Chanakya Niti : ಆಚಾರ್ಯ ಚಾಣಕ್ಯರು ನೀಡಿದ ನೀತಿಗಳ ಪ್ರಕಾರ, ಒಬ್ಬ ವ್ಯಕ್ತಿಯು ನಡೆದರೆ ಅವನು ಎಲ್ಲಾ ಪರಿಸ್ಥಿತಿಯಲ್ಲಿ ಯಶಸ್ವಿಯಾಗುತ್ತಾನೆ. ಅಂತಹ ವ್ಯಕ್ತಿಯು ಒಳ್ಳೆಯದು ಮತ್ತು ಕೆಟ್ಟದ್ದನ್ನು ಅರ್ಥಮಾಡಿಕೊಳ್ಳುತ್ತಾನೆ ಮತ್ತು ಜನರನ್ನು ಹೇಗೆ ನಿರ್ಣಯಿಸಬೇಕೆಂದು ತಿಳಿದಿರುತ್ತಾನೆ.
Chanakya Niti : ಆಚಾರ್ಯ ಚಾಣಕ್ಯರು ನೀಡಿದ ನೀತಿಗಳ ಪ್ರಕಾರ, ಒಬ್ಬ ವ್ಯಕ್ತಿಯು ನಡೆದರೆ ಅವನು ಎಲ್ಲಾ ಪರಿಸ್ಥಿತಿಯಲ್ಲಿ ಯಶಸ್ವಿಯಾಗುತ್ತಾನೆ. ಅಂತಹ ವ್ಯಕ್ತಿಯು ಒಳ್ಳೆಯದು ಮತ್ತು ಕೆಟ್ಟದ್ದನ್ನು ಅರ್ಥಮಾಡಿಕೊಳ್ಳುತ್ತಾನೆ ಮತ್ತು ಜನರನ್ನು ಹೇಗೆ ನಿರ್ಣಯಿಸಬೇಕೆಂದು ತಿಳಿದಿರುತ್ತಾನೆ. ಇವರು ಯಾವುದೇ ಪರಿಸ್ಥಿತಿಗೆ ಹೇಗೆ ಹೊಂದಿಕೊಳ್ಳಬೇಕೆಂದು ಗೊತ್ತಿರುತ್ತದೆ. ಆಚಾರ್ಯ ಚಾಣಕ್ಯರು ಯಶಸ್ಸು, ಮೋಸ, ವೈವಾಹಿಕ ಜೀವನ, ಸನ್ನಿವೇಶಗಳ ಬಗ್ಗೆ ಅನೇಕ ವಿಷಯಗಳನ್ನು ಹೇಳಿದ್ದಾರೆ. ಇಂದು ಕೆಲ ಅಭ್ಯಾಸಗಳ ಬಗ್ಗೆ ನಾವು ಮಾಹಿತಿ ತಂದಿಡಿದ್ದೆವೆ. ಅವುಗಳನನ್ನು ಅನುಸರಿಸಿ ಯಶಸ್ಸನ್ನು ಸುಲಭವಾಗಿ ಸಾಧಿಸಬಹುದು.
ಆಚಾರ್ಯ ಚಾಣಕ್ಯರು ತಮ್ಮ ನೀತಿಶಾಸ್ತ್ರದಲ್ಲಿ ಅಂತಹ ಕೆಲವು ನೀತಿಗಳನ್ನು ಉಲ್ಲೇಖಿಸಿದ್ದಾರೆ, ಅದನ್ನು ಅಳವಡಿಸಿಕೊಳ್ಳುವ ಮೂಲಕ ಮನುಷ್ಯನು ಯಶಸ್ಸನ್ನು ಸಾಧಿಸಬಹುದು. ಈ ವಿಷಯಗಳನ್ನು ಅನುಸರಿಸುವ ಮೂಲಕ, ಒಬ್ಬ ವ್ಯಕ್ತಿಯು ಯಾವಾಗಲೂ ಯಶಸ್ಸಿನ ಏಣಿಯನ್ನು ಏರಲು ಪ್ರಾರಂಭಿಸುತ್ತಾನೆ.
