ಸೂರ್ಯ-ಮೀನಾ ರಾಶಿ ಗೋಚಾರ ಫಲ ಏನು.? ನಿಮ್ಮ ರಾಶಿಯಲ್ಲಿ ಏನಿದೆ.?

14 ಮಾರ್ಚ್ ಸಂಜೆ 5.55ಕ್ಕೆ ಸೂರ್ಯ, ಮೀನಾ ರಾಶಿ ಪ್ರವೇಶಿಸಲಿದ್ದಾನೆ.

ಬೆಂಗಳೂರು : 14 ಮಾರ್ಚ್ ಸಂಜೆ 5.55ಕ್ಕೆ ಸೂರ್ಯ, ಮೀನಾ ರಾಶಿ ಪ್ರವೇಶಿಸಲಿದ್ದಾನೆ. ಮೀನಾ ರಾಶಿ ಜಲದ ರಾಶಿಯಾಗಿದೆ. ಹಾಗೂ ಸೂರ್ಯ ಅಗ್ನಿ ತತ್ವ ಹೊಂದಿರುವ ರಾಶಿ. ಅಗ್ನಿ ಹಾಗೂ ಜಲದ ಸಂಯೋಗದ ಗೋಚಾರ ಹಲವು ರಾಶಿಗಳಿಗೆ ವಿವಿಧ ಫಲಗಳನ್ನು ನೀಡಲಿದೆ. ನಿಮ್ಮ ರಾಶಿಗನುಗುಣವಾಗಿ ನಿಮ್ಮ ರಾಶಿಫಲ ಏನು ಹೇಳುತ್ತದೆ ನೋಡಿ..  

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /12

ಮೇಷ ರಾಶಿ : ಜೀವನದಲ್ಲಿ ಮಹತ್ವದ ಬದಲಾವಣೆಯಾಗಲಿದೆ.  ನಿಮ್ಮ ಜೀವನದಲ್ಲಿ ಮಹತ್ವದ ಬದಲಾವಣೆಯಾಗಲಿದೆ. ನಿಮ್ಮಲ್ಲಿ ಆತ್ಮ ವಿಶ್ವಾಸ ಕಡಿಮೆಯಾಗಬಹುದು. ಇದರ ಪರಿಣಾಮ ನಿಮ್ಮ ಕೆಲಸದ ಮೇಲೆ ಬೀಳಲಿದೆ. ವಿದೇಶಿ ಕೆಲಸದ ಯೋಗ ಕೂಡಿ ಬರಬಹುದು. ವೈರಿಗಳು ಹೆಚ್ಚಲಿದ್ದಾರೆ. ಯಾವುದೇ ಕಾನೂನು ಹೋರಾಟ ಈ ಹೊತ್ತಿನಲ್ಲಿ ಬೇಡ. ವ್ಯಾಪಾರದಲ್ಲಿ ನಷ್ಟ. ಸಂಬಂಧದಲ್ಲಿ ಏರಿಳಿತ ಉಂಟಾಗಲಿದೆ.

2 /12

ವೃಷಭ: ಮುಟ್ಟಿದ್ದೆಲ್ಲಾ ಚಿನ್ನ..! ಈ ರಾಶಿಗೆ ಸಾಕಷ್ಟು ಶುಭ ಪರಿಣಾಮ ಇದೆ. ವ್ಯಾಪಾರಿಗಳಿಗೆ ಭರ್ಜರಿ ಲಾಭ. ಮಾನ ಸಮ್ಮಾನ ಹೆಚ್ಚಲಿದೆ. ನಿಂತಿದ್ದ ಯೋಜನೆ ಶುರುವಾಗಲಿದ್ದು, ನಿಮಗೆ ಲಾಭ ತರಲಿದೆ.  ಕಚೇರಿಯಲ್ಲಿ ವರಿಷ್ಠರು ಪ್ರಸನ್ನರಾಗಲಿದ್ದಾರೆ. ಕೆಲಸದ ಕ್ಷೇತ್ರದಲ್ಲಿ ಪ್ರಶಂಸೆ. ಹೊಸ ಸಂಬಂಧ ಆರಂಭವಾಗಲಿದೆ. ಸ್ಥಿರಾಸ್ತಿ ಖರೀದಿಯಲ್ಲಿ ಲಾಭ. ಈ ರಾಶಿಯವರಿಗೆ ಮುಟ್ಟಿದ್ದೆಲ್ಲವೂ ಚಿನ್ನವೇ..!  

