾನ್ಸ್ ಸಿಕ್ಕಿದೆ. ಹಾಗಾದರೆ ಬನ್ನಿ ಬಾಲಿವುಡ್ ನ ಟಾಪ್ 5 ಅತಿ ಹೆಚ್ಚು ಗಳಿಕೆ ಮಾಡುವ ನಟಿಮಣಿಯರು ಯಾರು ಎಂಬುದನ್ನು ತಿಳಿದುಕೊಳ್ಳೋಣ.

1/5

1. ಆಲಿಯಾ ಭಟ್

ಅತಿ ಹೆಚ್ಚು ಗಳಿಕೆ ಮಾಡುವ ನಟಿಮಣಿಯರ ಪಟ್ಟಿಯಲ್ಲಿ ಆಲಿಯಾ ಮೊದಲ ಸ್ಥಾನದಲ್ಲಿದಾರೆ. ಕಳೆದ ವರ್ಷ ಆಲಿಯಾ ಗಳಿಸಿದ್ದು ಒಟ್ಟು 59.21 ಕೋಟಿ ರೂ.

2/5

2. ಪ್ರಿಯಾಂಕಾ ಚೋಪ್ರಾ

ಗ್ಲೋಬಲ್ ಐಕಾನ್ ಪ್ರಿಯಾಂಕಾ ಚೋಪ್ರಾ ಜೋನಾಸ್ ಕಳೆದ ವರ್ಷ ಅತಿ ಹೆಚ್ಚು ಗಳಿಕೆ ಮಾಡುವ ಟಾಪ್ 100 ಸೆಲಿಬ್ರಿಟಿಗಳ ಪಟ್ಟಿಯಲ್ಲಿ 49 ನೇ ಸ್ಥಾನದಿಂದ ಈ ವರ್ಷ 14ನೇ ಸ್ಥಾನಕ್ಕೆ ತಲುಪಿದ್ದಾಳೆ. ಕಳೆದ ವರ್ಷ ಪ್ರಿಯಾಂಕಾ ಗಳಿಸಿದ್ದು ಒಟ್ಟು 23.4 ಕೋಟಿ ರೂ.

3/5

3. ದೀಪಿಕಾ ಪಡುಕೋಣೆ

ಅತಿ ಹೆಚ್ಚು ಗಳಿಕೆ ಮಾಡಿರುವ ಮಹಿಳಾ ಸೆಲಿಬ್ರಿಟಿಗಳ ಪಟ್ಟಿಯಲ್ಲಿ 2018ರಲ್ಲಿ 10 ನೇ ಸ್ಥಾನದಲ್ಲಿದ್ದ ದೀಪಿಕಾ, ಈ ಬಾರಿ ನಾಲ್ಕನೇ ಸ್ಥಾನಕ್ಕೆ ತಲುಪಿದ್ದಾರೆ. ಕಳೆದ ವರ್ಷ ಅವರ ಒಟ್ಟು ಗಳಿಕೆ 112.8 ಕೋಟಿ ರೂ. ಎನ್ನಲಾಗಿದೆ.

4/5

4.ಅನುಷ್ಕಾ ಶರ್ಮಾ

ನಟಿ-ನಿರ್ಮಾಪಕಿ ಅನುಷ್ಕಾ ಶರ್ಮಾ 2019ರಲ್ಲಿ ಒಟ್ಟು 28.67 ಕೋಟಿ ರೂ. ಗಳಿಕೆ ಮಾಡಿದ್ದಾರೆ. ಫೋರ್ಬ್ಸ್ ಪಟ್ಟಿಯ ಪ್ರಕಾರ ಅತಿ ಹೆಚ್ಚು ಗಳಿಕೆ ಮಾಡುವ ಮಹಿಳಾ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ದೀಪಿಕಾ 21ನೇ ಸ್ಥಾನದಲ್ಲಿದ್ದಾರೆ.

5/5

5.ಕತ್ರಿನಾ ಕೈಫ್

ಬಾಲಿವುಡ್ ನಲ್ಲಿ ಚಿಕನಿ-ಚಮೇಲಿ ಎಂದೇ ಖ್ಯಾತ ನಟಿ ಕತ್ರಿನಾ ಕೈಫ್ ಕಳೆದ ವರ್ಷದ ಒಟ್ಟು ಗಳಿಕೆ 23.63 ಕೋಟಿ ರೂ. ಫೋರ್ಬ್ಸ್ ಪಟ್ಟಿಯಲ್ಲಿ ಕತ್ರಿನಾ 23ನೇ ಸ್ಥಾನದಲ್ಲಿದ್ದಾರೆ. ಚಲನಚಿತ್ರಗಳ ಜೊತೆಗೆ ಕತ್ರಿನಾ ಹಲವು ಬ್ರಾಂಡ್ ಗಳ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ.