BBK 11: ಮೊದಲ ವಾರದಲ್ಲೆ ಬಿಗ್‌ಬಾಸ್‌ ಮನೆಯಲ್ಲಿ ಕಿಡಿ! ಅರ್ಧಕ್ಕೆ ಅರ್ಧ ಮನೆ ನಾಮಿನೇಟೆಡ್‌..ಮನೆಯಿಂದ ಔಟ್‌ ಆಗೋರ್ಯಾರು?

Bigboss kannada 11: ಬಿಗ್‌ಬಾಸ್‌ ಸೀಸನ್‌ 11 ಶುರುವಾಗಿ ಕೇವಲ ಮೂರು ದಿನ ಕಳೆದಿದೆ, ಅಷ್ಟರೆಲ್ಲೆ ಮನೆಯಲ್ಲಿ ಸ್ಪರ್ಧಿಗಳ ನಡುವೆ ಬಿನ್ನಾಭಿಪ್ರಾಯ ಶುರುವಾಗಿದೆ, ಎಲ್ಲಾ ಭಾರಿಯಂತೆ ಅಲ್ಲದೆ ಈ ಭಾರಿ ಬಿಗ್‌ ಬಾಸ್‌ ಮನೆಯಲ್ಲಿ ಓಪನ್‌ ನಾಮಿನೇಷನ್‌ ಮಾಡಲಾಗಿತ್ತು. ಇದರಲ್ಲಿ ಅರ್ಧಕ್ಕೆ ಅರ್ಧ ಮನೆಯೇ ನಾಮಿನೇಟ್‌ ಆಗಿದೆ. 
 
1 /8

2 /8

ಮೊದಲನೇ ಹಂತದಲ್ಲಿಯೇ ಚೈತ್ರ ಕುಂದಾಪುರ ನೇರವಾಗಿ ನಾಮಿನೇಟ್‌ ಆಗಿದ್ದು, ಎರಡನೇ ಹಂತದಲ್ಲಿ ಮನೆಯ 9 ಸ್ಪರ್ಧಿಗಳು ನಾಮಿನೇಟ್‌ ಆಗಿದ್ದಾರೆ. ಒಟ್ಟು 10 ಜನರು ಮೊದಲ ವಾರನೇ ನಾಮಿನೇಟ್‌ ಆಗಿದ್ದು, ಮನೆಯಿಂದ ಯಾರು ಹೊರ ಹೋಗಲಿದ್ದಾರೆ ಎನ್ನು ಚರ್ಚೆ ಇದೀಗ ಶುರುವಾಗಿದೆ.  

3 /8

ರೂಲ್ಸ್‌ ಬ್ರೇಕ್‌ ಮಾಡಿದ್ದ ಕಾರಣಕ್ಕೆ ಇತರ ಸ್ಪರ್ಧಿಗಳ ಕೆಂಗಣ್ಣಿಗೆ ಗುರಿಯಾಗಿದ್ದ ಚೈತ್ರ ಕುಂದಾಪುರ ಅವರನ್ನು ಹೆಚ್ಚು ಜನ ನಾಮಿನೇಟ್‌ ಮಾಡಿದರು.   

4 /8

ಮೊದಲನೇ ಹಂತದಲ್ಲೆ ನಾಮನೇಟ್‌ ಆದ ಚೈತ್ರ ಕುಂದಾ ಪುರ ಅವರನ್ನು ಹೊರತು ಪಡಿಸಿ, ಪ್ರತಿ ಒಂದು ಹಂತದಲ್ಲಿ ಮನೆಯ 2 ಸ್ಪರ್ಧಿಗಳು ನಾಮಿನೇಟ್‌ ಆದರು.  

5 /8

ಮೊದಲ ಸುತ್ತಿನ ಟಾಸ್ಕ್‌ನಲ್ಲಿ ಗೌತಮಿ ಜಾಧವ್-ಯಮುನಾ ಶ್ರೀನಿಧಿ ಮತ್ತು ಲಾಯರ್ ಜಗದೀಶ್‌ರನ್ನ ನಾಮಿನೇಟ್ ಮಾಡಿದರು.  

6 /8

ನಂತರ ಟಾಸ್ಕ್‌ನಲ್ಲಿ ಗೆದ್ದ ಅನುಷಾ ಸೇಫ್‌ ಆಗುವ ಮೂಲಕ. ಇವರ ವಿರುದ್ಧ ಸೋತ ಮೋಕ್ಷಿತಾ ಪೈ ನೇರವಾಗಿ ನಾಮಿನೇಟ್ ಆದರು.   

7 /8

ಇನ್ನೂ ನಾಮಿನೇಟ್‌ ಆಗಿರುವವರು ಪೈಕಿ, ಇದೀಗ ಸ್ವರ್ಗವಾಸಿಗಳಾದ ಲಾಯರ್ ಜಗದೀಶ್, ಗೌತಮಿ ಜಾಧವ್, ಹಂಸ, ಭವ್ಯಾ ಗೌಡ ಮತ್ತು ಯಮುನಾ ಶ್ರೀನಿಧಿ ನಾಮಿನೇಟ್‌ ಆಗಿದ್ದಾರೆ.   

8 /8

ಇನ್ನೂ, ನರಕವಾಸಿಗಳ ಪೈಕಿ ಶಿಶಿರ್ ಶಾಸ್ತ್ರಿ, ಚೈತ್ರಾ ಕುಂದಾಪುರ, ಮಾನಸಾ ಹಾಗೂ ಮೋಕ್ಷಿತಾ ಪೈ ನಾಮಿನೇಟ್‌ ಆಗಿದ್ದು, ಮೊದಲ ವಾರವೇ ಮನೆಯಿಂದ 10 ಜನ ನಾಮಿನೇಟ್‌ ಆಗಿದ್ದಾರೆ.