3 /12

ಮಿಥುನ: ವ್ಯಾಪಾರಿಗಳಿಗೆ ಲಾಭ ವ್ಯಾಪಾರಿಗಳಿಗೆ ಲಾಭ. ದೀರ್ಘಾವಧಿ ನೆನೆಗುದಿಯಲ್ಲಿದ್ದ ಕೆಲಸ ನೆರವೇರಲಿದೆ. ಕಾರ್ಯಕ್ಷೇತ್ರದಲ್ಲಿ ಸಮ್ಮಾನ. ವರಿಷ್ಠರ ಸಹಯೋಗ. ವಕೀಲರು, ಸೇಲ್ಸ್ ಅಧಿಕರಿಗಳಿಗೆ ಲಾಭ. ಪ್ರತಿ ಕೆಲಸದಲ್ಲೂ ಸಹೋದರ, ಸಹೋದರಿಯರ ನೆರವು. 

4 /12

ಕರ್ಕ: ಪ್ರಬಲ ಧನಲಾಭ ಯೋಗ ಧನಲಾಭದ ಪ್ರಬಲ ಯೋಗ ಇದೆ. ಆದಾಯ, ಸಂಪತ್ತು, ಮಾನಮರ್ಯಾದೆ ವೃದ್ಧಿಯಾಗಲಿದೆ. ವ್ಯಾಪಾರದಲ್ಲಿ ಸ್ಪರ್ಧೆ ಹೆಚ್ಚುತ್ತದೆ. ಆದರೆ, ಕಠಿಣ ಪರಿಶ್ರಮದ ಕಾರಣ ಯಶಸ್ಸು ನಿಮ್ಮದಾಗಲಿದೆ. ಹಣಕಾಸು ಸ್ಥಿತಿ ಗಟ್ಟಿಯಾಗುತ್ತದೆ. ಸಮಾಜದ ಪ್ರತಿಷ್ಠಿತರು ನಿಮ್ಮನ್ನು ಭೇಟಿ ಮಾಡಲಿದ್ದಾರೆ.   

5 /12

ಸಿಂಹ ರಾಶಿ : ತಾಳ್ಮೆ, ಸಂಯಮಗಳೇ ನಿಮ್ಮ ಆಯುಧಗಳಾಗಿರಲಿ.  ಸೂರ್ಯದೇವ ಸಿಂಹ ರಾಶಿಯ ಅಧಿಪತಿ. ಹಾಗಾಗಿ ಈ ರಾಶಿಯವರ ಮೇಲೆ ಗೋಚಾರದ ಪ್ರಭಾವ ಹೆಚ್ಚು. ಬಿಸಿನೆಸ್ ಮಂದಗತಿಯಲ್ಲಿ ಸಾಗಲಿದೆ. ನೀವಂದುಕೊಂಡ ಕೆಲಸ ಬೇಗ ಆಗಲ್ಲ. ಭವಿಷ್ಯ ಯೋಚನೆ ಮಾಡಿ ಚಿಂತೆ ಹೆಚ್ಚಲಿದೆ.  ಕಾರ್ಯಕ್ಷೇತ್ರದಲ್ಲಿ ಜಗಳವಾಗಲಿದೆ. ಕೋಪಕ್ಕೆ ಕಡಿವಾಣ ಹಾಕಲೇ ಬೇಕು. ದುಡ್ಡು ಸಂಪಾದನೆಗೆ ಶಾರ್ಟ್ಕೇಟ್ ಅನುಸರಿಸಬೇಡ. ಭವಿಷ್ಯದಲ್ಲಿ ಸಮಸ್ಯೆಯಾಗಲಿದೆ. ನಿಮ್ಮ ಮೇಲೆ ವಿಶ್ವಾಸ ಇಡಿ. ತಾಳ್ಮೆ, ಸಂಯಮಗಳೇ ನಿಮ್ಮ ಆಯುಧಗಳಾಗಿರಲಿ. ಒಳ್ಳೆಯ ಕಾಲ ಹೊಸ್ತಿಲಿನಲ್ಲಿದೆ. ಟೆನ್ಶನ್ ಬೇಡ.   

