ಈ ಹೂವುಗಳು ಸೌಂದರ್ಯಕ್ಕಷ್ಟೇ ಅಲ್ಲ, ಹಲವು ರೋಗಗಳಿಗೆ ರಾಮಬಾಣವೂ ಹೌದು.!


Benefits Of Flowers: ಈ ಹೂವುಗಳು ನೋಡಲು ಸುಂದರವಾಗಿರುವುದು ಮಾತ್ರವಲ್ಲ ಕೆಲವು ರೋಗಗಳಿಗೆ ರಾಮಬಾಣವಾಗಿದೆ. 
 

Benefits Of Flowers: ಸಾಮಾನ್ಯವಾಗಿ ಅಲಂಕಾರ, ಪೂಜೆ ಅಥವಾ ಯಾವುದೇ ಸಮಾರಂಭಗಳಲ್ಲಿ ಹೂವುಗಳನ್ನು ಬಳಸುತ್ತೇವೆ. ಆದರೆ, ಅನೇಕ ಹೂವುಗಳು ಔಷಧೀಯ ಗುಣಗಳಿಂದ ತುಂಬಿರುತ್ತವೆ. ಈ ಗುಣಗಳ ಮೂಲಕ ಅನೇಕ ರೋಗಗಳನ್ನು ಗುಣಪಡಿಸುತ್ತವೆ. ಈ ಹೂವುಗಳು ನೋಡಲು ಸುಂದರವಾಗಿರುವುದು ಮಾತ್ರವಲ್ಲ ಕೆಲವು ರೋಗಗಳಿಗೆ ರಾಮಬಾಣವಾಗಿದೆ.  ಅವುಗಳನ್ನು ಸೇವಿಸಿದರೆ ಹಲವಾರು ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ಲ್ಯಾವೆಂಡರ್ ಬಹಳ ಪರಿಮಳಯುಕ್ತ ಹೂವು. ಅದನ್ನು ಸೇವಿಸಿದರೆ, ಸ್ನಾಯುವಿನ ಒತ್ತಡವನ್ನು ತೆಗೆದುಹಾಕಬಹುದು ಮತ್ತು ಸೋಂಕಿನಿಂದ ಕೂಡಾ ಇದು ನಮ್ಮನ್ನು  ರಕ್ಷಿಸುತ್ತದೆ. ಈ ಹೂವು ನಮ್ಮ ಕೂದಲಿಣ ಆರೋಗ್ಯಕ್ಕೂ ಪ್ರಯೋಜನಕಾರಿ. 

2 /5

ದಾಸವಾಳದ ಹೂವನ್ನು ತಿನ್ನುವುದರಿಂದ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸಬಹುದು. ಗರ್ಭಿಣಿಯರಿಗೂ ಇದು ಪ್ರಯೋಜನಕಾರಿಯಾಗಿದೆ. ಈ ಹೂವಿನಲ್ಲಿ ಆಂಟಿ-ಆಕ್ಸಿಡೆಂಟ್ ಗುಣಗಳಿದ್ದು, ಇದರ ಮೂಲಕ ಕೊಲೆಸ್ಟ್ರಾಲ್ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಬಹುದು.  

3 /5

 ಗೊಂಡೆ ಹೂವು ಅಥವಾ ಚೆಂಡು ಹೂವು ಸಾಮಾನ್ಯವಾಗಿ ಚಳಿಗಾಲದಲ್ಲಿ ಬೆಳೆಯುತ್ತದೆ. ಇದು ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದ್ದು, ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. 

4 /5

ಗುಲಾಬಿಯಲ್ಲಿ ಅನೇಕ ರೀತಿಯ ಆಂಟಿ-ಆಕ್ಸಿಡೆಂಟ್ ಗುಣಲಕ್ಷಣಗಳು ಕಂಡುಬರುತ್ತವೆ, ಜೊತೆಗೆ ಇದು ವಿಟಮಿನ್‌ಗಳ ಸಮೃದ್ಧ ಮೂಲವಾಗಿದೆ. ಇದರ ಬಳಕೆಯು ಆಹಾರದ ರುಚಿಯನ್ನು ಹೆಚ್ಚಿಸುವುದಲ್ಲದೆ, ಅನೇಕ ರೋಗಗಳ ಅಪಾಯವನ್ನು ಕಡಿಮೆ ಮಾಡುತ್ತದೆ.

5 /5

 ಸದಾ ಪುಷ್ಪಾ ಹೂವುಗಳು ಮಧುಮೇಹ ರೋಗಿಗಳಿಗೆ ವರದಾನವೇ ಸರಿ. ಈ ಹೂವುಗಳಲ್ಲಿ ಮಧುಮೇಹ ವಿರೋಧಿ ಗುಣಗಳು ಕಂಡುಬರುತ್ತವೆ. ಈ ಹೂವುಗಳನ್ನು ಒಂದು ಕಪ್ ನೀರಿನಲ್ಲಿ ಕುದಿಸಿ ಫಿಲ್ಟರ್ ಮಾಡಿ,  ಪ್ರತಿನಿತ್ಯ ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ರಕ್ತದಲ್ಲಿನ ಸಕ್ಕರೆ ಅಂಶವು ನಿಯಂತ್ರಣದಲ್ಲಿರುತ್ತದೆ.