Attractive Boy: ಹುಡುಗಿಯರನ್ನು ಬಹಳ ಬೇಗ ಆಕರ್ಷಿಸುತ್ತಾರೆ ಈ 5 ರಾಶಿಯ ಜನ

                                

  • Dec 06, 2021, 11:31 AM IST

Attractive Boy: ಕೆಲವರನ್ನು ನೋಡಿದೊಡನೆ ಏನೋ ಒಂದು ರೀತಿಯ ಆಕರ್ಷಣೆ ಎಂದೆನಿಸುತ್ತದೆ. ಕೆಲವರು ಏನೂ ಮಾಡದಿದ್ದರೂ ಸಹ ಜನರು ಅವರತ್ತ ಆಕರ್ಷಿತರಾಗುತ್ತಾರೆ. ಹುಡುಗರು ಮತ್ತು ಹುಡುಗಿಯರು ಅಥವಾ ಪುರುಷರು ಮತ್ತು ಮಹಿಳೆಯರು, ವಿರುದ್ಧ ಲಿಂಗದ ಜನರು ತಮ್ಮ ಕಡೆಗೆ ಆಕರ್ಷಿತರಾಗಬೇಕು ಎಂಬ ಬಯಕೆ ಅವರ ಮನಸ್ಸಿನಲ್ಲಿ ಇರುವುದು ಸಹಜ. ಜ್ಯೋತಿಷ್ಯದ ಪ್ರಕಾರ, ಕೆಲವು ರಾಶಿಚಕ್ರ ಚಿಹ್ನೆಗಳ ಹುಡುಗರು ಮತ್ತು ಪುರುಷರು ಈ ವಿಷಯದಲ್ಲಿ ನಿಜವಾಗಿಯೂ ಅದೃಷ್ಟವಂತರು. ಕೆಲವು ರಾಶಿಯ ಹುಡುಗರು ಹುಡುಗಿಯರನ್ನು ತಮ್ಮ ಕಡೆಗೆ ಬಹಳ ಬೇಗ ಆಕರ್ಷಿಸುತ್ತಾರೆ. ಆ ರಾಶಿಗಳು ಯಾವುವು ಎಂದು ತಿಳಿಯೋಣ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

1 /5

ಮೇಷ ರಾಶಿ: ಮೇಷ ರಾಶಿಯ ಪುರುಷರು ಫ್ಲರ್ಟಿಂಗ್‌ನಲ್ಲಿ ಉತ್ತಮರು. ಹುಡುಗಿಯರು ತಮ್ಮ ಕಡೆಗೆ ಆಕರ್ಷಿತರಾಗದೆ ಬದುಕಲು ಸಾಧ್ಯವಾಗದಂತಹ ವಿಧಾನಗಳನ್ನು ಅವರು ಪ್ರಯತ್ನಿಸುತ್ತಾರೆ. ಇವರು ತಮ್ಮ ಜೀವನ ಸಂಗಾತಿಯನ್ನು ಆಯ್ಕೆಮಾಡುವಲ್ಲಿ ಸಾಕಷ್ಟು ಸಮಯವನ್ನು ಕಳೆಯುತ್ತಾರೆ. ಅಲ್ಲದೆ, ಕೆಲವೊಮ್ಮೆ ತಮ್ಮ ಸಂಗಾತಿಯ ಬಗ್ಗೆ ಅವರ ಆಯ್ಕೆಯ ನಿರ್ಧಾರವು ಆಘಾತಕಾರಿಯಾಗಿರುತ್ತದೆ.

2 /5

ಮಿಥುನ ರಾಶಿ: ಮಿಥುನ ರಾಶಿಯ ಜನರು ಹುಡುಗಿಯರ ವಿಷಯದಲ್ಲಿ ತುಂಬಾ ಅದೃಷ್ಟವಂತರು. ಯಾವುದೇ ಹುಡುಗಿಯ ಗಮನವನ್ನು ಸೆಳೆಯುವುದು ಇವರಿಗೆ ಚಿಟಿಕೆ ಹೊಡೆದಷ್ಟೇ ಸುಲಭ.  ಹುಡುಗಿಯರು ಅವರತ್ತ ತುಂಬಾ ಬೇಗ ಆಕರ್ಷಿತರಾಗುತ್ತಾರೆ ಎಂದೂ ಹೇಳಬಹುದು. ಈ ರಾಶಿಚಕ್ರದ ಜನರು ಹರ್ಷಚಿತ್ತದಿಂದ ಮತ್ತು ತುಂಬಾ ಮೃದು ಸ್ವಭಾವದವರು. ಇವರ ಕೂಲ್ ಸ್ವಭಾವವು ಹುಡುಗಿಯರನ್ನು ಇವರ ಸ್ನೇಹಿತರಾಗುವಂತೆ ಪ್ರೇರೇಪಿಸುತ್ತದೆ. ಇದಲ್ಲದೆ, ಅವರು ಹುಡುಗಿಯರ ಭಾವನೆಗಳನ್ನು ಅರ್ಥಮಾಡಿಕೊಳ್ಳುವ ಅದ್ಭುತ ಗುಣವನ್ನು ಹೊಂದಿದ್ದಾರೆ, ಇದರಿಂದಾಗಿ ಅವರು ಯಾವಾಗಲೂ ತಮ್ಮ ಸುತ್ತಲಿನ ಮಹಿಳೆಯರ ನೆಚ್ಚಿನವರಾಗಿ ಉಳಿಯುತ್ತಾರೆ.

