ರೋಹಿತ್‌, ಕೊಹ್ಲಿ ಜೊತೆ ಡೇಟಿಂಗ್‌.! ಡಿವೋರ್ಸ್‌ ನಂತರ ಸನ್ಯಾಸತ್ವ ಸ್ವೀಕರಿಸಿದ ʼವಿಶ್ವದ ಸೆಕ್ಸಿಯೆಸ್ಟ್ ಮಹಿಳೆʼ..

Bollywood actress life : ಈ ವಿದೇಶಿ ಮಾಡೆಲ್‌ ಒಂದು ಕಾಲದಲ್ಲಿ ಭಾರತೀಯ ಸಿನಿರಸಿಕ ಹಾಟ್‌ ಫೆವರಿಟ್‌ ಆಗಿದ್ದಳು.. ಮಾಡೆಲಿಂಗ್‌ ಕ್ಷೇತ್ರದಲ್ಲಿ ಯಶಸ್ಸು ಕಂಡು ನಂತರ ಬಣ್ಣದ ಲೋಕಕ್ಕೆ ಕಾಲಿಟ್ಟ ನಟಿಗೆ ಆ ದಿನಗಳಲ್ಲಿ ಭಾರೀ ಡಿಮ್ಯಾಂಡ್‌... ಅಲ್ಲದೆ, ಈ ಸುಂದರಿ ಕ್ರಿಕೆಟ್‌ ದಿಗ್ಗಜರ ಜೊತೆ ಡೇಟಿಂಗ್‌ ಕೂಡ ಮಾಡುತ್ತಿದ್ದಳು.. ಯಾರು ಆ ಚೆಲುವೆ..? ಬನ್ನಿ ನೋಡೋಣ..

1 /9

ಅನೇಕರು ಚಿತ್ರೋದ್ಯಮವನ್ನು ಪ್ರವೇಶಿಸಲು ಮಾಡೆಲಿಂಗ್ ಕ್ಷೇತ್ರವನ್ನು ಆಯ್ಕೆಯಾಗಿ ಆರಿಸಿಕೊಳ್ಳುತ್ತಾರೆ. ಈ ಕ್ಷೇತ್ರದಲ್ಲಿ ಯಶಸ್ಸು ಕಂಡರೆ ಆ್ಯಡ್ ಫಿಲಂ, ನಂತರ ಸಿನಿಮಾ ಅವಕಾಶಗಳು ಬರುತ್ತವೆ ಎಂಬ ನಂಬಿಕೆ ಇದೆ. ಕೆಲವು ವಿದೇಶಿ ಮಾಡೆಲ್‌ಗಳು ತಮ್ಮ ಕ್ಷೇತ್ರದಲ್ಲಿ ಯಶಸ್ವಿಯಾಗಿ ಚಲನಚಿತ್ರಗಳನ್ನು ಪ್ರವೇಶಿಸಿದ್ದಾರೆ.

2 /9

2000 ರ ದಶಕದ ಆರಂಭದಲ್ಲಿ ಯುರೋಪಿಯನ್ ಮಾಡೆಲ್‌ಗಳು ಮತ್ತು ನೃತ್ಯಗಾರರು ಭಾರತಕ್ಕೆ ಬಂದರು. ಕೆಲ ಸಿನಿಮಾಗಳಲ್ಲಿ ಪೋಷಕ ಪಾತ್ರಗಳು ಮತ್ತು ಐಟಂ ಸಾಂಗ್‌ಗಳಲ್ಲಿ ಕಾಣಿಸಿಕೊಂಡು ಜನಪ್ರಿಯರಾದರು. ಯಾನಾ ಗುಪ್ತಾರಿಂದ ಹಿಡಿದು ನೆಗರ್ ಖಾನ್ ವರೆಗೆ ಹೀಗೆ ಹಲವರು ಬಾಲಿವುಡ್ ಪ್ರವೇಶಿಸಿದ್ದಾರೆ.

3 /9

ಮೊದಲು ಬಿಗ್ ಬಾಸ್ ಶೋ ಸ್ಪರ್ಧಿಯಾಗಿ ಗುರುತಿಸಿಕೊಂಡ ಈ ಚೆಲುವೆ ಇಬ್ಬರು ಸ್ಟಾರ್ ಕ್ರಿಕೆಟಿಗರೊಂದಿಗೆ ಡೇಟಿಂಗ್ ನಡೆಸಿದ್ದರು. ಆ ಸಮಯದಲ್ಲಿ ವಿಶ್ವದ ಅತ್ಯಂತ ಸೆಕ್ಸಿಯೆಸ್ಟ್ ಮಹಿಳೆ ಎಂದು ಜನಪ್ರಿಯರಾದರು. ಆದರೆ ಅನಿರೀಕ್ಷಿತ ನಿರ್ಧಾರ ತೆಗೆದುಕೊಂಡು ಸನ್ಯಾಸಿನಿಯಾದಳು. ಆಕೆ ಬೇರಾರೂ ಅಲ್ಲ, ಸೋಫಿಯಾ ಹಯಾತ್.    

