IND vs PAK Players Fight : IND vs PAK ಮ್ಯಾಚ್ ವೇಳೆ ಮೈದಾನದಲ್ಲಿ ಜಗಳ ಮಾಡಿಕೊಂಡ ಆಟಗಾರರ ಲಿಸ್ಟ್ ಇಲ್ಲಿದೆ!

ಇದುವರೆಗೆ ಈ ಎರಡು ತಂಡಗಳ ನಡುವಣ ಪಂದ್ಯಗಳಲ್ಲಿ ಆಟಗಾರರು ಮೈದಾನದಲ್ಲಿ ತಾಳ್ಮೆ ಕಳೆದುಕೊಂಡು ಜಗಳ ಮಾಡಿಕೊಂಡಿರುವ ಘಟನೆಗಳು ನಡೆದಿವೆ. ಯಾವ ಯಾವ ಆಟಗಾರರು  ತಾಳ್ಮೆ ಕೊಂಡ ಸಂಧರ್ಭಗಳೇನು? ಇಲ್ಲಿಡಿ ನೋಡಿ...

IND vs PAK Players Fight : ಕ್ರಿಕೆಟ್ ಅಭಿಮಾನಿಗಳು ಆಗಸ್ಟ್ 28 ಗಾಗಿ ಕಾತರದಿಂದ ಕಾಯುತ್ತಿದ್ದಾರೆ. ಈ ದಿನದಂದು ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ. ಈ ಎರಡು ತಂಡಗಳ ನಡುವೆ ನಡೆಯುವ ಪ್ರತಿಯೊಂದು ಪಂದ್ಯವೂ ಹೈವೋಲ್ಟೇಜ್ ಮ್ಯಾಚ್ ಆಗಿರುತ್ತವೆ. ಇದುವರೆಗೆ ಈ ಎರಡು ತಂಡಗಳ ನಡುವಣ ಪಂದ್ಯಗಳಲ್ಲಿ ಆಟಗಾರರು ಮೈದಾನದಲ್ಲಿ ತಾಳ್ಮೆ ಕಳೆದುಕೊಂಡು ಜಗಳ ಮಾಡಿಕೊಂಡಿರುವ ಘಟನೆಗಳು ನಡೆದಿವೆ. ಯಾವ ಯಾವ ಆಟಗಾರರು  ತಾಳ್ಮೆ ಕೊಂಡ ಸಂಧರ್ಭಗಳೇನು? ಇಲ್ಲಿಡಿ ನೋಡಿ...

1 /5

2012ರಲ್ಲಿ ಪಾಕಿಸ್ತಾನ ತಂಡ ಭಾರತ ಪ್ರವಾಸಕ್ಕೆ ಬಂದಿತ್ತು. ಈ ಪ್ರವಾಸದ ವೇಳೆ, ವೇಗದ ಬೌಲರ್ ಇಶಾಂತ್ ಶರ್ಮಾ ಮತ್ತು ಪಾಕಿಸ್ತಾನಿ ಬ್ಯಾಟ್ಸ್‌ಮನ್ ಕಮ್ರಾನ್ ಅಕ್ಮಲ್ ನಡುವೆ ನಡೆದ ಜಗಳ ಭಾರಿ ಚರ್ಚೆಗೆ ಕಾರಣವಾಗಿತ್ತು. ಈ ಪಂದ್ಯದಲ್ಲಿ ಇಬ್ಬರು ಆಟಗಾರರ ಜಗಳ ನೋಡಿದ ಐಸಿಸಿ ಇಬ್ಬರಿಗೂ ದಂಡ ವಿಧಿಸಿತ್ತು.

2 /5

ಪಾಕಿಸ್ತಾನದ ವೇಗದ ಬೌಲರ್ ಶೋಯೆಬ್ ಅಖ್ತರ್ ಆಟಗಾರರನ್ನು ಪ್ರಚೋದನಕ್ಕೆ ಹೆಸರುವಾಸಿ. 2010 ರಲ್ಲಿ, ಶೋಯೆಬ್ ಅಖ್ತರ್ ಹರ್ಭಜನ್ ಸಿಂಗ್ ಅವರೊಂದಿಗೆ ಇದೇ ರೀತಿ ಜಗಳ ಮಾಡಿಕೊಂಡಿದ್ದರು, ನಂತರ ಇಬ್ಬರ ನಡುವೆ ತೀವ್ರ ಚರ್ಚೆ ನಡೆಯಿತು. ಈ ಪಂದ್ಯದಲ್ಲಿ ಹರ್ಭಜನ್ ಸಿಂಗ್ ಸಿಕ್ಸರ್ ಬಾರಿಸುವ ಮೂಲಕ ಟೀಂ ಇಂಡಿಯಾಗೆ ಜಯ ತಂದುಕೊಟ್ಟಿದ್ದರು.