6 /12

ಕನ್ಯಾ: ತುಂಬಾ ಬೆವರು ಹರಿಸಬೇಕು ಈ ಗೋಚಾರ ಕಾಲದಲ್ಲಿ ತುಂಬಾ ಶ್ರಮವಹಿಸಬೇಕು. ಹಾಗಿದ್ದರೆ ಮಾತ್ರ ಉತ್ತಮ ಫಲ ಸಿಗಲಿದೆ. ವರಿಷ್ಠರೊಂದಿಗೆ ವಾಗ್ಯುದ್ಧವಾಗಬಹುದು. ಪಾರ್ಟ್ನತರ್ ಶಿಪ್ ವ್ಯವಹಾರ ಇದ್ದರೆ ಜಾಗೃತೆ ವಹಿಸಿ. ಹೊಸ ಕೆಲಸ ಶುರುಮಾಡಲು ಇದು ಸಮಯ ಅಲ್ಲ. ಬಹುರಾಷ್ಟ್ರೀಯ ಕಂಪನಿಗಳಲ್ಲಿ ಕಾರ್ಯ ನಿರ್ವಹಿಸುವವರಿಗೆ ಶುಭಲಾಭ. ಖರ್ಚು ಹೆಚ್ಚಾಗುತ್ತದೆ. ಆರೋಗ್ಯ ನೋಡಿಕೊಳ್ಳಿ.  

7 /12

ತುಲಾ : ಹಲವು ಶುಭ ಪರಿಣಾಮಗಳಿವೆ ಹಲವು ಶುಭ ಪರಿಣಾಮಗಳಿವೆ. ದೀರ್ಘಾವಧಿ ಕಾಡುತ್ತಿದ್ದ ರೋಗ ಗುಣವಾಗುತ್ತದೆ. ವೈರಿಗಳು ಹೆಚ್ಚಲಿದ್ದಾರೆ.  ನಿಮ್ಮ ಪ್ರಯತ್ನಗಳಿಗೆ ಪ್ರಶಂಸೆ ಸಿಗಲಿದೆ. ವರಿಷ್ಠರ ಜೊತೆ ಸಂಬಂಧ ಸುಧಾರಿಸುತ್ತದೆ. ಉದ್ಯಮಿಗಳಿಗೆ ಬ್ಯಾಂಕ್ ಸಾಲ ಸಿಗಲಿದೆ. ಕೊಟ್ಟ ಸಾಲ ಹಿಂತಿರುಗಿ ಬರಲಿದೆ. ಹೊಸ ಸಂಬಂಧ ಶುರುವಾಗಲಿದೆ.   

8 /12

ವೃಶ್ಚಿಕ ರಾಶಿ : ಸರ್ಕಾರಿ ನೌಕರರಿಗೆ ದಿಢೀರ್ ವರ್ಗ ಸಾಧ್ಯತೆ ಶುಭವಾಗಲಿದೆ. ವಿಚಾರಗಳನ್ನು ಮುಕ್ತವಾಗಿ ಮುಂದಿಡಿ. ಕಾರ್ಯಕ್ಷಮತೆಯಲ್ಲಿ ಸುಧಾರಣೆಯಾಗಲಿದೆ. ಕಲೀಗ್ಸ್ ಮತ್ತು ಟಾಪ್ ಮ್ಯಾನೇಜ್ಮೆಂಿಟ್ ನಿಮ್ಮ ಕೆಲಸವನ್ನು ಪ್ರಶಂಸಿಸಲಿದೆ. ಸರ್ಕಾರಿ ನೌಕರರಿಗೆ ದಿಢೀರ್ ವರ್ಗಾವಣೆ ಸಾಧ್ಯತೆ.  ವ್ಯಾಪಾರಿಗಳಿಗೆ ನಿರಾಶೆ ಕಾದಿದೆ. ವ್ಯಾಪಾರದಲ್ಲಿ ನಷ್ಟ ಉಂಟಾಗಲಿದೆ. ಕ್ರಿಯೇಟಿವಿಟಿ ಕ್ಷೇತ್ರದಲ್ಲಿ ತೊಡಗಿರುವವರಿಗೆ ಶುಭಕಾಲ. ಆರೋಗ್ಯದ ಮೇಲೆ ನಿಗಾ ಇಡಿ. 

9 /12

 ಧನು ರಾಶಿ : ಕೆಲಸದ ಹೊರೆ ಹೆಚ್ಚಲಿದೆ ಅಮ್ಮನ ಆರೋಗ್ಯ ಏರುಪೇರಾಗಬಹುದು. ಇದರಿಂದ ಟೆನ್ಶನ್ ಉಂಟಾಗಬಹುದು. ಮನೆಯಲ್ಲಿ ಸಣ್ಣ ಸಣ್ಣ ಜಗಳ ಉಂಟಾಗಬಹುದು. ಭಾವನೆಗಳ ಮೇಲೆ ಕಡಿವಾಣ ಇಡಬೇಕು. ಕೆಲಸದ ಹೊರೆ ಹೆಚ್ಚಲಿದೆ. ಯಾವುದೇ ಹೊಸ ಹೂಡಿಕೆ ಬೇಡ.