4 /9

ಸೋಫಿಯಾ ಹಯಾತ್ ಬ್ರಿಟನ್‌ನ ಸಾಂಪ್ರದಾಯಿಕ ಮುಸ್ಲಿಂ ಕುಟುಂಬದಲ್ಲಿ ಹುಟ್ಟಿ ಬೆಳೆದರು. ಆಕೆಯ ಕುಟುಂಬದ ಮೂಲಗಳು ಭಾರತ ಮತ್ತು ಪಾಕಿಸ್ತಾನದಲ್ಲಿವೆ. ಮಾಡೆಲಿಂಗ್‌ನಲ್ಲಿ ಯಶಸ್ಸನ್ನು ಸಾಧಿಸಿದ ನಂತರ ಚಲನಚಿತ್ರಗಳಲ್ಲಿ ಆಸಕ್ತಿ ಹೊಂದಿದ್ದ ಹಯಾತ್‌, ಭಾರತಕ್ಕೆ ಬಂದು ಸಿನಿ ಉದ್ಯಮದಲ್ಲಿ ನೆಲೆಸಲು ನಿರ್ಧರಿಸಿದರು.

5 /9

ಅದೇ ರೀತಿ 2008 ರಲ್ಲಿ ಕ್ಯಾಶ್ ಅಂಡ್ ಕರಿ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಅದರ ನಂತರ ಅವರು ಸಿಕ್ಸ್ ಎಕ್ಸ್ ಮತ್ತು ಅಕ್ಸರ್ 2 ಚಿತ್ರಗಳಲ್ಲಿ ಕಾಣಿಸಿಕೊಂಡರು. 2013 ರಲ್ಲಿ, ಅವರು FHM ಪ್ರಪಂಚದ ಅತ್ಯಂತ ಸೆಕ್ಸಿಯೆಸ್ಟ್ ಮಹಿಳೆಯರ ಪಟ್ಟಿಯಲ್ಲಿ ಕಾಣಿಸಿಕೊಂಡರು.

6 /9

ಈ ಪಟ್ಟಿಯಲ್ಲಿರುವ ಏಕೈಕ ಭಾರತೀಯ ಎಂದು ಗುರುತಿಸಲಾಗಿದೆ. ಸೋಫಿಯಾ ಬ್ರಿಟನ್ ಮತ್ತು ಭಾರತದಲ್ಲಿ ಅನೇಕ ಟಿವಿ ಶೋಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅದರಲ್ಲೂ ಬಿಗ್ ಬಾಸ್ (2013) ಏಳನೇ ಸೀಸನ್ ನಲ್ಲಿ ಭಾಗವಹಿಸಿ ಉತ್ತಮ ಮನ್ನಣೆ ಗಳಿಸಿದ್ದರು.

7 /9

ಸೋಫಿಯಾ ಬಿಗ್‌ಬಾಸ್‌ ಮನೆಯಲ್ಲಿದ್ದಾಗ ಕೆಲ ವದಂತಿಗಳು ಹಬ್ಬಿದ್ದವು. ಈಕೆ ಭಾರತೀಯ ಕ್ರಿಕೆಟಿಗ ರೋಹಿತ್ ಶರ್ಮಾ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂದು ವದಂತಿಗಳಿವೆ. ಅಲ್ಲದೆ, ವಿರಾಟ್ ಕೂಡ ಕೊಹ್ಲಿ ಈಕೆಯ ಸಂಪರ್ಕದಲ್ಲಿದ್ದರು ಎಂಬ ಸುದ್ದಿಗಳೂ ಹೊರ ಬಿದ್ದಿದ್ದವು.. ಆದ್ರೆ ಈ ಕುರಿತು ಅಧಿಕೃತ ಮಾಹಿತಿ ಇಲ್ಲ..

8 /9

2016 ರಲ್ಲಿ ಬಿಗ್ ಬಾಸ್ ಮುಗಿದ ಮೂರು ವರ್ಷಗಳ ನಂತರ ಸೋಫಿಯಾ ಹಯಾತ್ ಸನ್ಯಾಸತ್ವ ಸ್ವೀಕರಿಸಿದರು. ಸೋಫಿಯಾ ಸಂಪೂರ್ಣವಾಗಿ ಗ್ಲಾಮರ್ ಪ್ರಪಂಚವನ್ನು ತೊರೆಯಲು ನಿರ್ಧರಿಸಿದರು. ಸನ್ಯಾಸತ್ವ ಸ್ವೀಕರಿಸುವ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದರು.

9 /9

ರೊಮೇನಿಯನ್ ಉದ್ಯಮಿಯನ್ನು ವಿವಾಹವಾಗಿದ್ದ ಸೋಫಿಯಾ, ಒಂದು ವರ್ಷಕ್ಕಿಂತ ಹೆಚ್ಚು ಕಾಲ ಕೂಡಿ ಬಾಳಲಿಲ್ಲ. ಸದ್ಯ ಸೋಫಿಯಾ ಫಿಟ್ನೆಸ್ ಮಾಡೆಲ್ ಆಗಿ ಮುಂದುವರಿದಿದ್ದಾರೆ. ಈಗಲೂ ಸಾಮಾಜಿಕ ಜಾಲತಾಣದಲ್ಲಿ ತುಂಬಾ ಸಕ್ರಿಯವಾಗಿದ್ದಾಳೆ.