Natural Hair Pack For Gray Hair: ಕೂದಲು ಬೆಳ್ಳಗಾಗಿದೆ ಎಂದು ಮಾರುಕಟ್ಟೆಯಲ್ಲಿ ಸಿಗುವ ಕೆಮಿಕಲ್ ಮಿಶ್ರಿತ ಹೇರ್ ಡೈ ಬಳಸುತ್ತಿದ್ದೀರಾ...
Natural Hair Pack For Gray Hair: ಬೂದು ಬಣ್ಣದ ಕೂದಲನ್ನು ಕಪ್ಪಾಗಿಸಲು ಮಾರುಕಟ್ಟೆಯಲ್ಲಿ ಸಿಗುವ ಕೆಮಿಕಲ್ ಮಿಶ್ರಿತ ಹೇರ್ ಡೈ ಬಳಸುವ ಅಗತ್ಯವಿಲ್ಲ. ಬದಲಿಗೆ ಮೆಹಂದಿಯನ್ನು ಸರಿಯಾದ ವಿಧಾನದಲ್ಲಿ ಬಳಸಿದರೆ ಸಾಕು.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಇತ್ತೀಚಿನ ದಿನಗಳಲ್ಲಿ ಕೂದಲು ಬಲು ಬೇಗ ಬೂದು ಬಣ್ಣಕ್ಕೆ ತಿರುಗುತ್ತದೆ. ಈ ಬೂದು ಬಣ್ಣದ ಕೂದಲು ಅಥವಾ ಬಿಳಿ ಕೂದಲನ್ನು ಕಪ್ಪಾಗಿಸಲು ಹೇರ್ ಡೈ ಬಳಕೆ ಸಾಮಾನ್ಯವಾಗಿದೆ.
ಆದರೆ, ಮಾರುಕಟ್ಟೆಯಲ್ಲಿ ಸಿಗುವ ಹೇರ್ ಡೈ ಕೆಮಿಕಲ್ ಮಿಶ್ರಿತವಾಗಿರುವುದರಿಂದ ಇದರ ಬಳಕೆಯಿಂದ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು.
ಬಿಳಿ ಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಸಲು ಮೆಹಂದಿ ಅತ್ಯುತ್ತಮ ಪರಿಹಾರವಾಗಿದೆ. ಆದರೆ, ಇದಕ್ಕಾಗಿ ಮೆಹಂದಿ ಹಚ್ಚುವ ಸರಿಯಾದ ವಿಧಾನ ತಿಳಿದಿರಬೇಕು.
ಬಿಳಿ ಕೂದಲಿಗೆ ಮೆಹಂದಿ ಪ್ಯಾಕ್ ಅನ್ವಯಿಸಲು ಇದರೊಂದಿಗೆ ಇಂಡಿಗೊ ಪುಡಿ, ಆಮ್ಲಾ ಪುಡಿ, ನಿಂಬೆ ರಸ, ಡಿಕಾಕ್ಷನ್ ಬಳಕೆಯೂ ತುಂಬಾ ಲಾಭದಾಯಕವಾಗಿದೆ.
ಮೊದಲಿಗೆ ಒಂದು ಲೋಟ ನೀರಿನಲ್ಲಿ 1 ಸ್ಪೂನ್ ಫಿಲ್ಟರ್ ಕಾಫಿ ಪುಡಿ, 1 ಸ್ಪೂನ್ ಟೀ ಸೊಪ್ಪು ಹಾಕಿ ನೀರು ಅರ್ಧ ಆಗುವವರೆಗೂ ಚೆನ್ನಾಗಿ ಕುದಿಸಿ. ಬಳಿಕ ಡಿಕಾಕ್ಷನ್ ಅನ್ನು ಶೋಧಿಸಿಕೊಳ್ಳಿ...
