Bollywood actress life : ಚಿತ್ರರಂಗದಲ್ಲಿ ಅದೃಷ್ಟದ ಜೊತೆಗೆ ಕಷ್ಟಪಟ್ಟು ದುಡಿದರೆ ಯಶಸ್ವಿಯಾಗುತ್ತಾರೆ. ಇಲ್ಲದಿದ್ದರೆ ಬಂದ ಹಾದಿಗೆ ಸುಂಕವಿಲ್ಲ ಅಂತ ಮರಳಿ ಮನೆಗೆ ಹೋಗಬೇಕಾಗುತ್ತದೆ.. ಹಾಗಾಗಿಯೇ ಹೀರೋ, ಹೀರೋಯಿನ್ ಆಗಬೇಕು ಎಂಬ ಗುರಿ ಇಟ್ಟುಕೊಂಡು ಇಂಡಸ್ಟ್ರಿಗೆ ಬರುವವರಲ್ಲಿ ಕೆಲವರು ಮಾತ್ರ ಗುರಿ ತಲುಪುತ್ತಾರೆ. ಅದರಂತೆ ವಿದೇಶಿ ಯುವತಿಯೊಬ್ಬಳು ಭಾರತೀಯ ಚಿತ್ರರಂಗದಲ್ಲಿ ನೆಲೆಯೂರಿ ಇಂದು ಸ್ಟಾರ್ ನಟಿಯಾಗಿ ಹೊರಹೊಮ್ಮಿದ್ದಾಳೆ.
ಕೆನಡಾದಲ್ಲಿ ಹುಟ್ಟಿ ಬೆಳೆದ ಈ ಸುಂದರಿ ಭಾರತಕ್ಕೆ ಬಂದಿದ್ದು ನಟನೆಗಾಗಿ. ಸಾಕಷ್ಟು ಕಷ್ಟಗಳ ನಂತರ ಈ ಚೆಲುವೆಗೆ ಸಣ್ಣಪುಟ್ಟ ಅವಕಾಶಗಳು ಸಿಕ್ಕವು. ಈಗ ಐದು ನಿಮಿಷದ ಹಾಡಿನಲ್ಲಿ ಕುಣಿದರೆ ಕೋಟ್ಯಂತರ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ.
ಹೌದು.. ಅವಳು ಬೇರೆ ಯಾರೂ ಅಲ್ಲ, ಕೆನಡಾದ ನರ್ತಕಿ, ನಟಿ ನೋರಾ ಫತೇಹಿ.. ನೋರಾ ತಮ್ಮ ವಿಶೇಷ ಹಾಡುಗಳಿಗೆ ಮನ್ನಣೆ ಗಳಿಸಿದ್ದಾರೆ. ಬಾಹುಬಲಿಯಲ್ಲಿ "ಮನೋಹರಿ" ಹಾಡಿಗೆ ಹೆಜ್ಜೆ ಹಾಕಿದ ಈ ಚೆಲುವೆ ಹೊಸದಾಗಿ ಭಾರತಕ್ಕೆ ಬಂದಾಗ ಸಾಕಷ್ಟು ತೊಂದರೆಗಳನ್ನು ಎದುರಿಸಿದರು.
ಆಕೆ ಸೇರಿದಂತೆ ಒಂಬತ್ತು ಮಂದಿ ಜೊತೆ ಒಂದೇ ಮನೆಯಲ್ಲಿ ವಾಸಿವಾಗಿದ್ದರು. ಸಾಕಷ್ಟು ಕಷ್ಟಗಳ ನಂತರ ಸಧ್ಯ ಈ ಸುಂದರಿ, ಕೋಟಿ ರೂ. ಬೆಲೆ ಬಾಳುವ ಐಶಾರಾಮಿ ಪ್ಲಾಟ್‌ನಲ್ಲಿ ವಾಸಿಸುತ್ತಿದ್ದಾಳೆ. ಸಿನಿಮಾದಲ್ಲಿ ಕೇವಲ 5 ನಿಮಿಷ ನಟಿಸಿದರೂ ಕೋಟಿ ಕೋಟಿ ಸಂಭಾವನೆ ಪಡೆಯುತ್ತಿದ್ದಾಳೆ.