3 /5

ಸಿಂಹ ರಾಶಿ: ಸಿಂಹ ರಾಶಿಯ ಹುಡುಗರು ಬಲವಾದ ವ್ಯಕ್ತಿತ್ವ ಉಳ್ಳವರಾಗಿರುತ್ತಾರೆ. ಇವರ ವ್ಯಕ್ತಿತ್ವಕ್ಕೆ ಯಾವುದೇ ಹುಡುಗಿಯರಾದರೂ ಬಹಳ ಬೇಗ ಮನಸೋಲುತ್ತಾರೆ. ಇದಲ್ಲದೆ, ಅವರು ತುಂಬಾ ಸೂಕ್ಷ್ಮವಾಗಿರುತ್ತಾರೆ. ಅವರ ಈ ಗುಣವು ಮಹಿಳೆಯರು ತಮ್ಮ ಹೃದಯವನ್ನು ಕಳೆದುಕೊಳ್ಳುವಂತೆ ಒತ್ತಾಯಿಸುತ್ತದೆ.  ಇದನ್ನೂ ಓದಿ- Birth Astrology: ಕೆಲಸದಲ್ಲಿ ಸೋಮಾರಿ, ಪ್ರೀತಿಯ ಜೀವನದಲ್ಲಿ ಆಕ್ಟಿವ್ ಆಗಿರ್ತಾರೆ ಈ ತಿಂಗಳಲ್ಲಿ ಜನಿಸಿದ ಜನ

4 /5

ತುಲಾ ರಾಶಿ: ತುಲಾ ರಾಶಿಯ ಜನರು ಸ್ವಭಾವತಃ ತುಂಬಾ ಸಮತೋಲಿತರಾಗಿರುತ್ತಾರೆ ಆದರೆ ಅವರು ವಿಚಿತ್ರವಾದ ಮೋಡಿ ಹೊಂದಿರುತ್ತಾರೆ ಮತ್ತು ಹುಡುಗಿಯರು ಅವರ ಕಡೆಗೆ ಸುಲಭವಾಗಿ ಆಕರ್ಷಿತರಾಗುತ್ತಾರೆ. ಈ ರಾಶಿಯ ಹುಡುಗರ ಪ್ರೀತಿಸುವ ಮತ್ತು ಕಾಳಜಿವಹಿಸುವ ಭಾವನೆಯು ಹೆಚ್ಚು ಆಕರ್ಷಕವಾಗಿರುತ್ತದೆ. ಇದರೊಂದಿಗೆ ಅವರ ಕೆಲಸದ ಶೈಲಿಯೂ ಹುಡುಗಿಯರಿಗೆ ತುಂಬಾ ಇಷ್ಟವಾಗುತ್ತದೆ.

5 /5

ಮಕರ ರಾಶಿ: ಮಕರ ರಾಶಿಯವರು ಮಾತನಾಡುವ ಶೈಲಿಯೇ ವಿಭಿನ್ನ ಮತ್ತು ವಿಶೇಷ. ಇವರ ಈ ಗುಣಕ್ಕೆ ಹುಡುಗಿಯರು ಹುಡುಗಿಯರು ಹೆಚ್ಚು ಸೋಲುತ್ತಾರೆ. ಇದಲ್ಲದೇ ಈ ರಾಶಿಯ ಹುಡುಗರು ಕ್ರಿಯಾಶೀಲರು ಮತ್ತು ಚುರುಕಾಗಿರುವುದರಿಂದ ಹುಡುಗಿಯರೇ ಇವರೊಂದಿಗೆ ಸ್ನೇಹ ಬೆಳೆಸಲು ಮುಂದಾಗುತ್ತಾರೆ. ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಊಹೆಗಳು ಮತ್ತು ಸಾಮಾನ್ಯ  ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.