Chanakya Niti: ಈ ಸ್ಥಳಗಳಲ್ಲಿ ಹಣ ಖರ್ಚು ಮಾಡಲು ಹಿಂಜರಿಯಬೇಡಿ, ಘನತೆ-ಗೌರವದ ಜೊತೆಗೆ ಧನ ಕೂಡ ಹೆಚ್ಚಾಗುತ್ತದೆ

Chanakya Niti for Money In Kannada: ಹಣ ಗಳಿಕೆಯ ಜೊತೆಗೆ ಹಣ ಹೇಗೆ ವೆಚ್ಚ ಮಾಡಬೇಕು ಎಂಬುದರ ಕುರಿತು ಕೂಡ ಚಾಣಕ್ಯ ನೀತಿಯಲ್ಲಿ ಮಾರ್ಗದರ್ಶನಗಳನ್ನು ನೀಡಲಾಗಿದೆ. ಆಚಾರ್ಯ ಚಾಣಕ್ಯರ ಪ್ರಕಾರ, ಕೆಲ ಸ್ಥಳಗಳಲ್ಲಿ ಹಣ ವೆಚ್ಚ ಮಾಡುವಲ್ಲಿ ಹಿಂಜರಿಯಬಾರದು  ಎನ್ನಲಾಗಿದೆ. 

Chanakya Niti for Money In Kannada: ಹಣ ಗಳಿಕೆಯ ಜೊತೆಗೆ ಹಣ ಹೇಗೆ ವೆಚ್ಚ ಮಾಡಬೇಕು ಎಂಬುದರ ಕುರಿತು ಕೂಡ ಚಾಣಕ್ಯ ನೀತಿಯಲ್ಲಿ ಮಾರ್ಗದರ್ಶನಗಳನ್ನು ನೀಡಲಾಗಿದೆ. ಆಚಾರ್ಯ ಚಾಣಕ್ಯರ ಪ್ರಕಾರ, ಕೆಲ ಸ್ಥಳಗಳಲ್ಲಿ ಹಣ ವೆಚ್ಚ ಮಾಡುವಲ್ಲಿ ಹಿಂಜರಿಯಬಾರದು  ಎನ್ನಲಾಗಿದೆ. ಆ ಸ್ಥಳಗಳಲ್ಲಿ ಹಣ ವೆಚ್ಚ ಮಾಡುವುದರಿಂದ ಘನತೆ-ಗೌರವ ಹೆಚ್ಚಾಗುತ್ತದೆ ಮತ್ತು ದೇವ-ದೇವತೆಗಳ ಕೃಪೆಯಿಂದ ಧನ-ಸಂಪತ್ತು ಕೂಡ ಹೆಚ್ಚಾಗುತ್ತದೆ ಎನ್ನಲಾಗಿದೆ. ಹಾಗಾದರೆ ಬನ್ನಿ ಯಾವ ಕೆಲಸಗಳಲ್ಲಿ ಹಣ ವೆಚ್ಚ ಮಾಡಲು ಹಿಂದೇಟು ಹಾಕಬಾರದು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ, 

 

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

 

ಇದನ್ನೂ ಓದಿ-ತುಳಸಿ ಪೂಜೆ ಮಾಡುವಾಗ ಈ ಸಣ್ಣ ಕೆಲಸ ಮಾಡಿದರೆ ಮನೆಯಲ್ಲಿ ಶಾಶ್ವತವಾಗಿ ನೆಲೆಸುತ್ತಾಳೆ ಲಕ್ಷ್ಮೀ

 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

1. ಯಾವುದೇ ಅನಾರೋಗ್ಯದಿಂದ ಬಳಲುತ್ತಿರುವ ವ್ಯಕ್ತಿಯ ಸಹಾಯ ಮಾಡುವಲ್ಲಿ ಹಿಂಜರಿಯಬಾರದು. ಅನಾರೋಗ್ಯದಿಂದ ಬಳಲುತ್ತಿರುವ ವ್ಯಕ್ತಿಗೆ ಸಹಾಯ ಮಾಡುವುದರಿಂದ ಸಾಕಷ್ಟು ಪುಣ್ಯ ಪ್ರಾಪ್ತಿಯಾಗುತ್ತದೆ. ಇಂತಹ ವ್ಯಕ್ತಿಗೆ ಅನಾರೋಗ್ಯದಿಂದ ಬಳಲುವ ವ್ಯಕ್ತಿಯ ಆಶೀರ್ವಾದ ಲಭಿಸುತ್ತದೆ ಹಾಗೂ ದೇವರು ಕೂಡ ಆತನ ಮೇಲೆ ಪ್ರಸನ್ನನಾಗುತ್ತಾನೆ ಎನ್ನಲಾಗುತ್ತದೆ.

