White Hair Best remedy: ಬದಲಾದ ಜೀವನಶೈಲಿ ಮತ್ತು ಆಹಾರ ಪದ್ಧತಿಯಿಂದಾಗಿ ದೇಹದಲ್ಲಿ ಹಲವಾರು ಬದಲಾವಣೆಗಳು ಆಗುತ್ತಿವೆ. ಹಾರ್ಮೋನುಗಳ ಅಸಮತೋಲನ, ಅಧಿಕ ತೂಕ, ಕೂದಲಿನ ಸಮಸ್ಯೆಗಳು. ವಿಶೇಷವಾಗಿ ಕೂದಲಿಗೆ ಸಂಬಂಧಿಸಿದ ಸಮಸ್ಯೆಗಳಿಂದ ಅನೇಕ ಜನರು ತೊಂದರೆ ಅನುಭವಿಸುತ್ತಿದ್ದಾರೆ.
ಇಲ್ಲಿಯವರೆಗೆ, ದೊಡ್ಡವರು ಮಾತ್ರ ಈ ಬಿಳಿಕೂದಲಿನ ಗೊಂದಲಕ್ಕೊಳಗಾಗಿದ್ದರು.. ಆದರೆ ಈಗ ಬಾಲ್ಯದಲ್ಲಿ ಕೂದಲು ಬಿಳಿ ಬಣ್ಣಕ್ಕೆ ತಿರುಗುತ್ತದೆ. ಇದರಿಂದ ಚಿಕ್ಕ ವಯಸ್ಸಿನಲ್ಲಿ ದೊಡ್ಡವರಂತೆ ಕಾಣುತ್ತಾರೆ.
ಹಲವಾರು ಪ್ರಾಡಕ್ಟ್ ಬಳಸಿದ ಮೇಲೂ ಯಾವುದೇ ಫಲಿತಾಂಶ ಕಾಣದಿದ್ದವರು ಮನೆಯಲ್ಲೇ ಸುಲಭವಾದ ಮತ್ತು ನೈಸರ್ಗಿಕ ವಿಧಾನದಿಂದ ಪೇಸ್ಟ್ ಅನ್ನು ತಯಾರಿಸಿ ಬಳಸುವುದರಿಂದ ಕೂದಲಿನ ಸಮಸ್ಯೆಯಿಂದ ಬಹಳ ಸುಲಭವಾಗಿ ಮುಕ್ತಿ ಪಡೆಯಬಹುದು.
ವಾರಕ್ಕೊಮ್ಮೆ ಈ ಟಿಪ್ಸ್ ಬಳಸಿದರೆ ಕೂದಲು ಉದುರುವುದು ಕಡಿಮೆಯಾಗುವುದಲ್ಲದೆ ಆರೋಗ್ಯಕರ ಮತ್ತು ಉದ್ದವಾಗುವುದು. ಹಾಗಾದ್ರೆ ಆ ಸಲಹೆ ಏನು? ಈಗ ಅದನ್ನು ಹೇಗೆ ಬಳಸುವುದು ಎಂದು ತಿಳಿಯೋಣ.
ಬೇಕಾಗುವ ಪದಾರ್ಥಗಳು: ಭೃಂಗರಾಜ ಪುಡಿ – ಎರಡು ಚಮಚ, ಆಮ್ಲಾ ಪುಡಿ – ಎರಡು ಚಮಚ, ಮೊಸರು – ನಾಲ್ಕು ಚಮಚ.
ಹೇರ್ ಪ್ಯಾಕ್ ಮಾಡುವುದು ಹೇಗೆ:ಒಂದು ಬಟ್ಟಲಿನಲ್ಲಿ ಮೂರು ಚಮಚ ಭೃಂಗರಾಜ ಪುಡಿಯನ್ನು ತೆಗೆದುಕೊಳ್ಳಿ. ಅದರ ನಂತರ ಎರಡು ಚಮಚ ಆಮ್ಲಾ ಪುಡಿ ಮತ್ತು ನಾಲ್ಕು ಟೀ ಚಮಚ ಮೊಸರು ಸೇರಿಸಿ.. ಪೇಸ್ಟ್ ರೀತಿಯಲ್ಲಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಈ ಮಿಶ್ರಣವನ್ನು ಕೂದಲಿನ ಬೇರುಗಳಿಂದ ತುದಿಯವರೆಗೆ ಚೆನ್ನಾಗಿ ಹಚ್ಚಿ. ಈ ರೀತಿ ಮಾಡುವುದರಿಂದ ಕೂದಲು ದಟ್ಟವಾಗಿ ಉದ್ದವಾಗುವುದು.
ಬಹುತೇಕ ಎಲ್ಲಾ ಕೂದಲಿಗೆ ಸಂಬಂಧಿಸಿದ ಸಮಸ್ಯೆಗಳು ಮಾಯವಾಗುತ್ತವೆ. ಈ ಪ್ರತಿಯೊಂದು ಪದಾರ್ಥಗಳು ಕೂದಲಿಗೆ ಉತ್ತಮ ಪೋಷಣೆಯನ್ನು ಒದಗಿಸುತ್ತದೆ. ಈ ಪೇಸ್ಟ್ ಅನ್ನು ತಯಾರಿಸಿ ವಾರಕ್ಕೊಮ್ಮೆ ಬಳಸುವುದರಿಂದ ನಿಮ್ಮ ಕೂದಲು ಕಪ್ಪಾಗಿ, ಉದ್ದವಾಗಿ ಮತ್ತು ಹೊಳೆಯುತ್ತದೆ.
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.