ಒಂದು ಬಟ್ಟಲಿನಲ್ಲಿ ಅರ್ಧ ಕಪ್ ಮೆಹಂದಿ ಪುಡಿ, ಅರ್ಧ ಕಪ್ ಇಂಡಿಗೊ ಪುಡಿ, 2 ಸ್ಪೂನ್ ಆಮ್ಲಾ ಪುಡಿ ಹಾಕಿ ಗಂಟಿಲ್ಲದಂತೆ ಚೆನ್ನಾಗಿ ಮಿಕ್ಸ್ ಮಾಡಿ. ಇದರಲ್ಲಿ ನಿಂಬೆ ರಸ ಹಾಕಿ ಬಳಿಕ ತಯಾರಿಸಿಟ್ಟ ಡಿಕಾಕ್ಷನ್ ಬೆರೆಸಿ ಹೇರ್ ಪ್ಯಾಕ್ ಹದಕ್ಕೆ ಮಿಶ್ರಣ ಮಾಡಿ.
ಮೆಹಂದಿ ಪ್ಯಾಕ್ ನಲ್ಲಿ ಬಳಸಲ್ಪಡುವ ವಸ್ತುಗಳ ಬಳಕೆಯಿಂದ ಬಿಳಿ ಕೂದಲಿಗೆ ಸಿಗುವ ಪ್ರಯೋಜನಗಳೆಂದರೆ... * ಮೆಹಂದಿ ಪುಡಿ- ಕಂದು ಬಣ್ಣ * ಇಂಡಿಗೊ ಪುಡಿ- ಕೂದಲನ್ನು ಗಾಢ ಕಪ್ಪಾಗಿಸಲು ಸಹಕಾರಿ * ನೆಲ್ಲಿಕಾಯಿ ಪುಡಿ- ಕೂದಲಿಗೆ ನೈಸರ್ಗಿಕ ಬಣ್ಣ ನೀಡಿ ಕೂದಲ ಬೆಳವಣಿಗೆಗೆ ಸಹಕಾರಿ * ನಿಂಬೆ ರಸ- ಕೂದಲನ್ನು ಬುಡದಿಂದ ಗಟ್ಟಿಯಾಗಿ ಕೂದಲು ಕಪ್ಪಾಗಲು ಸಹಕಾರಿ ಆಗಿದೆ. * ಟೀ-ಕಾಫಿ ಪುಡಿ ಡಿಕಾಕ್ಷನ್- ಬಿಳಿ ಕೂದಲನ್ನು ಗಾಢ ಕಪ್ಪಾಗಿಸುತ್ತದೆ.
ಮನೆಯಲ್ಲಿ ತಯಾರಿಸಿದ ಹೆನ್ನಾ ಹೇರ್ ಪ್ಯಾಕ್ ಅನ್ನು ಕೂದಲಿಗೆ ಅಪ್ಪ್ಲೈ ಮಾಡಿ. ಪ್ಯಾಕ್ ಒಣಗಿದ ಬಳಿಕ ಸೌಮ್ಯ ಶಾಂಪೂವಿನಿಂದ ಹೇರ್ ವಾಶ್ ಮಾಡಿ. ಮೆಹಂದಿ ಮತ್ತು ಇಂಡಿಗೊ ಪುಡಿ ಕೂದಲನ್ನು ಡ್ರೈ ಮಾಡುವ ಸಾಧ್ಯತೆ ಇರುವುದರಿಂದ ಹೇರ್ ವಾಶ್ ಮಾಡಿದ ಬಳಿಕ ಕಂಡೀಷನರ್ ಹಾಕುವುದನ್ನು ಮರೆಯಬೇಡಿ.
ಈ ಹೇರ್ ಪ್ಯಾಕ್ ಬಳಸುವುದರಿಂದ ಬಿಳಿ ಕೂದಲು ನೈಸರ್ಗಿಕವಾಗಿ ಕಡು ಕಪ್ಪಾಗಿ ಮಾರುದ್ದ ಬೆಳೆಯುತ್ತದೆ. ಜೊತೆಗೆ ಆಕರ್ಷಕ ಕಾಂತಿಯುತ ಕೂದಲು ನಿಮ್ಮದಾಗುತ್ತದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.