Astro Tips: ಯಾವ ದೇವರಿಗೆ ಯಾವ ಹೂವಿನಿಂದ ಪೂಜಿಸಬೇಕು

Hindu religious beliefs: ವಿಘ್ನ ನಿವಾರಕ ಗಣೇಶನಿಗೆ ಎಕ್ಕದ ಹೂವಿನ ಮಾಲೆ ಅತ್ಯಂತ ಶ್ರೇಷ್ಠ. ಗಣೇಶ ಹಬ್ಬಗಳಂದು ಗಣಪನ ಮೂರ್ತಿಗೆ ಎಕ್ಕದ ಹಾರ ಹಾಕುವುದನ್ನು ನೋಡಿರಬಹುದು. ಇದು ವಾಸ್ತು ದೋಷವನ್ನೂ ಸರಿಪಡಿಸುತ್ತದೆ.

Hindu religious beliefs: ಹಿಂದೂ ಧರ್ಮದಲ್ಲಿ ಮುಕ್ಕೋಟಿ ಅಥವಾ 33 ಕೋಟಿ ದೇವ-ದೇವತೆಗಳಿದ್ದಾರೆಂದು ನಂಬಲಾಗಿದೆ. ಈ ಎಲ್ಲಾ ದೇವತೆಗಳೂ ಕಾಮದೇನುವಿನಲ್ಲಿ ನೆಲೆಸಿರುತ್ತವೆಂದು ಹೇಳಲಾಗುತ್ತದೆ. ಕಾಮಧೇನುವನ್ನು ಅತ್ಯಂತ ಪಾವಿತ್ರ್ಯತೆಯಿಂದ ಪೂಜಿಸಲಾಗುತ್ತದೆ. ನಮಗೆ ಎಂತಹ ಕಷ್ಟ ಬಂದರೂ ಈ ಮುಕ್ಕೋಟಿ ದೇವರುಗಳು ಕಾಪಾಡುತ್ತವೆ ಅನ್ನೋ ನಂಬಿಕೆ ಹಿಂದೂಗಳಿಲ್ಲಿದೆ. ಈ ಪ್ರಮುಖ ದೇವರಿಗೆ ಯಾವ ಹೂವುಗಳಿಂದ ಪೂಜಿಸಿದರೆ ಒಳಿತಾಗುತ್ತದೆ ಅನ್ನೋದರ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ...

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /8

ತ್ರಿಮೂರ್ತಿಗಳಲ್ಲಿ ಒಬ್ಬರಾದ ಮಹಾವಿಷ್ಣುವಿಗೆ ತುಳಸಿ, ಕಿಸ್ಕಾರ ಹೂಗಳಿಂದ ಪೂಜೆ ಮಾಡಿದರೆ ಅತ್ಯಂತ ಶ್ರೇಯಸ್ಕರವಾದುದು. ತುಳಸಿ ತಾಯಿ ಲಕ್ಷ್ಮೀದೇವಿಯನ್ನು ಪ್ರತಿನಿಧಿಸುತ್ತದೆ.

2 /8

ಮಹಾವಿಷ್ಣುವಿನ ಅಂಶವಾದ ಕೃಷ್ಣನನ್ನು ಪೂಜೆ ಮಾಡುವಾಗ ತುಳಸಿ, ಪಾರಿಜಾತ ಪುಷ್ಪ ಇರಲೇಬೇಕು.

3 /8

ವಿಘ್ನ ನಿವಾರಕ ಗಣೇಶನಿಗೆ ಎಕ್ಕದ ಹೂವಿನ ಮಾಲೆ ಅತ್ಯಂತ ಶ್ರೇಷ್ಠ. ಗಣೇಶ ಹಬ್ಬಗಳಂದು ಗಣಪನ ಮೂರ್ತಿಗೆ ಎಕ್ಕದ ಹಾರ ಹಾಕುವುದನ್ನು ನೋಡಿರಬಹುದು. ಇದು ವಾಸ್ತು ದೋಷವನ್ನೂ ಸರಿಪಡಿಸುತ್ತದೆ.

4 /8

ವಾನರ ರೂಪಿ ಆಂಜನೇಯನಿಗೆ ಮಲ್ಲಿಗೆ ಹೂವೆಂದರೆ ಬಲು ಇಷ್ಟ. ಆಂಜನೇಯನಿಗೆ ಮಲ್ಲಿಗೆ ಹೂವಿನಿಂದ ಪೂಜೆ ಮಾಡಿದರೆ ಆತ ಪ್ರಸನನ್ನಾಗುತ್ತಾನೆ.

5 /8

ದುರ್ಗಾಮಾತೆ, ಕಾಳಿ & ಚಾಮುಂಡಿ ದೇವಿ ಸೇರಿದಂತೆ ಅಮ್ಮನವರ ಪೂಜೆಯಲ್ಲಿ ಕೆಂಪು ಬಣ್ಣದ ದಾಸವಾಳವಿದ್ದರೆ ಶ್ರೇಷ್ಠವೆಂದು ಪರಿಗಣಿಸಲಾಗಿದೆ.

6 /8

ತಾಯಿ ಲಕ್ಷ್ಮೀದೇವಿ ಎಂದರೆ ತಕ್ಷಣ ನೆನಪಾಗುವುದು ಕಮಲದ ಹೂವುಗಳು. ಲಕ್ಷ್ಮೀದೇವಿಯನ್ನು ಕಮಲದ ಹೂವುಗಳಿಂದ ಪೂಜಿಸಿದರೆ ವಿಶೇಷವಾಗಿರುತ್ತದೆ.

7 /8

ವಿದ್ಯಾದೇವತೆ ಸರಸ್ವತಿ ದೇವಿಯನ್ನು ಪೂಜೆ ಮಾಡುವಾಗ ಪಾಲಾಶ ಹೂವನ್ನು ಇಡುವುದು ವಾಡಿಕೆ. ಈ ಹೂವುಗಳನ್ನು ಜ್ಞಾನದ ಸಂಕೇತ ಎನ್ನಲಾಗುತ್ತದೆ.

8 /8

ಭಗವಾನ್ ಶಿವನಿಗೆ ಬಿಲ್ವಪತ್ರೆ ಮೆಚ್ಚಿನ ಹೂವು. ಶಿವನನ್ನು ಆರಾಧಿಸುವಾಗ ಬಿಲ್ವ ಪತ್ರೆಯನ್ನು ಅರ್ಪಿಸಿದರೆ ನಮ್ಮ ಅನೇಕ ದೋಷಗಳು ನಿವಾರಣೆಯಾಗುತ್ತವೆ.