Aishwarya Shindogi Real Age: ಬಿಗ್ ಬಾಸ್ ಕನ್ನಡ 11 ಮನೆಗೆ 13ನೇ ಸ್ಪರ್ಧಿಯಾಗಿ ಐಶ್ವರ್ಯಾ ಸಿಂಧೋಗಿ ಕಾಲಿಟ್ಟಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
Aishwarya Shindogi Real Age: ಬಿಗ್ ಬಾಸ್ ಕನ್ನಡ 11 ಮನೆಗೆ 13ನೇ ಸ್ಪರ್ಧಿಯಾಗಿ ಐಶ್ವರ್ಯಾ ಸಿಂಧೋಗಿ ಕಾಲಿಟ್ಟಿದ್ದಾರೆ.
ಕನ್ನಡ ಸಿನಿಮಾ ಸೇರಿದಂತೆ ಕಿರುತೆರೆಯಲ್ಲಿ ಮಿಂಚಿರುವ ಐಶ್ವರ್ಯಾ ಜೀವನ ಅವರ ನಗುವಿನಷ್ಟು ಸುಂದರವಾಗಿಲ್ಲ. ಐಶ್ವರ್ಯಾ ನಗು ಮುಖದ ಚೆಲುವೆ. ಈಕೆಯ ನಗುವೇ ಎಲ್ಲರನ್ನು ಸೆಳೆಯುತ್ತೆ. ಬಿಗ್ ಬಾಸ್ ಮನೆಯಲ್ಲಿ ಸ್ವರ್ಗದಲ್ಲಿ ಇರುವ ಐಶ್ವರ್ಯಾ ಸಿಂಧೋಗಿ ನಿಜ ಜೀವನದಲ್ಲೇ ನರಕ ಕಂಡಿದ್ದಾರೆ.
ಆಗಸ್ಟ್ 5, 1994 ರಂದು ಐಶ್ವರ್ಯಾ ಸಿಂಧೋಗಿ ಜನಿಸಿದರು. ಸದ್ಯ ಐಶ್ವರ್ಯಾ ಸಿಂಧೋಗಿ ಅವರಿಗೆ 30 ವರ್ಷ ವಯಸ್ಸು. ಬೆಂಗಳೂರಿನಲ್ಲೇ ಹುಟ್ಟಿ ಬೆಳೆದ ಐಶ್ವರ್ಯಾ ಡ್ಯಾಫೋಡಿಲ್ಸ್ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದಾರೆ.
ಶಾಲೆಯಲ್ಲಿ ಓದುವಾಗ ರಾಜ್ಯ ಮಟ್ಟದ ಹಾಕಿ ಆಟಗಾರ್ತಿಯಾಗಿದ್ದರು. ಐಶ್ವರ್ಯಾ ಸಿಂಧೋಗಿ ಬ್ಯಾಸ್ಕೆಟ್‌ಬಾಲ್, ಬ್ಯಾಡ್ಮಿಂಟನ್, ವಾಲಿಬಾಲ್ ಪ್ಲೇಯರ್ ಕೂಡ ಆಗಿದ್ದಾರೆ. ಫಿಸಿಕಲಿ ಸಖತ್ ಫಿಟ್ ಮತ್ತು ಮೆಂಟಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದಾರೆ.
ಹೋಟೆಲ್ ಮ್ಯಾನೇಜ್‌ಮೆಂಟ್‌ನಲ್ಲಿ ಡಿಗ್ರಿ ಪಡೆದ ಐಶ್ವರ್ಯಾ ಶೆಫ್‌ಆಗಿ ಕೆಲ ಕಾಲ ಕೆಲಸ ಮಾಡಿದ್ದಾರೆ. ಐಶ್ವರ್ಯಾ ಸಿಂಧೋಗಿ culinary ಯಲ್ಲಿ ಸ್ಪೆಷಲೈಸ್ ಮಾಡಿದ್ದಾರೆ. ಯುಎಸ್‌ಗೆ ತೆರಳಿದ ಐಶ್ವರ್ಯಾ ಸಿಂಧೋಗಿ ಅಲ್ಲಿನ ಪ್ರತಿಷ್ಟಿತ ಹೋಟೆಲ್‌ನಲ್ಲಿ ಇಂಟರ್ನ್ ಶೆಫ್ ಆಗಿ ಕೆಲಸ ಮಾಡಿದ್ದಾರೆ. ಯುಎಸ್ ಹೋಟೆಲ್‌ನಲ್ಲಿ American Cuisine ಪರಿ ಪೂರ್ಣ ಜ್ಞಾನ ಪಡೆದರು.
ಐಶ್ವರ್ಯಾ ಸಿಂಧೋಗಿ ಅವರ ತಂದೆ ಸುರೇಶ್. ಇವರು ಅಡುಗೆಯಲ್ಲಿ ಪರಿಣಿತರು. ಅಡುಗೆ ಬಗ್ಗೆ ಐಶ್ವರ್ಯಾ ಸಿಂಧೋಗಿಗೆ ತಂದೆಯಿಂದಲೇ ಆಸಕ್ತಿ ಹುಟ್ಟಿದ್ದು. ತಮ್ಮದೇ ಸ್ವಂತ ರೆಸ್ಟೋರೆಂಟ್ ಆರಂಭಿಸಬೇಕು ಎಂಬ ಆಸೆ, ಕನಸು ಹೊಂದಿದ್ದಾರೆ ಐಶ್ವರ್ಯಾ ಸಿಂಧೋಗಿ. ಆದರೆ, ತಂದೆ ಸುರೇಶ್ ಹಠಾತ್ ಸಾವನ್ನಪ್ಪಿದರು. ಇದರಿಂದ ಐಶ್ವರ್ಯಾ ಸಿಂಧೋಗಿ ಆರ್ಥಿಕವಾಗಿ ಕುಗ್ಗಿದರು.
ತಂದೆ ತೀರಿಕೊಂಡ ನಂತರ ಅಪ್ಪನ ಬಿಸಿನೆಸ್ ನೋಡಿಕೊಳ್ಳಲು ಹೋದಾಗ ತುಂಬಾ ಜನ ಮೋಸ ಮಾಡಿಬಿಟ್ಟರು ಎಂದಿದ್ದಾರೆ ಐಶ್ವರ್ಯಾ ಸಿಂಧೋಗಿ ಬಿಗ್ ಬಾಸ್ ವೇದಿಕೆ ಮೇಲೇಯೇ ತಿಳಿಸಿದ್ದರು. ಅಪ್ಪನನ್ನು ಕಳೆದುಕೊಂಡ ಎರಡೇ ವರ್ಷದಲ್ಲಿ ಐಶ್ವರ್ಯಾ ಸಿಂಧೋಗಿ ತಾಯಿಯನ್ನೂ ಕಳೆದುಕೊಂಡರು. ಅಪ್ಪ ಅಮ್ಮ ಇಬ್ಬರೂ ಇಲ್ಲದೇ ಒಂಟಿಯಾದರು.
ಸಪ್ನೋಂಕಿ ರಾಣಿ, ಸಿಂಹಾದ್ರಿ, ಮಟಾಷ್, ಸಂಯುಕ್ತ 2, ಸೈತಾನ್, ವಾವ್, ಯಾರು ಯಾರು ನೀ ಯಾರು? ಮುಂತಾದ ಸಿನಿಮಾಗಳಲ್ಲಿ ಐಶ್ವರ್ಯಾ ಸಿಂಧೋಗಿ ನಟಿಸಿದ್ದಾರೆ.