50ರ ಹರೆಯದಲ್ಲೂ 20 ರಂತೆ ಕಾಣಲು ಟಬು ಟಿಪ್ಸ್‌..! ಫಿಟ್ನೆಸ್‌ ಸಿಕ್ರೇಟ್‌ ಬಿಚ್ಚಿಟ್ಟ ನಟಿ

Actress Tabu diet plan : ಬಾಲಿವುಡ್‌ನಲ್ಲಿ ಸಹಜ ಸೌಂದರ್ಯದಿಂದ ಹೆಸರುವಾಸಿಯಾಗಿರುವ ನಟಿಯರಲ್ಲಿ ಟಬು ಕೂಟ ಒಬ್ಬರು.. ಈ ಸುಂದರಿ ತನ್ನ ಫಿಟ್ ದೇಹ ಮತ್ತು ಹೊಳೆಯುವ ಮುಖಕ್ಕಾಗಿ ಏನು ಮಾಡುತ್ತಾರೆ ಅಂತ ತಿಳಿಯಲು ಅವರ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದರು.. ಸಧ್ಯ ನಟಿ ತಮ್ಮ ಬ್ಯೂಟಿ ಸಿಕ್ರೇಟ್‌ ರಿವೀಲ್‌ ಮಾಡಿದ್ದಾರೆ.. 

1 /9

ಸಿನಿಮಾ ತಾರೆಯರಂತೆ ತಾವೂ ಸಹ ತಮ್ಮ ದೇಹವನ್ನು ಫಿಟ್‌ ಆಗಿ ಇಡಬೇಕು ಎನ್ನುವುದು ಅನೇಕರ ಆಸೆ.. ಸಧ್ಯ ಸೌಂದರ್ಯಕ್ಕೆ ಹೆಸರುವಾಸಿಯಾಗಿರುವ ಟಬು ತಮ್ಮ ಫಿಟ್ ರಹಸ್ಯವನ್ನು ಬಹಿರಂಗ ಪಡಿಸಿದ್ದಾರೆ.  

2 /9

ಟಬು ಅವರು ಬೆಳಿಗ್ಗೆ ಎದ್ದಾಗ ಮೊದಲು ಒಂದು ಗಂಟೆಯ ಕಾಲ ವ್ಯಾಯಾಮ ಮಾಡುತ್ತಾರೆ. ಮುಖ್ಯವಾಗಿ ಕಾರ್ಡಿಯೋ ಮತ್ತು ದೇಹವನ್ನು ಬಲಪಡಿಸುವ ವ್ಯಾಯಾಮಗಳನ್ನು ನಿಯಮಿತವಾಗಿ ಮಾಡುತ್ತಾರೆ.  

3 /9

ರಾತ್ರಿಯ ಲೈಟ್‌ ಆಗಿ ಊಟ ಮಾಡುತ್ತಾರೆ.. ಅಲ್ಲದೆ, ಜೀರ್ಣಿಸಿಕೊಳ್ಳಲು ಸುಲಭವಾಗುವಂತ ಆಹಾರ ಸೇವನೆ ಮಾಡುತ್ತಾರೆ. ರಾತ್ರಿ ಊಟವನ್ನು ಸಂಜೆ 6.30 ಕ್ಕೆ ಮುಗಿಸುತ್ತಾರಂತೆ.   

4 /9

ಆ ನಂತರ ಟಬು ಏನನ್ನೂ ತಿನ್ನುವುದಿಲ್ಲವಂತೆ. ಹಣ್ಣುಗಳನ್ನು ಸಹ ತೆಗೆದುಕೊಳ್ಳುವುದಿಲ್ಲ. ಬಹಳ ಮುಖ್ಯ ವಿಚಾರ ಅಂದ್ರೆ ತಿಂದ ತಕ್ಷಣ ನೀರು ಕುಡಿಯುವುದಿಲ್ಲವಂತೆ.  