3 /5

2007ರಲ್ಲಿ ಶಾಹಿದ್ ಅಫ್ರಿದಿ ಅವರು ಗೌತಮ್ ಗಂಭೀರ್ ಅವರೊಂದಿಗೆ ಮೈದಾನದಲ್ಲಿ ಜಗಳವಾಡಿದ್ದರು. ಈ ಪಂದ್ಯದಲ್ಲಿ ಗೌತಮ್ ಗಂಭೀರ್ ರನ್ ತೆಗೆದುಕೊಳ್ಳುವಾಗ ಶಾಹಿದ್ ಅಫ್ರಿದಿಗೆ ಡಿಕ್ಕಿ ಹೊಡೆದರು. ಈ ಘಟನೆಯ ನಂತರ, ಇಬ್ಬರೂ ಆಟಗಾರರು ತಮ್ಮ ತಾಳ್ಮೆ ಕಳೆದುಕೊಂಡರು, ಇದು ಅಭಿಮಾನಿಗಳಿಗೆ ತೀವ್ರ ಮುಜುಗರ ಉಂಟು ಮಾಡಿತ್ತು.

4 /5

2005 ರಲ್ಲಿ, ವಿಶಾಖಪಟ್ಟಣಂನಲ್ಲಿ ನಡೆದ ಪಂದ್ಯದಲ್ಲಿ ಭಾರತವು ಎಂಎಸ್ ಧೋನಿ ಮತ್ತು ಶಾಹಿದ್ ಅಫ್ರಿದಿ ನಡುವೆ ಜಗಳವಾಗಿತ್ತು. ಈ ಪಂದ್ಯದಲ್ಲಿ ಧೋನಿ ಅಮೋಘ ಬ್ಯಾಟಿಂಗ್ ಮಾಡುತ್ತಿದ್ದು, ಶಾಹಿದ್ ಅಫ್ರಿದಿ ಕೋಪದಲ್ಲಿ ಏನೋ ಹೇಳಿದ್ದನ್ನ ನೋಡಿದರು. ಈ ಘಟನೆಯ ನಂತರ ಧೋನಿ ತಮ್ಮ ವೇಗದ ಬ್ಯಾಟಿಂಗ್ ಮೂಲಕ ಅಫ್ರಿದಿಗೆ ಉತ್ತರಿಸಿದರು.

5 /5

1996 ರಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ವಿಶ್ವಕಪ್ ಪಂದ್ಯ ನಡೆದಿತ್ತು. ಈ ಪಂದ್ಯದಲ್ಲಿ ಭಾರತದ ವೆಂಕಟೇಶ್ ಪ್ರಸಾದ್ ಹಾಗೂ ಪಾಕಿಸ್ತಾನದ ಅಮೀರ್ ಸೊಹೈಲ್ ನಡುವೆ ಬಿಸಿ ಬಿಸಿ ವಾತಾವರಣ ಕಂಡು ಬಂತು. ಈ ಪಂದ್ಯದಲ್ಲಿ ಅಮೀರ್ ಸೊಹೈಲ್ ಈ ಹಿಂದೆ ವೆಂಕಟೇಶ್ ಪ್ರಸಾದ್ ಅವರ ಎಸೆತದಲ್ಲಿ ಬೌಂಡರಿ ಬಾರಿಸಿದ್ದರು, ಆದರೆ ವೆಂಕಟೇಶ್ ಪ್ರಸಾದ್ ಮುಂದಿನ ಎಸೆತದಲ್ಲಿ ಅವರನ್ನು ಔಟ್ ಮಾಡುವ ಮೂಲಕ ಅದ್ಭುತ ಸಂಭ್ರಮವನ್ನು ಸೃಷ್ಟಿಸಿದರು.