Jupiter Transit 2022: ಕೇವಲ ಎರಡೇ ದಿನಗಳು ಬಾಕಿ, ಈ 5 ರಾಶಿಗಳ ಜನರಿಗೆ ಒಳ್ಳೆಯ ಕಾಲ ಕೂಡಿಬರಲಿದೆ

Guru Gochar 2022 - ಜ್ಯೋತಿಷ್ಯ ಶಾಸ್ತ್ರದಲ್ಲಿ (Astrology) ಶುಭ ಗ್ರಹವೆಂದು ಪರಿಗಣಿಸಲಾಗುವ ದೇವಗುರು ಬೃಹಸ್ಪತಿ (Bruhaspati Rashi Parivartan 2022) ಅಸ್ತವಾಗಿದೆ. ಸಾಮಾನ್ಯವಾಗಿ ಗ್ರಹಗಳು ಅಸ್ತಮಿಸುವುದು (Guru Asta) ಅಶುಭವೆಂದು ಪರಿಗಣಿಸಲಾಗುತ್ತದೆ. 

ನವದೆಹಲಿ: Guru Gochar 2022 - ಜ್ಯೋತಿಷ್ಯ ಶಾಸ್ತ್ರದಲ್ಲಿ (Astrology) ಶುಭ ಗ್ರಹವೆಂದು ಪರಿಗಣಿಸಲಾಗುವ ದೇವಗುರು ಬೃಹಸ್ಪತಿ (Bruhaspati Rashi Parivartan 2022) ಅಸ್ತವಾಗಿದೆ. ಸಾಮಾನ್ಯವಾಗಿ ಗ್ರಹಗಳು ಅಸ್ತಮಿಸುವುದು (Guru Asta) ಅಶುಭವೆಂದು ಪರಿಗಣಿಸಲಾಗುತ್ತದೆ. ಗುರುವಿನ ಅಸ್ತ ವೈವಾಹಿಕ ಜೀವನ ಮತ್ತು ವಿವಾಹ ವಿಧಿಗಳಂತಹ ಶುಭ ಕಾರ್ಯಗಳಿಗೆ ಉತ್ತಮವೆಂದು ಪರಿಗಣಿಸಲಾಗುವುದಿಲ್ಲ. 24 ಫೆಬ್ರವರಿ 2022 ರಿಂದ ಅಸ್ತನಾಗಿರುವ ಗುರು, ಇದೀಗ 26 ಮಾರ್ಚ್ 2022 ರಿಂದ ಕುಂಭ ರಾಶಿಯಲ್ಲಿ (Guru Rashi Parivartan 2022) ಉದಯಿಸಲಿದ್ದಾನೆ (Guru Uday). ಈ ಗುರುವಿನ ಉದಯ ತಕ್ಷಣದಲ್ಲಿಯೇ 5 ರಾಶಿಗಳ ಜನರಿಗೆ ಅದೃಷ್ಟ ತರಲಿದೆ. ಅಂದರೆ ಈ ರಾಶಿಗಳ ಜನರಿಗೆ ಅದೃಷ್ಟದ ಬಾಗಿಲುಗಳು ತೆರೆದುಕೊಳ್ಳಲಿದ್ದು, ಜೀವನದಲ್ಲಿ ಲಾಭಗಳು ಕಂಡುಬರಲಿವೆ. ಹಾಗಾದರೆ ಬನ್ನಿ, ಆ ಐದು ರಾಶಿಗಳು ಯಾವುವು ಎಂಬುದನ್ನೊಮ್ಮೆ ತಿಳಿದುಕೊಳ್ಳೋಣ, 

 

ಇದನ್ನೂ ಓದಿ-ಸೌತೆಕಾಯಿ ಸಲಾಡ್ ಜೊತೆ ಈ ವಸ್ತುವನ್ನು ಎಂದಿಗೂ ಸೇರಿಸಬೇಡಿ, ಉದರ ಸಮಸ್ಯೆಗೆ ಕಾರಣವಾಗಬಹುದು

 

(Disclaimer: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)
 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

1. ಮೇಷ ರಾಶಿ - ಮೇಷ ರಾಶಿಯ ಜಾತಕದವರಿಗೆ ಗುರುವಿನ ಉದಯ ಕಾನ್ಫಿಡೆನ್ಸ್ ಹೆಚ್ಚಿಸಲಿದೆ. ವೃತ್ತಿಯಲ್ಲಿ ಲಾಭ ಉಂಟಾಗಲಿದೆ. ಆದಾಯ ಹೆಚ್ಚಾಗಲಿದೆ. ವ್ಯಾಪಾರದಲ್ಲಿ ಪ್ರಗತಿ ಮತ್ತು ಲಾಭ ಎರಡೂ ಇರಲಿದೆ.  