ನೋರಾ ಫತೇಹಿ ಫೆಬ್ರವರಿ 6, 1992 ರಂದು ಕೆನಡಾದ ಮಾಂಟ್ರಿಯಲ್‌ನಲ್ಲಿ ಜನಿಸಿದರು. ಪೋಷಕರು ಮೊರೊಕನ್ ಮೂಲದ ಮುಸ್ಲಿಮರು, ಆದರೆ ತಂದೆಯ ಮೂಲ ಕುಟುಂಬ ಭಾರತದಲ್ಲಿದೆ. ಚಿಕ್ಕಂದಿನಿಂದಲೂ ಸಿನಿಮಾದಲ್ಲಿ ನಟಿಸುವ ಆಸೆ ಹೊಂದಿದ್ದ ನಟಿ, ಅದಕ್ಕಾಗಿಯೇ ಭಾರತಕ್ಕೆ ಬಂದಿದ್ದರು. ಅದಕ್ಕೂ ಮೊದಲು ಉತ್ತಮ ನೃತ್ಯಗಾರ್ತಿ ಎಂದು ಹೆಸರಾಗಿದ್ದರು.
ನೋರಾ ಹಿಂದಿ ಚಲನಚಿತ್ರ 'ರೋರ್: ಟೈಗರ್ಸ್ ಆಫ್ ದಿ ಸುಂದರಬನ್ಸ್' ಮೂಲಕ ತನ್ನ ವೃತ್ತಿಜೀವನವನ್ನು ಪ್ರಾರಂಭಿಸಿದಳು. ನಂತರ, ಅವರು 'ಬಾಹುಬಲಿ: ದಿ ಬಿಗಿನಿಂಗ್' ಚಿತ್ರದಲ್ಲಿ ಮನೋಹರಿ, 'ಟೆಂಪರ್' ನಲ್ಲಿ ಇಟ್ಟಾಗೆ ರೆಚ್ಚಿಪೊದಾಂ, ಕಿಕ್ 2 ನಲ್ಲಿ ಕಿರಿಕ್ ಕಿಕ್, ಶೇರ್ ಚಿತ್ರದಲ್ಲಿ ನಾಪೇರು ಪಿಂಕಿ, ಲೋಫರ್ ಚಿತ್ರದಲ್ಲಿ ನಾಪೇ ದೋಚೆ ಮುಂತಾದ ವಿಶೇಷ ಹಾಡುಗಳಿಗೆ ಡಾನ್ಸ್ ಮಾಡಿದ್ದಾರೆ.
ನೋರಾ ಭಾರತಕ್ಕೆ ಬಂದಾಗ ತಾವು ಎದುರಿಸಿದ ಕಷ್ಟಗಳ ಕುರಿತು ಮಾತನಾಡಿದ್ದಾರೆ.. "ನಾನು ಭಾರತಕ್ಕೆ ಬಂದಿಳಿದಾಗ, ನನ್ನ ಬಳಿ ಕೇವಲ 5,000 ರೂ. ಇತ್ತು. 3 BHK ನಲ್ಲಿ ನಾನು ಸೇರಿದಂತೆ ಒಂಬತ್ತು ಮನೋರೋಗಿಗಳಿದ್ದೆವು. ಇನ್ನಿಬ್ಬರು ಹುಡುಗಿಯರು ನನ್ನ ಕೋಣೆಯಲ್ಲಿದ್ದರು. ಆ ದಿನಗಳ ಬಗ್ಗೆ ಯೋಚಿಸಿದರೆ ನನಗೆ ಇನ್ನೂ ಭಯವಾಗುತ್ತದೆ ಅಂತ ಹೇಳಿಕೊಂಡಿದ್ದಾರೆ..
ಆ ಸಮಯದಲ್ಲಿ, ನೋರಾ ದಿನಕ್ಕೆ ಒಂದು ಮೊಟ್ಟೆ ಮತ್ತು ಬ್ರೆಡ್ ಅನ್ನು ಮಾತ್ರ ತಿನ್ನುತ್ತಿದ್ದಳಂತೆ. ಹೆಚ್ಚಿನ ಹಣವನ್ನು ಏಜೆಂಟ್‌ಗಳು ತೆಗೆದುಕೊಂಡು ತಮಗೆ ಕಡಿಮೆ ಸಂಭಾವನೆ ಪಾವತಿಸುತ್ತಿದ್ದರು ಅಂತ ನೋರಾ ತಮ್ಮ ನೋವಿನ ದಿನಗಳ ಕುರಿತು ತಿಳಿಸಿದರು.