iPhone 12 ಖರೀದಿಯ ಮೇಲೆ ಭರ್ಜರಿ ಡಿಸ್ಕೌಂಟ್

                       

Apple iPhone 12:  2020 ರಲ್ಲಿ ಬಿಡುಗಡೆಯಾದಾಗಿನಿಂದ ದೇಶದಲ್ಲಿ ಅತ್ಯಂತ ಜನಪ್ರಿಯವಾಗಿರುವ ಸ್ಮಾರ್ಟ್‌ಫೋನ್‌ಗಳಲ್ಲಿ ಒಂದಾದ ಐಫೋನ್ 12 ರ ಮೇಲೆ ಭಾರೀ ರಿಯಾಯಿತಿ ಲಭ್ಯವಾಗುತ್ತಿದೆ. ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ನಂತಹ ಪ್ರಮುಖ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಲ್ಲಿ ಪ್ರಸ್ತುತ ಆಪಲ್ ಐಫೋನ್ 12 ರ ಮೇಲೆ ಗ್ರಾಹಕರಿಗೆ ಹಲವು ಆಫರ್ ಲಭ್ಯವಾಗುತ್ತಿದ್ದು ಇವುಗಳ ಲಾಭ ಪಡೆಯುವ ಮೂಲಕ  ಕೇವಲ 39,999 ರೂ.ಗಳಲ್ಲಿ ಈ ಸ್ಮಾರ್ಟ್‌ಫೋನ್‌ ಅನ್ನು ಖರೀದಿಸಬಹುದಾಗಿದೆ. ನೀವೂ ಸಹ ಐಫೋನ್ ಖರೀದಿಸುವ ಬಗ್ಗೆ ಪ್ಲಾನ್ ಮಾಡುತ್ತಿದ್ದರೆ ಇದನ್ನು ತಪ್ಪದೇ ಓದಿ...

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಐಫೋನ್ 12 ಖರೀದಿಯ ಮೇಲೆ  ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ ಫ್ಲಿಪ್‌ಕಾರ್ಟ್ ಭಾರೀ ಡಿಸ್ಕೌಂಟ್ ನೀಡುತ್ತಿದೆ. ವಾಸ್ತವವಾಗಿ, ಮಾರುಕಟ್ಟೆಯಲ್ಲಿ ಈ ಸ್ಮಾರ್ಟ್‌ಫೋನ್ ಬೆಲೆ ರೂ. 56,999  ಆಗಿದೆ. ಆದರೆ, ಫ್ಲಿಪ್‌ಕಾರ್ಟ್ ಈ ಐಫೋನ್ 12 ಖರೀದಿಯ ಮೇಲೆ ಭರ್ಜರಿ ಕೊಡುಗೆಗಳನ್ನು ಪರಿಚಯಿಸಿದೆ. ಇವುಗಳನ್ನು ಬಳಸಿಕೊಂಡು ನೀವು ಐಫೋನ್ 12 ಫೋನ್ ಅನ್ನು ಕಡಿಮೆ ಬೆಲೆಯಲ್ಲಿ ಖರೀದಿಸಲು ಸಾಧ್ಯವಾಗುತ್ತದೆ. 

2 /5

ಫ್ಲಿಪ್‌ಕಾರ್ಟ್ ಪ್ರಸ್ತುತ ಐಫೋನ್ 12 ಖರೀದಿಗೆ ತನ್ನ ಹಳೆಯ ಸ್ಮಾರ್ಟ್‌ಫೋನ್‌ನಲ್ಲಿ ವಹಿವಾಟಿನ ಮೇಲೆ ರೂ. 13,000 ವರೆಗೆ ಎಕ್ಸ್ಚೇಂಜ್ ಆಫರ್ ಪರಿಚಯಿಸಿದೆ. ಆದಾಗ್ಯೂ, ನಿಮ್ಮ ಸ್ಮಾರ್ಟ್‌ಫೋನ್‌ ಇತ್ತೀಚಿನದಾಗಿದ್ದು ಉತ್ತಮವಾಗಿ ಕಾರ್ಯನಿರ್ವಹಿಸುವ ಸ್ಥಿತಿಯಲ್ಲಿದ್ದರೆ ಮಾತ್ರ ಈ ಕೊಡುಗೆ ಲಭ್ಯವಾಗಲಿದೆ. 

3 /5

ಗ್ರಾಹಕರು ಎಚ್ಡಿಎಫ್ಸಿ ಬ್ಯಾಂಕ್ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್‌ಗಳನ್ನು ಬಳಸಿಕೊಂಡು ಐಫೋನ್ 12 ಖರೀದಿಸುತ್ತಿದ್ದರೆ ಅಂತಹ ಗ್ರಾಹಕರಿಗೆ ಹೆಚ್ಚುವರಿಯಾಗಿ ನಾಲ್ಕು ಸಾವಿರ ರೂ.ಗಳ ರಿಯಾಯಿತಿ ಲಭ್ಯವಾಗಲಿದೆ. ನೀವು ಎಕ್ಸ್ಚೇಂಜ್ ಆಫರ್ ಮತ್ತು ಬ್ಯಾಂಕ್ ಆಫರ್ ಪಡೆಯಲು ಶಕ್ತರಾದರೆ ಫ್ಲಿಪ್‌ಕಾರ್ಟ್‌ನಲ್ಲಿ ಕೇವಲ 39,999 ರೂ.ಗಳಿಗೆ  ಐಫೋನ್ 12 ಖರೀಸಬಹುದಾಗಿ

4 /5

ಆಪಲ್ ಕಂಪನಿಯ  ಐಫೋನ್ 12  ಎ14 ಬಯೋನಿಕ್ ಚಿಪ್‌ನಿಂದ ಚಾಲಿತವಾಗಿದೆ. ಪ್ರೊಸೆಸರ್ ಮೂರನೇ ತಲೆಮಾರಿನ ನ್ಯೂರಲ್ ಎಂಜಿನ್ನೊಂದಿಗೆ ಬರುತ್ತದೆ ಮತ್ತು ಸೂಪರ್ ರೆಟಿನಾ XDR ಡಿಸ್ಪ್ಲೇಯನ್ನು ಪ್ಯಾಕ್ ಮಾಡುತ್ತದೆ. ಸುರಕ್ಷಿತ ದೃಢೀಕರಣಕ್ಕಾಗಿ ಸಾಧನವು ಫೇಸ್ ಐಡಿಯನ್ನು ಸೌಲಭ್ಯವನ್ನು ಒಳಗೊಂಡಿದೆ.

5 /5

ಆಪಲ್ ಕಂಪನಿಯ  ಐಫೋನ್ 12 ವೈಶಿಷ್ಟ್ಯಗಳ ಬಗ್ಗೆ ಹೇಳುವುದಾದರೆ ಇದು ಡ್ಯುಯಲ್-ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ ಮತ್ತು ಪೋರ್ಟ್ರೇಟ್ ಮೋಡ್, 4k ವೀಡಿಯೊ ಮತ್ತು ಸ್ಲೋ-ಮೋಷನ್ ವೀಡಿಯೊದೊಂದಿಗೆ 12 ಎಂಪಿ ಟ್ರೂಡೆಪ್ತ್ ಫ್ರಂಟ್ ಕ್ಯಾಮೆರಾವನ್ನು ಹೊಂದಿದೆ. ಅಲ್ಲದೆ, ಫೋನ್ ನೀರು ಮತ್ತು ಧೂಳು ನಿರೋಧಕವಾಗಿದ್ದು ಫಾಸ್ಟ್  ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.