ಪ್ರತಿಯೊಬ್ಬರೂ ಕೆಟ್ಟ ಸಮಯಕ್ಕೆ ಹೆದರುತ್ತಾರೆ. ಜಗತ್ತಿನಲ್ಲಿ ಯಾವ ವ್ಯಕ್ತಿಯೂ ತನಗೆ ಕೆಟ್ಟ ಸಮಯ ಬರುವುದನ್ನು ಇಷ್ಟಪಡುವುದಿಲ್ಲ. ಇದಕ್ಕಾಗಿ ಆಚಾರ್ಯ ಚಾಣಕ್ಯರ ನೀತಿಗಳು ಪರಿಣಾಮಕಾರಿಯಾಗಬಲ್ಲವು. ಚಾಣಕ್ಯನ ಪ್ರಕಾರ, ಅವನ ಕೆಲವು ಅಭ್ಯಾಸಗಳಲ್ಲಿ ಸ್ವಲ್ಪ ಬದಲಾವಣೆಯನ್ನು ಮಾಡಿದರೆ, ಒಬ್ಬ ವ್ಯಕ್ತಿಯು ಯಾವಾಗಲೂ ಯಶಸ್ಸಿನ ಮೆಟ್ಟಿಲುಗಳನ್ನು ಏರುತ್ತಾ ಹೋಗುತ್ತಾನೆ.
ಚಾಣಕ್ಯ ನೀತಿಯ ಪ್ರಕಾರ, ಮನುಷ್ಯನಲ್ಲಿ ತಾಳ್ಮೆಯನ್ನು ಹೊಂದಿರುವುದು ಅತ್ಯಂತ ಮುಖ್ಯವಾದ ವಿಷಯವಾಗಿದೆ. ಯಾವುದೇ ಸವಾಲು ಮತ್ತು ಪರಿಸ್ಥಿತಿ ಬಂದರೂ ಅದನ್ನು ತಾಳ್ಮೆಯಿಂದ ಎದುರಿಸಿದರೆ ಸುಲಭವಾಗಿ ಜಯಿಸಬಹುದು.
ಒಬ್ಬ ವ್ಯಕ್ತಿಯು ಭಯಭೀತರಾಗಿ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾನೆ ಮತ್ತು ನಂತರ ತನ್ನ ಉಳಿದ ಜೀವನಕ್ಕಾಗಿ ಪಶ್ಚಾತ್ತಾಪ ಪಡಬೇಕಾಗುತ್ತದೆ. ಜೀವನದಲ್ಲಿ ಸುಖ ದುಃಖಗಳು ಬರುತ್ತಲೇ ಇರುತ್ತವೆ. ಹಾಗಾಗಿ, ಒಬ್ಬ ವ್ಯಕ್ತಿಯು ಯಾವಾಗಲೂ ತನ್ನ ಭಯವನ್ನು ನಿಯಂತ್ರಿಸಬೇಕು. ಆತಂಕವಿಲ್ಲದೆ ಪರಿಸ್ಥಿತಿಯನ್ನು ಎದುರಿಸಬೇಕು.
ಯಾವುದೇ ಕೆಲಸವನ್ನು ಮಾಡುವ ಮೊದಲು ಪ್ಲಾನ್ ಮಾಡಿದರೆ, ಆ ವ್ಯಕ್ತಿಯು ಎಂದಿಗೂ ವಿಫಲವಾಗುವುದಿಲ್ಲ. ಹೀಗಾಗಿ, ಭವಿಷ್ಯದ ಯೋಜನೆಗಳನ್ನು ಜೀವನದ ಪ್ರತಿ ಹಂತದಲ್ಲೂ ಮಾಡಬೇಕು. ಇದರೊಂದಿಗೆ, ಒಬ್ಬ ವ್ಯಕ್ತಿಯು ಎಲ್ಲಾ ಸವಾಲನ್ನು ಸುಲಭವಾಗಿ ಎದುರಿಸಬಹುದು.