2 /5

2. ಬಡ ಜನರಿಗಾಗಿ ಅನ್ನ-ನೀರಿನ ವ್ಯವಸ್ಥೆ ಮಾಡುವಲ್ಲಿ ಎಂದಿಗೂ ಕೂಡ ಹಿಂಜರಿಯಬಾರದು ಎನ್ನಲಾಗಿದೆ. ಬಡ ಜನರಿಗೆ ಅನ್ನ-ನೀರು ನೀಡುವುದು ಪುಣ್ಯದ ಕೆಲಸವಾಗಿದೆ. ಯಾವಾಗಲು ಇಂತಹ ಕೆಲಸಗಳಲ್ಲಿ ಕೈ ಬಿಚ್ಚಿ ದಾನ ಮಾಡಬೇಕು ಎನ್ನಲಾಗುತ್ತದೆ.

3 /5

3. ಬಡವರ ಮಕ್ಕಳ ಶಿಕ್ಷಣಕ್ಕೆ ಯಾವಾಗಲು ಎರಡು ಕೈಗಳಿಂದ ದಾನ ಮಾಡಬೇಕು. ಇದರಿಂದ ದೇಶಕ್ಕೆ ಓರ್ವ ವಿದ್ಯಾವಂತ ನಾಗರಿಕ ಸಿಗುತ್ತಾನೆ ಹಾಗೂ ಆ ಮಗುವಿನ ಜೀವನ ಮಟ್ಟ ಕೂಡ ಸುಧಾರಿಸುತ್ತದೆ. ವಿದ್ಯಾ ದಾನಕ್ಕೆ ಧರ್ಮಶಾಸ್ತ್ರಗಳಲ್ಲಿಯೂ ಕೂಡ ತುಂಬಾ ಪ್ರಾಮುಖ್ಯತೆಯನ್ನು ನೀಡಲಾಗಿದೆ.

4 /5

4. ಸಾಮಾಜಿಕ ಕೆಲಸ ಕಾರ್ಯಗಳಲ್ಲಿಯೂ ಕೂಡ ಕೈಬಿಚ್ಚಿ ಹಣ ಖರ್ಚು ಮಾಡಬೇಕು. ಶಾಲೆ-ಆಸ್ಪತ್ರೆಗಳ ನಿರ್ಮಾಣವೇ ಆಗಲಿ ಅಥವಾ ಇತರ ಯಾವುದಾದರೊಂದು ಒಳ್ಳೆಯ ಕೆಲಸವೇ ಆಗಲಿ. ಇದರಲ್ಲಿ ಸಮಾಜದ ಜನರ ಒಳಿತು ಅಡಗಿರುತ್ತದೆ ಮತ್ತು ಸಮಾಜದ ಜನರ ದೃಷ್ಟಿಯಲ್ಲಿ ನಿಮ್ಮ ಘನತೆ ಗೌರವ ಹೆಚ್ಚಾಗುತ್ತದೆ.

5 /5

5. ಧಾರ್ಮಿಕ ಕೆಲಸ ಕಾರ್ಯಗಳಲ್ಲಿಯೂ ಕೂಡ ಮನಬಿಚ್ಚಿ ಖರ್ಚು ಮಾಡಬೇಕು. ದೇವಸ್ಥಾನದ ನಿರ್ಮಾಣವೇ ಆಗಲಿ ಅಥವಾ ಯಾವುದಾದರೊಂದು ಯಜ್ಞದ ಅನುಷ್ಠಾನವೆ ಆಗಲಿ, ನಿಮ್ಮ ನಗರಕ್ಕೆ ಆಗಮಿಸಿದ ಸಂತರ ಸೇವೆಗಾಗಿ ಹಣ ವೆಚ್ಚ ಮಾಡಲು ಎಂದಿಗೂ ಕೂಡ ಹಿಂಜರಿಯಬೇಡಿ. ಇದರಿಂದ ತುಂಬಾ ಪುಣ್ಯ ಪ್ರಾಪ್ತಿಯಾಗುತ್ತದೆ.