ಬಿಎಸ್ಎನ್ಎಲ್ ತನ್ನ ಒಟಿಟಿ ಪ್ಲಾಟ್‌ಫಾರ್ಮ್‌ಗಾಗಿ ಉತ್ತಮ ಯೋಜನೆಯನ್ನು ತಂದಿದೆ. ಕಂಪನಿಯು ಕೇವಲ 129 ರೂಗಳಿಗೆ ಮೂರು ತಿಂಗಳ ಕಾಲ ಒಟಿಟಿ ಸೇವೆಯನ್ನು ನೀಡುತ್ತಿದೆ.
ನವದೆಹಲಿ : ಸರ್ಕಾರಿ ಟೆಲಿಕಾಂ ಕಂಪನಿ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ಈಗ ತನ್ನ ಗ್ರಾಹಕರಿಗೆ ಮತ್ತೊಂದು ಆಕರ್ಷಕ ಯೋಜನೆಯನ್ನು ತಂದಿದೆ. ಕಂಪನಿಯು ಒಟಿಟಿ ಯೋಜನೆಯನ್ನು ಅತ್ಯಂತ ಕಡಿಮೆ ಬೆಲೆಗೆ ನೀಡುತ್ತಿದೆ. ಸಾಮಾನ್ಯವಾಗಿ ಒಟಿಟಿ (OTT) ಯೋಜನೆಗಾಗಿ ಗ್ರಾಹಕರು 1000 ರೂಪಾಯಿಗಳಿಗಿಂತ ಹೆಚ್ಚು ಹಣವನ್ನು ಖರ್ಚು ಮಾಡಬೇಕಾಗುತ್ತದೆ. ಆದರೆ ಬಿಎಸ್ಎನ್ಎಲ್ ಕಡಿಮೆ ಬೆಲೆಯಲ್ಲಿ ಈ ಸೌಲಭ್ಯವನ್ನು ನೀಡುತ್ತಿ ದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ಸರ್ಕಾರಿ ಟೆಲಿಕಾಂ ಕಂಪನಿಯು ಇಂಟರ್ನೆಟ್ ಬಳಕೆದಾರರಿಗಾಗಿ ಒಟಿಟಿ ಅಡಿಯಲ್ಲಿ ಉತ್ತಮ ಯೋಜನೆಯನ್ನು ತಂದಿದೆ. ಕಂಪನಿಯು YUPPTV ಅಡಿಯಲ್ಲಿ ಈ ಕೊಡುಗೆಗಳನ್ನು ನೀಡುತ್ತಿದೆ. ಇದು ಮನರಂಜನೆಯ ದೃಷ್ಟಿಯಿಂದ ಭಾರೀ ಅಗ್ಗದ ದರದಲ್ಲಿ ಸಿಗುತ್ತಿದೆ.
ಬಿಎಸ್ಎನ್ಎಲ್ ತನ್ನ ಒಟಿಟಿ ಪ್ಲಾಟ್‌ಫಾರ್ಮ್‌ಗಾಗಿ ಉತ್ತಮ ಯೋಜನೆಯನ್ನು ತಂದಿದೆ. ಕಂಪನಿಯು ಕೇವಲ 129 ರೂಗಳಿಗೆ ಮೂರು ತಿಂಗಳ ಕಾಲ ಒಟಿಟಿ ಸೇವೆಯನ್ನು ನೀಡುತ್ತಿದೆ.
ಕಂಪನಿಯ ಅಧಿಕೃತ ವೆಬ್‌ಸೈಟ್, ಪ್ರಕಾರ BSNL OTT ಪ್ಲಾಟ್ ಫಾರ್ಮ್ನಲ್ಲಿ ZEE5 Premium, SonyLIV, Voot Selectನ ಪ್ಯಾಕ್ ಸಿಗಲಿದೆ. ಈ ಪ್ಯಾಕ್‌ಗಳನ್ನು ಪ್ರತ್ಯೇಕವಾಗಿ ಖರೀದಿಸುವುದಾದ್ರೆ ಭಾರೀ ಬೆಲೆ ಪಾವತಿಸಬೇಕಾಗುತ್ತದೆ.
ಮಾಹಿತಿಯ ಪ್ರಕಾರ, ಈ ಪ್ಯಾಕ್‌ನಲ್ಲಿ ಗ್ರಾಹಕರು 300 ಕ್ಕೂ ಹೆಚ್ಚು ಲೈವ್ ಟಿವಿ ಚಾನೆಲ್‌ಗಳನ್ನು ಪಡೆಯ ಬಹುದು. ಕೇವಲ 129 ರೂಗಳ ಪ್ಯಾಕ್‌ನಲ್ಲಿ, 8000 ಕ್ಕೂ ಹೆಚ್ಚು ಚಲನಚಿತ್ರಗಳು ಮತ್ತು 500 ಕ್ಕೂ ಹೆಚ್ಚು ಟಿವಿ ಶೋಗಳನ್ನು ಆನಂದಿಸಬಹುದು.
YUPPTV ಆ್ಯಪ್ ಅಡಿಯಲ್ಲಿ ಗ್ರಾಹಕರಿಗೆ ಈ ಕೊಡುಗೆಗಳನ್ನು ನೀಡಲಾಗುತ್ತಿದೆ ಎಂದು ಬಿಎಸ್ಎನ್ಎಲ್ ಹೇಳಿದೆ. YUPPTV ಅಪ್ಲಿಕೇಶನ್ ವಿಶ್ವದ ಅತಿದೊಡ್ಡ ಇಂಟರ್ನೆಟ್ ಟಿವಿಯಾಗಿದೆ.