10 /12

ಮಕರ : ಪ್ರಮೋಶನ್ ಮತ್ತು ವೇತನ ಹೆಚ್ಚಳ.  ಮಕರ ರಾಶಿಗೆ ಶುಭ ಯೋಗ. ಪ್ರಮೋಶನ್ ಮತ್ತು ವೇತನ ಹೆಚ್ಚಳ. ಇದು ಸಮೃದ್ಧಿಯ ಸಮಯ. ನಿಮ್ಮ ಎಲ್ಲಾ ಪ್ರಯತ್ನಗಳಿಗೆ ಸಕಾರಾತ್ಮಕ ಫಲ ಸಿಗಲಿದೆ. ವ್ಯಾಪಾರಿಗಳಿಗೆ ಲಾಭ. ವಿರೋಧಿಗಳು ಹೆಚ್ಚಲಿದ್ದಾರೆ. ಆರೋಗ್ಯ ಕಡೆಗಣಿಸಬೇಡಿ

11 /12

 ಕುಂಭ : ಸ್ವಭಾವವನ್ನು ನಿಯಂತ್ರಣದಲ್ಲಿಡಿ. ಕುಂಭ ರಾಶಿಗೆ ಮಿಶ್ರ ಫಲ. ಸ್ವಭಾವವನ್ನು ನಿಯಂತ್ರಣದಲ್ಲಿಡಿ. ಮಿತ್ರರು ಅಥವಾ ಮನೆಯ ಸದಸ್ಯರೊಂದಿಗೆ ಜಗಳವಾದೀತು. ಕಾರ್ಯ ಕ್ಷೇತ್ರದಲ್ಲಿ ಸ್ಥಾನಪಲ್ಲಟವಿದೆ. ಹೂಡಿಕೆಗೆ ಇದು ಸುಸಮಯ ಅಲ್ಲ. ಪಿತ್ರಾರ್ಜಿತ ಆಸ್ತಿಯಲ್ಲಿ ಅಚಾನಕ್ ಲಾಭ ಸಿಗಲಿದೆ. ನಿಮ್ಮ ಸಿಂಗಲ್ ಜೀವನದಲ್ಲಿ ಹೊಸಬರ ಪ್ರವೇಶವಾಗಬಹುದು. ಆರೋಗ್ಯ ವಿಚಾರದಲ್ಲಿ ಶುಭ ಫಲ ಇಲ್ಲ. ಕಣ್ಣು ಮತ್ತು ಹಲ್ಲಿನ ವಿಚಾರದಲ್ಲಿ ನಿಗಾ ಇಡಿ. 

12 /12

ಮೀನಾ  ರಾಶಿ: ಆರೋಗ್ಯದ ಬಗ್ಗೆ ಅಧಿಕ ಎಚ್ಚರ ವಹಿಸಬೇಕು.  ಸೂರ್ಯನ ಗೋಚಾರ ನಿಮ್ಮ ರಾಶಿಯಲ್ಲಿ ಪ್ರಭಾವ ಬೀರಲಿದೆ. ಆರೋಗ್ಯದ ಮೇಲೆ ಖಂಡಿತಾ ಪ್ರಭಾವ ಬೀರುತ್ತೆ. ತಲೆನೋವು, ಕಣ್ಣು, ಶೀತ, ಕೆಮ್ಮು ನಿಮ್ಮನ್ನು ಕಾಡಬಹುದು. ಆರೋಗ್ಯದ ಬಗ್ಗೆ ಅಧಿಕ ಎಚ್ಚರ ವಹಿಸಬೇಕು. ಅಗತ್ಯ ಬಿದ್ದರೆ ಡಾಕ್ಟರ್ ಭೇಟಿ ಮಾಡಿ. ಕಾರ್ಯ ಕ್ಷೇತ್ರದಲ್ಲಿ ಆಯಾಸ, ಸುಸ್ತು ನಿಮ್ಮನ್ನು ಕಾಡಬಹುದು. ವ್ಯಾಪಾರಿಗಳಿಗೆ ಉತ್ತಮ ಫಲ ಇಲ್ಲ. ಅವಸರದಲ್ಲಿ ಯಾವುದೇ ನಿರ್ಣಯ ಬೇಡ