Chanakya Niti For Husband-Wife: ವೈವಾಹಿಕ ಜೀವನ ಮತ್ತು ಗಂಡ - ಹೆಂಡತಿಯ ನಡುವಿನ ಸಂಬಂಧವು ಯಾವಾಗಲೂ ಪರಸ್ಪರರ ಹೊಂದಾಣಿಕೆಯ ಮೇಲೆ ಅವಲಂಭಿಸಿರುತ್ತದೆ. ವೈವಾಹಿಕ ಜೀವನವನ್ನು ಸುಖಮಯವಾಗಿಸಲು ಚಾಣಕ್ಯ ನೀತಿಯಲ್ಲಿ ಅನೇಕ ಸಂಗತಿಗಳನ್ನು ಉಲ್ಲೇಖಿಸಲಾಗಿದೆ.
Husband-Wife Chanakya Niti: ವಿವಾಹ ನಂತರದ ಜೀವನವನ್ನು ಸುಖಮಯವಾಗಿಸಲು ಆಚಾರ್ಯ ಚಾಣಕ್ಯರು ಕೆಲ ವಿಶೇಷ ಸಂಗತಿಗಳನ್ನು ಹೇಳಿದ್ದಾರೆ ಮತ್ತು ಇದಕ್ಕಾಗಿ ಪತಿ ಪತ್ನಿಯರು ನಿತ್ಯ ಮಾಡಲೇಬೇಕಾದ 4 ಕೆಲಸಗಳನ್ನು ಹೇಳಿದ್ದಾರೆ.
ಇದನ್ನೂ ಓದಿ-Garuda Purana: ಯೋಗ್ಯ ಸಂತಾನ ಪಡೆಯುವ ಮಾರ್ಗವೇನು? ಯಾವ ದಿನಗಳು ಗರ್ಭಧಾರಣೆಗೆ ಉತ್ತಮ?
(ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ವೈವಾಹಿಕ ಜೀವನ ಮತ್ತು ಗಂಡ - ಹೆಂಡತಿಯ ನಡುವಿನ ಸಂಬಂಧವು ಯಾವಾಗಲೂ ಪರಸ್ಪರರ ಹೊಂದಾಣಿಕೆಯ ಮೇಲೆ ಅವಲಂಭಿಸಿರುತ್ತದೆ. ವೈವಾಹಿಕ ಜೀವನವನ್ನು ಸುಖಮಯವಾಗಿಸಲು ಚಾಣಕ್ಯ ನೀತಿಯಲ್ಲಿ ಅನೇಕ ಸಂಗತಿಗಳನ್ನು ಉಲ್ಲೇಖಿಸಲಾಗಿದೆ. ಪತಿ-ಪತ್ನಿಯರ ನಡುವೆ ಸಮನ್ವಯತೆಯ ಕೊರತೆ ಇದ್ದಾಗ, ಪರಸ್ಪರ ಕಲಹ ಉಂಟಾಗಿ ಸಂಬಂಧದಲ್ಲಿ ಬಿರುಕು ಕಾಣಿಸಿಕೊಳ್ಳಲು ಆರಂಭಿಸುತ್ತದೆ ಎಂದು ಶ್ರೇಷ್ಠ ವಿದ್ವಾಂಸ, ಅರ್ಥಶಾಸ್ತ್ರಜ್ಞ, ಮುತ್ಸದ್ದಿ ಆಚಾರ್ಯ ಚಾಣಕ್ಯ ಹೇಳಿದ್ದಾರೆ. ಚಾಣಕ್ಯರು ತನ್ನ ನೀತಿಯಲ್ಲಿ 4 ವಿಶೇಷ ಸಂಗತಿಗಳ ಕುರಿತು ಉಲ್ಲೇಖಿಸಿದ್ದು, ಸಂಬಂಧವನ್ನು ಸುಧಾರಿಸಲು ಪತಿ ಪತ್ನಿಯರು ಪತಿಯರು ಅವುಗಳನ್ನು ಚಾಚುತಪ್ಪದೆ ಅನುಸರಿಸಬೇಕು ಎಂದಿದ್ದಾರೆ.
ಆಚಾರ್ಯ ಚಾಣಕ್ಯರ ಪ್ರಕಾರ ಪತಿ ಪತ್ನಿಯರು ತಮ್ಮ ಖಾಸಗಿ ವಿಷಯಗಳನ್ನು ಯಾರೊಂದಿಗೂ ಹಂಚಿಕೊಳ್ಳಬಾರದು ಎಂದು ಹೇಳಿದ್ದಾರೆ. ಚಾಣಕ್ಯ ನೀತಿಯ ಪ್ರಕಾರ, ತಮ್ಮ ನಡುವಿನ ವಿಷಯಗಳನ್ನು ಉಭಯರ ಮಟ್ಟಕ್ಕೆ ಸೀಮಿತವಾಗಿರಿಸಿಕೊಳ್ಳುವ ಪತಿ-ಪತ್ನಿಯರು ಯಾವಾಗಲೂ ಸಂತೋಷವಾಗಿರುತ್ತಾರೆ, ಆದ್ದರಿಂದ ಪತಿ-ಪತ್ನಿ ಕೂಡ ಈ ಬಗ್ಗೆ ಕಾಳಜಿ ವಹಿಸಬೇಕು ಮತ್ತು ಯಾವುದೇ ಮೂರನೇ ವ್ಯಕ್ತಿಗೆ ವೈಯಕ್ತಿಕ ವಿಷಯಗಳನ್ನು ಹೇಳಬಾರದು. ಯಾವುದೇ ಮೂರನೇ ವ್ಯಕ್ತಿಯೊಂದಿಗೆ ತಮ್ಮ ಮಾತುಗಳನ್ನು ಹಂಚಿಕೊಂಡರೆ ಪತಿ-ಪತ್ನಿಯರ ನಡುವಿನ ಸಂಬಂಧದಲ್ಲಿ ಬಿರುಕು ಉಂಟಾಗುತ್ತದೆ.