2 /5

2. ವೃಷಭ ರಾಶಿ - ಗುರುವಿನ ಈ ಉಗಮ ವೃಷಭ ರಾಶಿಯ ಜಾತಕ ಇರುವವರಿಗೆ ಸಾಕಷ್ಟು ಅಭಿವೃದ್ಧಿ ತರಲಿದೆ. ಆಕಸ್ಮಿಕ ಧನಲಾಭ ಗೋಚರಿಸುತ್ತಿದೆ. ಹೊಸ ನೌಕರಿಯ ಅವಕಾಶ ಸಿಗಲಿದೆ. ಹೊಸ ಕೆಲಸದ ಆರಂಭವಾಗಲಿದೆ.   

3 /5

3. ಸಿಂಹ ರಾಶಿ -  ಸಿಂಹ ರಾಶಿಯವರಿಗೆ ಗುರುವಿನ ಉದಯವು ವೃತ್ತಿಯಲ್ಲಿ ಪ್ರಗತಿಯನ್ನು ತರಲಿದೆ. ಉದ್ಯೋಗದಲ್ಲಿರುವವರಿಗೆ ಬಡ್ತಿ-ಇನ್ಕ್ರಿಮೆಂಟ್ ಸಿಗುವ ಸಾಧ್ಯತೆ ಇದೆ. ವ್ಯಾಪಾರಿಗಳು ದೊಡ್ಡ ಆರ್ಡರ್ ಅಥವಾ ಲಾಭವನ್ನು ಪಡೆಯಬಹುದು. ಕೆಲಸದಲ್ಲಿ ಯಶಸ್ಸು ಸಿಗಲಿದೆ.  

4 /5

4. ತುಲಾ ರಾಶಿ - ತುಲಾ ರಾಶಿಯವರಿಗೆ ಮಾರ್ಚ್ 26 ರಿಂದ ಲಾಭದಾಯಕ ಸಮಯ ಆರಂಭವಾಗಲಿದೆ.ಈ ಜಾತಕದವರು ಎಲ್ಲಾ ಕೆಲಸಗಳಲ್ಲಿ ಯಶಸ್ಸನ್ನು ಪಡೆಯಲಿದ್ದಾರೆ. ಉದ್ಯೋಗ-ವ್ಯವಹಾರದಲ್ಲಿ ಯಶಸ್ಸು ಪ್ರಾಪ್ತಿಯಾಗಲಿದ್ದು, ಘನತೆ ಗೌರವ ಪ್ರಾಪ್ತಿಯಾಗಲಿದೆ. ಆದಾಯ ಹೆಚ್ಚಾಗಲಿದೆ ಮತ್ತು ಆರ್ಥಿಕ ಪರಿಸ್ಥಿತಿ ಸುಧಾರಣೆಯಾಗಲಿದೆ.  

5 /5

5. ಮಕರ ರಾಶಿ - ಮಕರ ರಾಶಿಯವರಿಗೆ ಗುರುಗ್ರಹದ ಉದಯ ಸಂಪತ್ತನ್ನು ತರಲಿದೆ. ಹಣಕಾಸಿನ ಸ್ಥಿತಿ ಉತ್ತಮವಾಗಿರಲಿದೆ. ವಿವಿಧೆಡೆಯಿಂದ ಹಣ ಹರಿದುಬರಲಿದೆ.  ನಿಮ್ಮ ಆರ್ಥಿಕ ಸಮಸ್ಯೆಗಳು ದೂರಾಗಲಿವೆ ಮತ್ತು ಕುಟುಂಬದಲ್ಲಿ ಸಂತೋಷ ನೆಲೆಸಲಿದೆ.