5 /9

ನಟಿ ಟಬು ಯಾವಾಗಲೂ ತಾಜಾ ಹಣ್ಣುಗಳು ಮತ್ತು ತರಕಾರಿಗಳನ್ನು ತಿನ್ನಲು ಇಷ್ಟಪಡುತ್ತಾರೆ. ತಮ್ಮ ದೈನಂದಿನ ಆಹಾರದಲ್ಲಿ ತರಕಾರಿಗಳು ಮತ್ತು ಹಣ್ಣುಗಳು ಇರುವಂತೆ ನೋಡಿಕೊಳ್ಳುತ್ತಾರೆ. ಏಕೆಂದರೆ ಇವುಗಳಲ್ಲಿ ಜೀವಸತ್ವಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕ ಗುಣಲಕ್ಷಣಗಳು ಹೆಚ್ಚಾಗಿರುತ್ತವೆ..   

6 /9

ಟಬು ಪಿಲೇಟ್ಸ್ ಮತ್ತು ಯೋಗಾಸನ ಮಾಡುವುದನ್ನು ಎಂದಿಗೂ ಬಿಡುವುದಿಲ್ಲ. ಆಗಾಗ ನಟಿ ಯೋಗಾಸನ ಮಾಡುತ್ತಿರುವ ಫೋಟೋಗಳನ್ನು ತಮ್ಮ Instagram ಖಾತೆಯಲ್ಲಿ ಪೋಸ್ಟ್‌ ಮಾಡುತ್ತಿರುತ್ತಾರೆ. ತಮ್ಮ ಯೋಗಾಭ್ಯಾಸಗಳ ಕುರಿತು ಅಭಿಮಾನಿಗಳಿಗೆ ತಿಳಿಸಿಕೊಡುತ್ತಿರುತ್ತಾರೆ.   

7 /9

ಈಜು, ಟ್ರೆಕ್ಕಿಂಗ್ ಮತ್ತು ಸೈಕ್ಲಿಂಗ್‌ನಂತಹ ಮನರಂಜನಾ ಚಟುವಟಿಕೆಗಳಲ್ಲಿ ಟಬು ಹೆಚ್ಚು ಭಾಗವಹಿಸುತ್ತಾರೆ. ಇಂತಹ ವ್ಯಾಯಾಮಗಳು ಮನಸ್ಸನ್ನು ಕೂಲ್‌ ಆಗಿ ಇಡುತ್ತವೆ ಮತ್ತು ಹೆಚ್ಚುವರಿ ದೇಹದ ತೂಕವನ್ನು ಹೊರಹಾಕಲು ಸಹಾಯ ಮಾಡುತ್ತವೆ ಎನ್ನುವುದು ನಟಿ ಉದ್ದೇಶ..  

8 /9

ಟಬು ಅವರ ಫಿಟ್ನೆಸ್ ಬಗ್ಗೆ ಎಲ್ಲಾ ಮಾಹಿತಿಯನ್ನು ಅವರ ಅಧಿಕೃತ Instagram ಪುಟ ನಿಂದ ತೆಗೆದುಕೊಳ್ಳಲಾಗಿದೆ. ಬಾಲಿವುಡ್‌ನ ಇತರ ನಟಿಯರಂತೆ, ಟಬು ತನ್ನ ವ್ಯಾಯಾಮದ ದಿನಚರಿ ಮತ್ತು ಆಹಾರಕ್ರಮವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಾರೆ.. ಹೆಚ್ಚಿನ ಮಾಹಿತಿಗಾಗಿ ಅವರ ಇನ್‌ಸ್ಟಾಗ್ರಾಮ್‌ ಪುಟಕ್ಕೆ ಭೇಟಿ ನೀಡಿ ತಿಳಿದುಕೊಳ್ಳಬಹುದು..   

9 /9

ಸೂಚನೆ: ಪ್ರತಿಯೊಬ್ಬರ ಆಹಾರದ ಅಗತ್ಯತೆಗಳು ಮತ್ತು ಆಹಾರ ಪದ್ದತಿ ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ. ನಿಮ್ಮ ಜೀವನಶೈಲಿ ಅಥವಾ ಆಹಾರಕ್ರಮದಲ್ಲಿ ಯಾವುದೇ ಬದಲಾವಣೆಗಳನ್ನು ಮಾಡುವ ಮೊದಲು ನಿಮ್ಮ ವೈದ್ಯರನ್ನು ಅಥವಾ ಪೌಷ್ಟಿಕತಜ್ಞರನ್ನು ಸಂಪರ್ಕಿಸಿ.