ದಾಂಪತ್ಯ ಜೀವನ ಸುಖಮಯವಾಗಿರಲು ಪತಿ-ಪತ್ನಿಯರು ಯಾವತ್ತೂ ಒಬ್ಬರಿಗೊಬ್ಬರು ಅಹಂಕಾರ ತೋರಬಾರದು ಎಂದು ಚಾಣಕ್ಯ ನೀತಿಯಲ್ಲಿ ಹೇಳಲಾಗಿದೆ. ಆಚಾರ್ಯ ಚಾಣಕ್ಯರ ಪ್ರಕಾರ ವೈವಾಹಿಕ ಜೀವನದಲ್ಲಿ ಪತಿ-ಪತಿ ಇಬ್ಬರೂ ಕೂಡ ಬಂಡಿಯ ಎರಡು ಚಕ್ರಗಳಿದ್ದಂತೆ, ಎರಡೂ ಚಕ್ರಗಳಲ್ಲಿ ಹೊಂದಾಣಿಕೆ ಇದ್ದಾಗ ಮಾತ್ರ ಗಾಡಿ ಸರಾಗವಾಗಿ ಮುಂದಕ್ಕೆ ಸಾಗುತ್ತದೆ. ಇವೆರಡರಲ್ಲಿ ಯಾವುದಾದರೊಂದು ಗಾಲಿಗೆ ಅಹಂಕಾರವಿದ್ದರೆ ಸಂಬಂಧದಲ್ಲಿ ಬಿರುಕು ಮೂಡಬಹುದು.
ಆಚಾರ್ಯ ಚಾಣಕ್ಯರ ಪ್ರಕಾರ, ಯಾವುದೇ ಸಂಬಂಧದ ಗಟ್ಟಿತನಕ್ಕೆ ಪರಸ್ಪರರನ್ನು ಗೌರವಿಸುವುದು ತುಂಬಾ ಮುಖ್ಯ ಮತ್ತು ಇಬ್ಬರ ನಡುವೆ ಪ್ರೀತಿ ಮತ್ತು ಗೌರವ ಇದ್ದಾಗ ಮಾತ್ರ ಪತಿ-ಪತ್ನಿಯರ ನಡುವಿನ ಸಂಬಂಧವೂ ಗಟ್ಟಿಯಾಗುತ್ತದೆ. ಆದ್ದರಿಂದಲೇ ಚಾಣಕ್ಯನೀತಿಯಲ್ಲಿ ಪತಿ-ಪತ್ನಿ ಸದಾ ಪರಸ್ಪರ ಗೌರವವನ್ನು ನೀಡಬೇಕು ಎಂದು ಹೇಳಲಾಗಿದೆ. ಹೀಗೆ ಮಾಡುವುದರಿಂದ ಪತಿ-ಪತ್ನಿಯರ ಸಂಬಂಧದಲ್ಲಿ ಯಾವತ್ತೂ ಬಿರುಕು ಉಂಟಾಗುವುದಿಲ್ಲ.
ಚಾಣಕ್ಯ ನೀತಿಯ ಪ್ರಕಾರ, ಜನರು ಜೀವನದಲ್ಲಿ ಅನೇಕ ಸಂದರ್ಭಗಳು ಎದುರಾಗುತ್ತವೆ, ಆದರೆ ಎಲ್ಲಾ ಸಂದರ್ಭಗಳಲ್ಲಿ ತಾಳ್ಮೆಯಿಂದ ಕೆಲಸ ಮಾಡುವವರ ಜೀವನವು ಯಶಸ್ವಿಯಾಗುತ್ತದೆ. ಆಚಾರ್ಯ ಚಾಣಕ್ಯರು ಪತಿ-ಪತ್ನಿಯರು ನೆಮ್ಮದಿಯಿಂದ ಜೀವನ ನಡೆಸಲು ತಾಳ್ಮೆಯನ್ನು ಇಟ್ಟುಕೊಳ್ಳಬೇಕು ಎಂದು ಹೇಳಿದ್ದಾರೆ. ಇದು ಪ್ರತಿಕೂಲ ಸಂದರ್ಭಗಳಲ್ಲಿಯೂ ಜೀವನವನ್ನು ಮುನ್ನಡೆಸುವಲ್ಲಿ ಯಶಸ್ಸನ್ನು ನೀಡುತ್ತದೆ.