Best Games of 2021 : ಬರುತ್ತಿದೆ PUBGಯನ್ನುಮೀರಿಸುವ ಗೇಮ್ಸ್

2021ರಲ್ಲಿ ಬರುತ್ತಿದೆ PUBGಯನ್ನುಮೀರಿಸುವ  ಗೇಮ್ಸ್.. ಲಾಂಚ್ ಆಗಲಿದೆ 5 ಹೊಸ ಗೇಮ್ಸ್..
 

ನವದೆಹಲಿ : ಕೊರೋನಾ ಕಾಲದಲ್ಲಿ ಬಹಳಷ್ಟು ಮಂದಿ ಮೊಬೈಲ್ ಗೇಮ್ ಮೊರೆ ಹೋಗಿದ್ದರು. ಲಾಕ್  ಡೌನ್ ನಡುವೆ PUBGಗೆ  ನಿಷೇಧಹೇರಿರುವುದು ಅದೆಷ್ಟೋ ಜನರಿಗೆ ಬೇಸರ ತರಿಸಿತ್ತು.  ಮೊಬೈಲ್ ಗೇಮ್ ಇಷ್ಟಪಡುವವರಿಗೆ ಇಲ್ಲಿದೆ ಗುಡ್ ನ್ಯೂಸ್. ಇನ್ನು ಬರೀ ಒಂದೆರಡು ಗೇಮ್ ನಲ್ಲಿಯೇ ಕಾಲ ಕಳೆಯಬೇಕಾಗಿಲ್ಲ. 2021ರಲ್ಲಿ ಬರಲಿದೆ PUBGಯನ್ನೂ  ಮೀರಿಸುವಂತಹ ಗೇಮ್ ಗಳು. 
 

1 /5

ನೂತನ ಹಿಟ್ ಮ್ಯಾನ್ 3 (Hitman 3) ಜನವರಿಯಲ್ಲಿ ಲಾಂಚ್  ಆಗಲಿದೆ. ಟೆಕ್ ಸೈಟ್ cnet.comನ ಪ್ರಕಾರ  Agent 47 ಹೆಸರಿನಲ್ಲಿ ಪ್ರಖ್ಯಾತಿಯಾಗಿದ್ದ ಹಿಟ್ ಮ್ಯಾನ್ (Hitman) ಮೊದಲು 2016ರಲ್ಲಿ ಲಾಂಚ್ ಆಗಿತ್ತು. ಹಿಟ್ ಮ್ಯಾನ್3ಯಲ್ಲಿ ಇಡೀ ಜಗತ್ತನೇ ಸುತ್ತಿ ಶತ್ರುಗಳನ್ನು ಮುಗಿಸಿಬಿಡಬಹುದು.  

2 /5

ಮಾರಿಯೋ ಆಟವಾಡುವವರಿಗೂ ಇಲ್ಲಿದೆ ಗುಡ್ ನ್ಯೂಸ್. ಫೆಬ್ರವರಿಯಲ್ಲಿ Super Mario 3D World + Bowser's Fury ಕೂಡಾ ಲಾಂಚ್ ಆಗಲಿದೆ. ಫೆಬ್ರವರಿಯಲ್ಲಿ ಬರಲಿರುವ Super Mario 3D World ಗೇಮ್ ಒರಿಜಿನಲ್ ರಿಲೀಸ್ ಎನ್ನಲಾಗಿದೆ.

3 /5

ಇನ್ನು ಮಾರ್ಚ್ ತಿಂಗಳಲ್ಲಿ  Monster Hunter Rise ಗೇಮ್ ಬರಲಿದೆ. PS4 ಮತ್ತು Xbox ನಲ್ಲಿ  ಎಲ್ಲರ ಮೆಚ್ಚುಗೆ ಪಡೆದಿದ್ದ Monster Hunter Rise ಅನ್ನುಈ ಬಾರಿ Nintendo ನಲ್ಲಿಯೂ ಲಾಂಚ್ ಮಾಡಲಾಗುತ್ತದೆ. 

4 /5

ನೀವು ಈ ಆಟದಲ್ಲಿ ಬಂಧಿಯಾಗಿದ್ದೀರಿ. ನಿಮ್ಮನ್ನು ನೀವು ರಕ್ಷಿಸಿಕೊಳ್ಳಬೇಕಾದರೆ 8 ಜನರ ಪ್ರಾಣತೆಗೆಯಬೇಕಾಗುತ್ತದೆ. ಈ ರೀತಿಯ ಗೇಮ್   Deathloop. ಈ ಗೇಮ್ ನಟೀಸರ್ ಭಾರೀ ಸುದ್ದಿ ಮಾಡಿತ್ತು.    

5 /5

ಯಾರೆಲ್ಲ The Sands of Time ಅನ್ನು ಮೊದಲು ಆಡಿದ್ದೀರೋ ಅವರಿಗೂ ಒಂದು  ಒಳ್ಳೆ ಸುದ್ದಿ ಇದೆ. Prince of Persia: The Sands of Time Remake ಮಾರ್ಚ್ ತಿಂಗಳಲ್ಲಿ ಬರಲಿದೆ.